ಸಾರಾಂಶ
ಗೌರಿಬಿದನೂರು: ಮಂಚೇನಹಳ್ಳಿ ಹೋಬಳಿಯ ರಾಯನಕಲ್ಲು ಗ್ರಾಮದ ಯುವಕ ಬಾನುಪ್ರಸಾದ್ ರೆಡ್ಡಿ(22) ಸೈಕಲ್ ಸವಾರಿ ಮೂಲಕ ಉತ್ತರ ಪ್ರದೇಶದಲ್ಲಿರುವ ಅಯೋಧ್ಯೆ ರಾಮ ಮಂದಿರದ ದರ್ಶನಕ್ಕೆ ತೆರಳಿದರು.
ಅವರನ್ನು ಮಾರ್ಗ ಮಧ್ಯೆ ಡಿ.ಪಾಳ್ಯ ಗ್ರಾಮದಲ್ಲಿ ರಾಮ ಭಕ್ತರು,ವಿಶ್ವ ಹಿಂದೂ ಪರಿಷತ್ ಮತ್ತು ಭಾರತೀಯ ಜನತಾ ಪಕ್ಷದ ಕಾರ್ಯಕರ್ತರು ಹಾಗೂ ಗ್ರಾಮಸ್ಥರು ಬರಮಾಡಿಕೊಂಡರು. ಗ್ರಾಮದ ಆಂಜನೇಯ ಸ್ವಾಮಿ ದೇವಸ್ಥಾನ ಹಾಗೂ ಸಾಯಿಬಾಬ ಮಂದಿರದಲ್ಲಿ ಪೂಜೆ ಸಲ್ಲಿಸಿ ಶುಭಕೋರಿ ಬೀಳ್ಕೊಟ್ಟರು.
ವಿಶ್ವ ಹಿಂದೂ ಪರಿಷತ್ ನ ಸಾಗಾನಹಳ್ಳಿ ಶಿವಕುಮಾರ್ ಮಾತನಾಡಿ, ಹನುಮನ ನಾಡಿನಿಂದ ದೂರದ ರಾಮನ ನಾಡಿಗೆ ಸೈಕಲ್ ಸವಾರಿ ಮೂಲಕ ಹೊರಟಿರುವ ಬಾನುಪ್ರಸಾದ್ ರೆಡ್ಡಿಯವರ ಪ್ರವಾಸ ಸುಖಕರವಾಗಿರಲಿ, ಯಾವುದೇ ಅಡ್ಡಿ, ಆತಂಕ ಎದುರಾಗದಂತೆ ಪವನ ಸುತ ಹನುಮಂತನು ಕಾಪಾಡಲಿ ಎಂದರು.
ಶ್ರೀ ಶಿರಡಿ ಬಾಬ ಮಂದಿರದ ಧರ್ಮದರ್ಶಿ ಹರೀಶ್, ಮೈಲಪ್ಪ, ಆದಿನಾರಾಯಣಪ್ಪ, ಮಾರುತಿ, ರವಿ, ಶ್ರೀನಿವಾಸ್ ಕಲ್ಯಾಣ್, ರಮೇಶ್ ,ಶಶಿಧರ್, ವಿಶ್ವ, ರಾಘವೇಂದ್ರ , ವಿಶ್ವ ಹಿಂದೂ ಪರಿಷತ್ತಿನ ರಮೇಶ್ ಬಾಬು,ಸುಧಾಕರ್ ರೆಡ್ಡಿ, ಭಾಸ್ಕರ್ ,ದಂಡಿಗಾನಹಳ್ಳಿ ರಮೇಶ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.