ಗೋಕರ್ಣದಲ್ಲಿ ಭಾರತೀಯ ಯುವಕನ ಮದುವೆಯಾದ ಫ್ರಾನ್ಸ್‌ನ ಯುವತಿ

| Published : Jan 25 2025, 01:00 AM IST

ಗೋಕರ್ಣದಲ್ಲಿ ಭಾರತೀಯ ಯುವಕನ ಮದುವೆಯಾದ ಫ್ರಾನ್ಸ್‌ನ ಯುವತಿ
Share this Article
  • FB
  • TW
  • Linkdin
  • Email

ಸಾರಾಂಶ

ಮುಖ್ಯ ಕಡಲತೀರದಲ್ಲಿನ ರೆಸಾರ್ಟ್‌ವೊಂದರ ನೌಕರ ಹಿಮಾಚಲ ಪ್ರದೇಶದ ದಿನೇಶಕುಮಾರ ಅವರು ಫ್ರಾನ್ಸ್‌ ದೇಶದ ಕ್ಲಾರಿಷ್ ರಿಚ್ ಜತೆ ಸಪ್ತಪದಿ ತುಳಿದರು.

ಗೋಕರ್ಣ: ಭಾರತೀಯ ಯುವಕನ ಜತೆ ವಿದೇಶಿ ಯುವತಿ ಸಪ್ತಪದಿ ತುಳಿಯುವುದರ ಮೂಲಕ ಗಮನ ಸೆಳೆದಿದ್ದಾರೆ.

ಇಲ್ಲಿನ ಮುಖ್ಯ ಕಡಲತೀರದ ಬಳಿ ಇರುವ ಶ್ರೀರಾಮ ಸೀತಾ ಲಕ್ಷ್ಮಣ ಮಂದಿರದಲ್ಲಿ ವಿದೇಶಿ ಯುವತಿಯೊಬ್ಬರು ಹಿಮಾಚಲ ಪ್ರದೇಶ ಮೂಲದ ಯುವಕನೊಂದಿಗೆ ಗುರುವಾರ ಹಿಂದೂ ಪದ್ಧತಿಯಂತೆ ವಿವಾಹವಾದರು.

ಮುಖ್ಯ ಕಡಲತೀರದಲ್ಲಿನ ರೆಸಾರ್ಟ್‌ವೊಂದರ ನೌಕರ ಹಿಮಾಚಲ ಪ್ರದೇಶದ ದಿನೇಶಕುಮಾರ ಅವರು ಫ್ರಾನ್ಸ್‌ ದೇಶದ ಕ್ಲಾರಿಷ್ ರಿಚ್ ಜತೆ ಸಪ್ತಪದಿ ತುಳಿದರು.

ಫ್ರಾನ್ಸ್‌ ದೇಶದ ಕ್ಲಾರಿಷ್ ರಿಚ್‌ ಎಂಬ ಯುವತಿ ಇತ್ತೀಚೆಗೆ ಭಾರತಕ್ಕೆ ಪ್ರವಾಸಕ್ಕಾಗಿ ಆಗಮಿಸಿದ್ದರು. ಕೆಲವು ದಿನಗಳ ಹಿಂದೆ ಗೋಕರ್ಣದ ಮುಖ್ಯ ಕಡಲತೀರದಲ್ಲಿರುವ ರೆಸಾರ್ಟ್‌ಗೆ ಬಂದಿದ್ದರು. ಆಗ ಅಲ್ಲಿ ಕೆಲಸ ಮಾಡುವ ದಿನೇಶಕುಮಾರ ಅವರ ಪರಿಚಯವಾಗಿದೆ. ಕೆಲ ದಿನಗಳಲ್ಲಿ ಇಬ್ಬರ ನಡುವೆ ಪ್ರೇಮಾಂಕುರವಾಗಿದೆ. ಹೀಗಾಗಿ ಪರಸ್ಪರ ಪ್ರೀತಿಸಿ ಮದುವೆಯಾಗಲು ನಿಶ್ಚಯಿಸಿದ್ದರು.

ಭಾರತೀಯ ಸಂಸ್ಕೃತಿ ಇಷ್ಟ: ನಾನು ಭಾರತದ ಸಂಸ್ಕೃತಿ ಜತೆ ಭಾರತೀಯ ಯುವಕನನ್ನು ಇಷ್ಟಪಟ್ಟಿದ್ದು, ಇಂದು ಮದುವೆಯಾಗಿದ್ದೇವೆ ಎಂದು ಯುವತಿ ಸಂತೋಷವನ್ನು ಹಂಚಿಕೊಂಡರು. ವೇ. ಪ್ರಕಾಶ ಅಂಬೇಕರ, ಸತ್ಯಾನಂದ ಅಂಬೇಕರ ವಿವಾಹ ಕಾರ್ಯ ನೆರವೇರಿಸಿದರು.ಜಾನುವಾರು ಕಳ್ಳತನ ಮಾಡಿದ್ದ ಮೂವರು ಆರೋಪಿಗಳ ಸೆರೆ

ಹೊನ್ನಾವರ: ತಾಲೂಕಿನ ಗ್ರಾಮೀಣ ಪ್ರದೇಶದಲ್ಲಿ ಜಾನುವಾರುಗಳ ಕಳ್ಳತನಕ್ಕೆ ಸಂಬಂಧಿಸಿದಂತೆ ಮೂವರನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಆರೋಪಿಗಳಿಗೆ ಕುಮಟಾ ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ.ತಾಲೂಕಿನ ಹೆರಂಗಡಿಯ ಅಲ್ತಾಪ್ ಅಹಮ್ಮದ್, ಮತೀನ್ ಅಹಮ್ಮದ್, ಹೆರಂಗಡಿ, ಕುರ್ವಾದ ಮಹಮ್ಮದ್ ಹುಸೇನ್ ಅಬ್ಬಾಸ ಎಂಬವರೇ ಬಂಧಿತ ಆರೋಪಿಗಳು.ತಾಲೂಕಿನ ಸಾಲ್ಕೋಡ, ಕೊಂಡಾಕುಳಿ, ಹೊಸಾಕುಳಿ ಮತ್ತು ಕವಲಕ್ಕಿ ಭಾಗಗಳಲ್ಲಿ ಜಾನುವಾರುಗಳ ಕಳ್ಳತನ ಆಗಿರುವ ಬಗ್ಗೆ ಜ. 22ರಂದು ಹೊನ್ನಾವರ ಪೊಲೀಸ್ ಠಾಣೆಯಲ್ಲಿ ದಾಖಲಾಗಿತ್ತು. ಆರೋಪಿಗಳ ಪತ್ತೆಗಾಗಿ ಪೊಲೀಸರು ಜಾಲ ಬೀಸಿದ್ದರು. ಮೂವರು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಎಸ್‌ಪಿ ನಾರಾಯಣ ಎಂ., ಹೆಚ್ಚುವರಿ ಪೊಲೀಸ್ ಅಧೀಕ್ಷಕ ಎಂ. ಜಗದೀಶ್, ಭಟ್ಕಳ ಡಿವೈಎಸ್‌ಪಿ ಮಹೇಶ ಕೆ. ಅವರ ಮಾರ್ಗದರ್ಶನದಲ್ಲಿ ಹೊನ್ನಾವರ ಸಿಪಿಐ ಸಿದ್ದರಾಮೇಶ್ವರ ಎಸ್., ಹೊನ್ನಾವರ ಪಿಎಸ್ಐ ಮಂಜುನಾಥ್ ಅವರ ನೇತೃತ್ವದಲ್ಲಿ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.