ಆರೋಗ್ಯ ತುಮಕೂರು ಅಭಿಯಾನ: 2 ಲಕ್ಷ ಜನರ ತಪಾಸಣೆ

| Published : Jun 13 2024, 12:46 AM IST

ಆರೋಗ್ಯ ತುಮಕೂರು ಅಭಿಯಾನ: 2 ಲಕ್ಷ ಜನರ ತಪಾಸಣೆ
Share this Article
  • FB
  • TW
  • Linkdin
  • Email

ಸಾರಾಂಶ

ಜಿಲ್ಲಾದ್ಯಂತ ಕಳೆದ 2023 ರ ನವೆಂಬರ್‌ನಿಂದ ಹಮ್ಮಿಕೊಂಡಿರುವ ಆರೋಗ್ಯ ತುಮಕೂರು ಅಭಿಯಾನ ಕರ್ಯಾಕ್ರಮದಡಿ ಮನೆ-ಮನೆ ಭೇಟಿ ನೀಡಿ ಈವರೆಗೆ 2,23,000 ಜನರ ಆರೋಗ್ಯ ತಪಾಸಣೆ ಮಾಡಲಾಗಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯವನಿರ್ವಾಹಕ ಅಧಿಕಾರಿ ಜಿ. ಪ್ರಭು ತಿಳಿಸಿದರು.

ಕನ್ನಡಪ್ರಭ ವಾರ್ತೆ ತುಮಕೂರುಜಿಲ್ಲಾದ್ಯಂತ ಕಳೆದ 2023 ರ ನವೆಂಬರ್‌ನಿಂದ ಹಮ್ಮಿಕೊಂಡಿರುವ ಆರೋಗ್ಯ ತುಮಕೂರು ಅಭಿಯಾನ ಕರ್ಯಾಕ್ರಮದಡಿ ಮನೆ-ಮನೆ ಭೇಟಿ ನೀಡಿ ಈವರೆಗೆ 2,23,000 ಜನರ ಆರೋಗ್ಯ ತಪಾಸಣೆ ಮಾಡಲಾಗಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯವನಿರ್ವಾಹಕ ಅಧಿಕಾರಿ ಜಿ. ಪ್ರಭು ತಿಳಿಸಿದರು.

ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶಿಕ್ಷಣ, ಆರೋಗ್ಯ ಪ್ರಗತಿ ಕುರಿತು ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಬುಧವಾರ ಮಾತನಾಡಿದರು. ಜಿಲ್ಲೆಯ ಅಭಿವೃದ್ಧಿಗಾಗಿ ಆರೋಗ್ಯ, ಶಿಕ್ಷಣ ಕಾರ್ಯಕ್ರಮ ಸೇರಿದಂತೆ ಹಲವಾರು ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು. ಜಿಲ್ಲೆಯಲ್ಲಿ 30 ವರ್ಷ ಮೇಲ್ಪಟ್ಟ 2,23,000 ಜನರನ್ನು ಆರೋಗ್ಯ ತಪಾಸಣೆಗೊಳಪಡಿಸಲಾಗಿದೆ. ತಪಾಸಣೆ ವೇಳೆ ಸಂಶಯಾಸ್ಪದವಾಗಿ ಸುಮಾರು 143 ಜನರಲ್ಲಿ ಬಾಯಿ ಕ್ಯಾನ್ಸರ್, 42 ಜನರಲ್ಲಿ ಸ್ತನ ಕ್ಯಾನ್ಸರ್, 64 ಗರ್ಭ ಕಂಠ ಕ್ಯಾನ್ಸರ್ ಇರುವುದನ್ನು ಪತ್ತೆಹಚ್ಚಲಾಗಿದ್ದು, ಪತ್ತೆ ಹಚ್ಚಿರುವ ಸಂಶಯಾಸ್ಪದ ಕ್ಯಾನ್ಸರ್ ರೋಗಿಗಳಿಗೆ ಸೂಕ್ತ ಚಿಕಿತ್ಸೆ ನೀಡಲು ಕ್ರಮ ವಹಿಸಲಾಗಿದೆ ಎಂದರು.ಜಿಲ್ಲೆಯಲ್ಲಿ ನರೇಗಾ ಯೋಜನೆಯಡಿ ಈಗಾಗಲೇ 3200 ಕಾಮಗಾರಿಯನ್ನು ಕೈಗೆತ್ತಿಕೊಂಡಿದ್ದು, ಪ್ರಸಕ್ತ ವರ್ಷ ಈ ಯೋಜನೆಯಡಿ ಮೂಲಭೂತ ಸೌರ್ಯುಗಳ ಕೊರತೆ ಇರುವ ಶಾಲೆಗಳನ್ನು ಗುರುತಿಸಿ ಆಟದ ಮೈದಾನ, ಶೌಚಾಲಯ, ಶಾಲಾ ಆವರಣ ಗೋಡೆ ನಿರ್ಮಾಣ ಕಾಮಗಾರಿಗಳನ್ನು ಕೈಗೊಂಡು ವರ್ಷಾಂತ್ಯದೊಳಗೆ ಎಲ್ಲಾ ಕಾಮಗಾರಿಗಳನ್ನು ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ ಎಂದರು.ಸರ್ಕಾರಿ ಹಾಗೂ ಅನುದಾನಿತ ಶಾಲೆಗಳನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳು ಕಡ್ಡಾಯವಾಗಿ ಭೇಟಿ ಮಾಡಿ ಪರಿಶೀಲನೆ ಮಾಡಬೇಕು. ಪ್ರತೀ ಶಾಲೆಯ ಶಿಕ್ಷಕರ ಕಾರ್ಯಡಕ್ಷಮತೆ ಬಗ್ಗೆ ಮೌಲ್ಯ ಮಾಪನ ಮಾಡಿ ತರಬೇತಿ ನೀಡಬೇಕು. ತಾಲೂಕು ಪಂಚಾಯತಿ ಕಾರ್ಯರ್ವಾಹಕ ಅಧಿಕಾರಿಗಳು ಅನುದಾನಿತ ಶಾಲೆಗಳಿಗೆ ಭೇಟಿ ನೀಡಿ ಪರಿಶೀಲಿಸಿ ಜಿಲ್ಲಾ ಪಂಚಾಯಿತಿಗೆ ವರದಿ ಸಲ್ಲಿಸಬೇಕು ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.ಜಿಲ್ಲೆಯಲ್ಲಿ ಈಗಾಗಲೇ ಹಸಿರು ಗ್ರಾಮ ಅಭಿಯಾನದ ಅಂಗವಾಗಿ 3.38ಕ್ಷ ಸಸಿಗಳನ್ನು ನೆಡುವ ಗುರಿ ಹೊಂದಲಾಗಿದೆ. ಜಿಲ್ಲೆಯಲ್ಲಿರುವ ಸಸ್ಯಕ್ಷೇತ್ರಗಳಲ್ಲಿ ಸುಮಾರು 47 ಜಾತಿಯ 14*20 ಅಳತೆಯ 108792 ಹಾಗೂ 10*16 ಅಳತೆಯ 259760 ಸಸಿ ಸೇರಿ ಒಟ್ಟು 368552 ಸಸಿಗಳನ್ನು ಬೆಳೆಸಲಾಗಿದೆ. ಈ ಸಸಿಗಳನ್ನು ಹಸಿರು ಗ್ರಾಮ ಅಭಿಯಾದಡಿ ಶಾಲಾ ಆವರಣ, ಸರ್ಕಾರಿ ಜಾಗ, ಗೋಮಾಳ, ರಸ್ತೆ ಬದಿ, ಆಸ್ಪತ್ರೆ ಆವರಣಗಳಲ್ಲಿ ನೆಟ್ಟು ಮೂರು ವರ್ಷಗಳ ಕಾಲ ಬೆಳೆಸಲಾಗುವುದು ಎಂದರು. ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ, ಉಪಕಾರ್ಯ ದರ್ಶಿ ಆಡಳಿತ, ಉಪಕಾರ್ಯದರ್ಶಿ ಅಭಿವೃದ್ಧಿ, ವಿವಿಧ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ, ಕ್ಷೇತ್ರ ಶಿಕ್ಷಣಾಧಿಕಾರಿ, ಜಿಲ್ಲಾ ಆರೋಗ್ಯ ಅಧಿಕಾರಿ ಸೇರಿದಂತೆ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿ ಭಾಗಿಯಾಗಿದ್ದರು.