ಸಾರಾಂಶ
ಈಗಾಗಲೇ ಕಾರ್ಮಿಕರ ಸೌಲಭ್ಯಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ. ಆದರೆ, ಕಟ್ಟಡ ಕಾರ್ಮಿಕ ಮಂಡಳಿಯ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ತೇಜಾವತಿ ಅವರು ಯಾವುದೇ ಸೂಚನೆ-ಸಲಹೆ ನೀಡದೆ ಅರ್ಜಿದಾರರ ಕುಟುಂಬದ ಐಡಿ ಪರಿಶೀಲಿಸಿಲಿಸುವಂತೆ ಹೇಳಿದ್ದಾರೆ.
ಕೊಪ್ಪಳ:
ಕಾರ್ಮಿಕರ ವಿವಿಧ ಸೌಲಭ್ಯಗಳಿಗಾಗಿ ಕುಟುಂಬ ಐಡಿ ಮರು ತಪಾಸಣೆ ಮಾಡುವುದನ್ನು ಕೈಬಿಡುವಂತೆ ಒತ್ತಾಯಿಸಿ ರಾಜ್ಯ ಕಟ್ಟಡ ಕಟ್ಟುವ ಮತ್ತು ಕಲ್ಲು ಹೊಡೆಯುವ ಕ್ವಾರಿ ಕಾರ್ಮಿಕ ಫೆಡರೇಷನ್ ಜಿಲ್ಲಾ ಸಮಿತಿ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಸರ್ಕಾರಕ್ಕೆ ಮನವಿ ಸಲ್ಲಿಸಿತು.ಈಗಾಗಲೇ ಕಾರ್ಮಿಕರ ಸೌಲಭ್ಯಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ. ಆದರೆ, ಕಟ್ಟಡ ಕಾರ್ಮಿಕ ಮಂಡಳಿಯ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ತೇಜಾವತಿ ಅವರು ಯಾವುದೇ ಸೂಚನೆ-ಸಲಹೆ ನೀಡದೆ ಅರ್ಜಿದಾರರ ಕುಟುಂಬದ ಐಡಿ ಪರಿಶೀಲಿಸಿಲಿಸುವಂತೆ ಹೇಳಿದ್ದಾರೆ. ಇದೊಂದು ಅವೈಜ್ಞಾನಿಕ ನಡೆಯಾಗಿದೆ. ಅರ್ಜಿ ಸಲ್ಲಿಸಿದ ಅರ್ಜಿಗಳನ್ನೇ ಮತ್ತೆ ಪುನರ್ ಪರಿಶೀಲನೆ ಮಾಡುವುದು ಸರಿಯಲ್ಲ. ಈ ಹಿಂದೆ ಕುಟುಂಬ ಐಡಿ ಯೋಜನೆಯಡಿ ವಿವಿಧ ಹುದ್ದೆಗಳ ಹೆಸರು ನೋಂದಾಯಿಸಿಕೊಂಡಿದ್ದಾರೆ. ಕುಟುಂಬ ಐಡಿಯ ಹಿಂದೆ ಹಲವಾರು ಕಾರಣಗಳು ಇವೆ. ಈಗ ಕಾರ್ಮಿಕ ಅಥವಾ ಮತ್ತ್ಯಾವುದೇ ಹುದ್ದೆ ಮಾಡುತ್ತಿರಬಹುದು. ಆ ಕಾರಣ ನೀಡಿ ಅರ್ಜಿ ತಿರಸ್ಕಾರ ಸರಿಯಲ್ಲ. ಅಧಿಕಾರಿಗಳ ಈ ನಡೆ ಸಹಿಸಲ್ಲ. ಈ ಬಗ್ಗೆ ಅಧಿಕಾರಿಗಳು ಅಧಿಕೃತ ಆದೇಶ ಹೊರಡಿಸಲಿ. ಸುಮ್ಮನೆ ಅನ್ಯ ಮಾರ್ಗದಲ್ಲಿ ಅಧಿಕಾರ ದುರುಪಯೋಗ ಮಾಡುವುದು ಸರಿಯಲ್ಲ ಎಂದು ಆರೋಪಿಸಿಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.