ಸಮೃದ್ಧ ಮಳೆ, ಬೆಳೆಗೆ 7 ಗ್ರಾಮಗಳಿಗೆ ಪಾದಯಾತ್ರೆ

| Published : Jul 20 2024, 12:46 AM IST

ಸಾರಾಂಶ

ದೇವಾಲಯಗಳಲ್ಲಿ ಭಜನೆ ಇತರೆ ಧಾರ್ಮಿಕ ಕಾರ್ಯಕ್ರಮಗಳನ್ನು ಕೈಗೊಳ್ಳುವ ಮೂಲಕ ಗ್ರಾಮಕ್ಕೆ ಒಳಿತು ಮಾಡುವಂತೆ ಗ್ರಾಮ ದೇವರಲ್ಲಿ ಮೊರೆಯಿಟ್ಟು ಮತ್ತೆ ಮುಂದಿನ ಗ್ರಾಮಕ್ಕೆ ಭಜನೆ, ಕೀರ್ತನೆ ಮಾಡುತ್ತಾ ಭಕ್ತರು ಪಾದಯಾತ್ರೆ ಮುಂದುವರೆಸಿದರು.

ಕಮಲನಗರ: ಸಮೃದ್ಧ ಮಳೆ, ಬೆಳೆಗಾಗಿ ತಾಲೂಕಿನ ಖತಗಾಂವ ಗ್ರಾಮದ 20ಕ್ಕೂ ಹೆಚ್ಚು ಭಕ್ತರು ಸುತ್ತಮುತ್ತಲಿನ ಏಳು ಗ್ರಾಮಗಳ ದೇವಾಲಯಗಳಿಗೆ ಪಾದಯಾತ್ರೆ ಕೈಗೊಂಡರು.

ಗ್ರಾಮದ ದೇವರಾದ ಆಂಜನೇಯ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದ ಭಕ್ತರು ಹಕ್ಯಾಳ, ತದಲಾಪೂರ, ಮುರ್ಕಿವಾಡಿ, ಮುರ್ಕಿ, ಶಿವಪೂರ, ಮಹಾಳಪ್ಪಯ್ಯಾ, ಡೋಣಗಾಂವ, ರಂಡ್ಯಾಳ ಸೇರಿ 7 ಗ್ರಾಮಗಳಿಗೆ ಪಾದಯಾತ್ರೆ ಬೆಳೆಸಿ ನಂತರ ಸ್ವಗ್ರಾಮಕ್ಕೆ ಬಂದರು.

ಪ್ರತಿ ಗ್ರಾಮವನ್ನು ಪ್ರದಕ್ಷಿಣೆ ಹಾಕುವ ಭಕ್ತರು ಅಲ್ಲಿನ ಆಂಜನೇಯ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿ ಮುಂದಿನ ಹಳ್ಳಿಗೆ ಪ್ರಯಾಣ ಬೆಳೆಸಿದರು. ದೇವಾಲಯಗಳಲ್ಲಿ ಭಜನೆ ಇತರೆ ಧಾರ್ಮಿಕ ಕಾರ್ಯಕ್ರಮಗಳನ್ನು ಕೈಗೊಳ್ಳುವ ಮೂಲಕ ಗ್ರಾಮಕ್ಕೆ ಒಳಿತು ಮಾಡುವಂತೆ ಗ್ರಾಮ ದೇವರಲ್ಲಿ ಮೊರೆಯಿಟ್ಟು ಮತ್ತೆ ಮುಂದಿನ ಗ್ರಾಮಕ್ಕೆ ಭಜನೆ, ಕೀರ್ತನೆ ಮಾಡುತ್ತಾ ಭಕ್ತರು ಪಾದಯಾತ್ರೆ ಮುಂದುವರೆಸಿದರು.

ಪಾದಯಾತ್ರೆಯುದ್ದಕ್ಕೂ ಹಿರಿಯರು, ಯುವಕರು, ಸಣ್ಣ ಮಕ್ಕಳು ತಲೆ ಮೇಲೆ ಟೋಪಿ ಹಾಗೂ ಕೊರಳಲ್ಲಿ ಶಲ್ಯ ಧರಿಸಿ ಭಜನೆ ಮಾಡುತ್ತ ಸಾಗುತ್ತಿದ್ದ ದೃಶ್ಯ ಗಮನ ಸೆಳೆಯಿತು. ಈ ಸಂದರ್ಭದಲ್ಲಿ ಕಾಶಯ್ಯಾ ಸ್ವಾಮಿ, ಸಿದ್ರಾಮ ನೀಲಂಗೆ, ಚನ್ನಬಸವಾ ಪೋ.ಪಾಟೀಲ್, ಸಂಗಮೇಶ ಧರಣೆ, ರಾಮ ಬೆಳಕೋಣೆ, ಸಂಗಶೇಟ್ಟಿ ಬಿರಾದಾರ, ಶಿವಕುಮಾರ ಪಾಟೀಲ್, ರತಿಕಾಂತ ಪಾಟೀಲ್, ಹಣಮಂತ ನೀಲಂಗೆ, ನೀಲಕಂಠ ನೀಲಂಗೆ, ನವನಾಥ ಬೆಳಕೋಣೆ, ಮಹಾದೇವ ಬೇಳಕೋಣೆ, ಸಂಗಮೇಶ ಕುಂಬಾರ, ಶ್ರೀಕಾಂತ ನೀಲಂಗೆ, ರಾಹುಲ ಪಾಟೀಲ್, ಅನೀಕೇತ ನೀಲಂಗೆ ಹಾಗೂ ಇನ್ನಿತರರು ಇದ್ದರು.