ಸಾರಾಂಶ
ನರಸಿಂಹರಾಜಪುರ: ತಾಲೂಕಿನ ಕೆ.ಕಣಬೂರು ಬಳಿ ಬೈಕ್ ಹಾಗೂ ಟ್ಯಾಂಕರ್ ನಡುವೆ ಅಪಘಾತ ಸಂಭವಿಸಿ, ಬೈಕ್ ಸವಾರನಿಗೆ ತೀವ್ರ ಪೆಟ್ಟಾಗಿದ್ದು ಅಪಘಾತದ ಸ್ಥಳದಲ್ಲಿ ದೊರಕಿದ 60 ಸಾವಿರ ರು. ಹಾಗೂ ದಾಖಲೆಗಳುಳ್ಳ ಪರ್ಸ ನ್ನು 108 ಸಿಬ್ಬಂದಿ ಗಾಯಾಳು ಪತ್ನಿಗೆ ಹಿಂದಿರುಗಿಸಿ ಮಾನವೀಯತೆ ಮೆರೆದಿದ್ದಾರೆ.

ಶನಿವಾರ ಸಂಜೆ ಕೆ.ಕಣಬೂರು ಗ್ರಾಮದ ಬಳಿ ಭದ್ರಾವತಿ ತಾಲೂಕಿನ ಉಜ್ಜನಿಪುರ ವಾಸಿ ಕೃಷ್ಣಮೂರ್ತಿ ಬೈಕ್ ನಲ್ಲಿ ಹೋಗುತ್ತಿದ್ದ ಸಂದರ್ಭದಲ್ಲಿ ಟ್ಯಾಂಕರ್ ಹಾಗೂ ಬೈಕ್ ನಡುವೆ ಅಪಘಾತ ಸಂಭವಿಸಿದೆ. ಕೂಡಲೇ 108ಗೆ ಕರೆ ಬಂದಾಗ ಸ್ಟಾಫ್ ನರ್ಸ ಭೋಜನಾಯ್ಕ ಹಾಗೂ ಚಾಲಕ ಶಿವಯ್ಯ ಅಪಘಾತ ಸ್ಥಳಕ್ಕೆ ತೆರಳಿ ಕೃಷ್ಣಮೂರ್ತಿ ಅವರಿಗೆ ಪ್ರಥಮ ಚಿಕತ್ಸೆ ನೀಡಿದ್ದಾರೆ. ಕೃಷ್ಣಮೂರ್ತಿ ಅವರಿಗೆ ಕೈ ಕಾಲು ಮುರಿದಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿದ್ದಾರೆ.ಕೃಷ್ಣಮೂರ್ತಿ ಅವರು ಉಡುಪಿಗೆ ಹೋಗಿ ಉಜ್ಜನಿಪುರಕ್ಕೆ ತೆರಳುತ್ತಿದ್ದರು. ಹಾಗಾಗಿ ಗಾಯಾಳು ಕೃಷ್ಣಮೂರ್ತಿ ಬಳಿ ವಾರಸುದಾರರು ಯಾರೂ ಇಲ್ಲದಿದ್ದರಿಂದ ಅಪಘಾತ ಸ್ಥಳದಲ್ಲಿ ಕೃಷ್ಣಮೂರ್ತಿ ಅವರ ಬಳಿ ಇದ್ದ 60 ಸಾವಿರ ರು., ಮೊಬೈಲ್ ಹಾಗೂ ಆಧಾರ್ ಕಾರ್ಡು ಮತ್ತು ಪರ್ಸನ್ನು ಕೃಷ್ಣಮೂರ್ತಿ ಅವರ ಪತ್ನಿಗೆ ಕರೆ ಮಾಡಿ ಆಸ್ಪತ್ರೆಯಲ್ಲಿ ಅವರಿಗೆ ಒಪ್ಪಿಸಿದ್ದಾರೆ.