ಚಿಕ್ಕೇರೂರಿನಲ್ಲಿ ಆಕಸ್ಮಿಕ ಬೆಂಕಿ ಅವಘಡ, ೫ಕ್ಕೂ ಹೆಚ್ಚು ಅಂಗಡಿಗಳು ಭಸ್ಮ

| Published : Jun 09 2024, 01:38 AM IST

ಚಿಕ್ಕೇರೂರಿನಲ್ಲಿ ಆಕಸ್ಮಿಕ ಬೆಂಕಿ ಅವಘಡ, ೫ಕ್ಕೂ ಹೆಚ್ಚು ಅಂಗಡಿಗಳು ಭಸ್ಮ
Share this Article
  • FB
  • TW
  • Linkdin
  • Email

ಸಾರಾಂಶ

ಆಕಸ್ಮಿಕ ಬೆಂಕಿ ತಗುಲಿ ಐದಕ್ಕೂ ಹೆಚ್ಚು ಅಂಗಡಿಗಳು ಸುಟ್ಟು ಭಸ್ಮಗೊಂಡ ಘಟನೆ ತಾಲೂಕಿನ ಚಿಕ್ಕೇರೂರ ಗ್ರಾಮದಲ್ಲಿ ಸಂಭವಿಸಿದೆ.

ಹಿರೇಕೆರೂರು: ಆಕಸ್ಮಿಕ ಬೆಂಕಿ ತಗುಲಿ ಐದಕ್ಕೂ ಹೆಚ್ಚು ಅಂಗಡಿಗಳು ಸುಟ್ಟು ಭಸ್ಮಗೊಂಡ ಘಟನೆ ತಾಲೂಕಿನ ಚಿಕ್ಕೇರೂರ ಗ್ರಾಮದಲ್ಲಿ ಸಂಭವಿಸಿದೆ.ಶನಿವಾರ ಬೆಳಗಿನ ಜಾವದಲ್ಲಿ ಅಗ್ನಿ ಅವಘಡದಲ್ಲಿ ಭೀಮನಗೌಡ ಹಂದ್ರಾಳ, ಜಗತ್ ಸಿಂಗ್, ಪೈರೋಜ್ ಕಾಗಿನಲ್ಲಿ ಅವರಿಗೆ ಸೇರಿದ ಎಲೆಕ್ಟ್ರಿಕ್ ಅಂಗಡಿ, ಬೇಕರಿ, ಫುಟ್‌ವೇರ್, ಹೋಟೆಲ್ ಹಾಗೂ ಗೋಬಿ ಮಂಚೂರಿ ಅಂಗಡಿ ಸುಟ್ಟು ಭಸ್ಮಗೊಂಡಿವೆ.ಮೊದಲು ಫುಟ್ ವೇರ್ ಅಂಗಡಿಯಲ್ಲಿ ದಟ್ಟ ಹೊಗೆ ಕಂಡು ಬಂದು ನಂತರ ಅಕ್ಕಪಕ್ಕದ ಅಂಗಡಿಗಳಿಗೆ ಬೆಂಕಿ ಆವರಿಸಿಕೊಂಡಿದೆ.ಇನ್ನೂ ಹೆಚ್ಚಿನ ಅಂಗಡಿಗಳಿಗೆ ಕೂಡ ಬೆಂಕಿ ಆವರಿಸುವ ಆತಂಕದಲ್ಲಿದ್ದ ಸ್ಥಳೀಯರಿಗೆ ಅಗ್ನಿಶಾಮಕ ದಳದ ತುರ್ತು ಪ್ರವೇಶದಿಂದ ಅಕ್ಕ ಪಕ್ಕದ ಅಂಗಡಿಗಳಿಗೆ ಯಾವುದೇ ಹಾನಿ ಸಂಭವಿಸಿಲ್ಲ. ಜತೆಗೆ ಅದೃಷ್ಟಾವಶಾತ್ ಯಾವುದೇ ಪ್ರಾಣ ಹಾನಿ ಕೂಡ ಸಂಭವಿಸಿಲ್ಲ. ಈ ಘಟನೆಯಲ್ಲಿ ಸುಮಾರು ೩೦ಲಕ್ಷಕ್ಕೂ, ಹೆಚ್ಚು ಮೌಲ್ಯದ ವಸ್ತುಗಳು ಸುಟ್ಟು ಭಸ್ಮವಾಗಿದೆ ಎಂದು ಅಂದಾಜಿಸಲಾಗಿದೆ. ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳ ಆಗಮಿಸಿ ಹೆಚ್ಚಿನ ಅನಾಹುತವನ್ನು ತಪ್ಪಿದಂತಾಗಿದೆ.ಘಟನಾ ಸ್ಥಳಕ್ಕೆ ಶಾಸಕ ಯು.ಬಿ. ಬಣಕಾರ, ತಹಶೀಲ್ದಾರ್ ಎಚ್.ಪ್ರಭಾಕರಗೌಡ ಭೇಟಿ ನೀಡಿ ಪರಿಶೀಲನೆ ನಡೆಸಿದರು.