ಆಚಾರಿ ಎನ್ನುವುದು ವಿಶ್ವಕರ್ಮರ ಖ್ಯಾತ ನಾಮಪದ

| Published : Sep 18 2024, 01:54 AM IST

ಸಾರಾಂಶ

ಆಚಾರಿ ಎಂದರೆ ತಪ್ಪು ಭಾವನೆ ಕಲ್ಪನೆ ಮಾಡಿಕೊಳ್ಳುವ ಅಗತ್ಯವಿಲ್ಲ. ವಿಶ್ವಕರ್ಮ ಜನಾಂಗದವರು ಸಮಾಜದಲ್ಲಿ ಅವರಿವರ ಜಾತಿ, ಶ್ರೀಮಂತ, ಬಡವರು ಎಂದೆಣಿಸದೆ ಪ್ರತಿಯೊಬ್ಬರಿಗೂ ಹಲವು ರೂಪದಲ್ಲಿ ತಮ್ಮ ಕೊಡುಗೆ ನೀಡುತ್ತಿದ್ದಾರೆ. ವಿಶ್ವಕರ್ಮರ ನೆನಪಿಗಾಗಿ ಪಟ್ಟಣದಲ್ಲಿ ಐತಿಹಾಸಿಕ ಸ್ಥಳ ಗುರುತು ಮಾಡಬೇಕು, ಆಕಾರೋ ಆಗಮಾರ್ತಂಡ, ಚಾಕಾರೋ ದೇವತೋತ್ಪತ್ತಿ, ರಿಕಾರೋ ಶಾಸ್ತ್ರ ಕೋವಿದ, ಆಚಾರಿ ಅಕ್ಷರತ್ರಯಂ ಎಂಬಂತೆ, ಆಚಾರಿ ಎಂದರೆ ಮೂರು ವಿಷಯಗಳ ಬಲ್ಲ ಪಾರಂಗತರು ಎಂದು ದೇವರಾಜಪುರ ಹರಿಕಥಾ ವಿದ್ವಾನ್ ಮಲ್ಲೇಶಚಾರ್ ತಿಳಿಸಿದರು.

ಕನ್ನಡಪ್ರಭ ವಾರ್ತೆ ಆಲೂರು

ಆಕಾರೋ ಆಗಮಾರ್ತಂಡ, ಚಾಕಾರೋ ದೇವತೋತ್ಪತ್ತಿ, ರಿಕಾರೋ ಶಾಸ್ತ್ರ ಕೋವಿದ, ಆಚಾರಿ ಅಕ್ಷರತ್ರಯಂ ಎಂಬಂತೆ, ಆಚಾರಿ ಎಂದರೆ ಮೂರು ವಿಷಯಗಳ ಬಲ್ಲ ಪಾರಂಗತರು ಎಂದು ದೇವರಾಜಪುರ ಹರಿಕಥಾ ವಿದ್ವಾನ್ ಮಲ್ಲೇಶಚಾರ್ ತಿಳಿಸಿದರು.

ಪಟ್ಟಣದ ಮಿನಿ ವಿಧಾನಸೌಧ ಆವರಣದಲ್ಲಿ ತಾಲ್ಲೂಕು ರಾಷ್ಟ್ರೀಯ ಹಬ್ಬಗಳ ಆಚರಣ ಸಮಿತಿ ವತಿಯಿಂದ ಏರ್ಪಡಿಸಲಾಗಿದ್ದ ವಿಶ್ವಕರ್ಮ ಜಯಂತಿ ಸಮಾರಂಭದಲ್ಲಿ ಮುಖ್ಯ ಭಾಷಣಕಾರರಾಗಿ ಮಾತನಾಡಿ, ಆಚಾರಿ ಎಂದರೆ ತಪ್ಪು ಭಾವನೆ ಕಲ್ಪನೆ ಮಾಡಿಕೊಳ್ಳುವ ಅಗತ್ಯವಿಲ್ಲ. ವಿಶ್ವಕರ್ಮ ಜನಾಂಗದವರು ಸಮಾಜದಲ್ಲಿ ಅವರಿವರ ಜಾತಿ, ಶ್ರೀಮಂತ, ಬಡವರು ಎಂದೆಣಿಸದೆ ಪ್ರತಿಯೊಬ್ಬರಿಗೂ ಹಲವು ರೂಪದಲ್ಲಿ ತಮ್ಮ ಕೊಡುಗೆ ನೀಡುತ್ತಿದ್ದಾರೆ. ವಿಶ್ವಕರ್ಮರ ನೆನಪಿಗಾಗಿ ಪಟ್ಟಣದಲ್ಲಿ ಐತಿಹಾಸಿಕ ಸ್ಥಳ ಗುರುತು ಮಾಡಬೇಕು ಎಂದರು. ತಹಸೀಲ್ದಾರ್‌ ನಂದಕುಮಾರ್ ರವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಶಿಲ್ಪಿಯೊಬ್ಬ ಒಂದು ಕಲ್ಲಿನಲ್ಲಿ ಸುಂದರವಾದ ಮೂರ್ತಿಯನ್ನು ಕೆತ್ತಿ ದೈವಸ್ವರೂಪ ಶಕ್ತಿಯನ್ನು ಕೊಟ್ಟಾಗ ಅದು ಪೂಜಿಸಲ್ಪಡುತ್ತದೆ. ಅಮರಶಿಲ್ಪಿ ಜಖಣಾಚಾರಿಯವರು ಬೇಲೂರು ಮತ್ತು ಹಳೇಬೀಡಿನಲ್ಲಿ ಕೆತ್ತಿರುವ ಸುಂದರವಾದ ದೇವಾಲಯಗಳು ಪ್ರಪಂಚದಲ್ಲಿ ಖ್ಯಾತಿ ಪಡೆದಿವೆ. ಇದಕ್ಕೆ ವಿಶ್ವಕರ್ಮರ ಕೆತ್ತನೆ ಚಮತ್ಕಾರಕ್ಕೆ ಸಾಕ್ಷಿಯಾಗಿದೆ ಎಂದರು. ವಿಶ್ವಕರ್ಮ ಮುಖಂಡರಾದ ಬಿ. ಸಿ. ಶಂಕರಾಚಾರ್ ಮಾತನಾಡಿ, ತಾಯಿ ಮತ್ತು ಮಗುವನ್ನು ಬೇರ್ಪಡಿಸಲು ಅಗತ್ಯವಾದ ಕತ್ತರಿಯನ್ನು ಸೃಷ್ಟಿ ಮಾಡಿ ಹೊಕ್ಕುಳನ್ನು ತುಂಡರಿಸಿ, ತಾಯಿ ಮತ್ತು ಮಗುವನ್ನು ಪ್ರಾಣ ರಕ್ಷಣೆ ಮಾಡಿದವರು ವಿಶ್ವಕರ್ಮರು ಎಂದರು.

ಸಮಾರಂಭವನ್ನು ಪಟ್ಟಣ ಪಂಚಾಯಿತಿ ಅಧ್ಯಕ್ಷೆ ತಾಹಿರಾಬೇಗಂ ಉದ್ಘಾಟಿಸಿ ಶುಭ ಹಾರೈಸಿದರು. ವಿಶ್ವಕರ್ಮ ಸಂಘದ ವತಿಯಿಂದ ತಹಸೀಲ್ದಾರ್‌ ನಂದಕುಮಾರ್, ಗ್ರೇಡ್-೨ ತಹಸೀಲ್ದಾರ್ ಪೂರ್ಣಿಮ ಮತ್ತು ತಾಹಿರಾಬೇಗಂರವರನ್ನು ಗೌರವಿಸಲಾಯಿತು. ತಾಲ್ಲೂಕು ವಿಶ್ವಕರ್ಮ ಸಂಘದ ಅಧ್ಯಕ್ಷ ಹರೀಶ್, ಗೋಪಾಲಕೃಷ್ಣ, ಪ.ಪಂ. ಮುಖ್ಯಾಧಿಕಾರಿ ಸ್ಟೀಫನ್‌ ಪ್ರಕಾಶ್, ಶಿರಸ್ತೇದಾರ ಮಂಜುಳ, ಸ್ಫೂರ್ತಿ, ನಂದಿತಾ, ಬಿ. ರೇಣುಕಪ್ರಸಾದ್, ಡಾ. ಜಯರಾಜ್, ತಾ. ಪಂ. ಮಾಜಿ ಸದಸ್ಯ ರಂಗೇಗೌಡ ಉಪಸ್ಥಿರಿದ್ದರು.