ಏಕಾಗ್ರತೆ, ಶ್ರದ್ಧೆಯಿಂದ ವಿದ್ಯೆಯಲ್ಲಿ ಸಾಧನೆ ಸಾಧ್ಯ: ಸಚಿವ

| Published : Jun 16 2024, 01:52 AM IST

ಸಾರಾಂಶ

ವೇದಾವತಿ ನಗರದಲ್ಲಿ ನೂತನವಾಗಿ ಪ್ರಾರಂಭಿಸಿರುವ ಅಲ್ಪಸಂಖ್ಯಾತರ ವಸತಿ ಶಾಲೆಯನ್ನು ಶನಿವಾರ ಸಚಿವ ಡಿ.ಸುಧಾಕರ್ ಉದ್ಘಾಟಿಸಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಹಿರಿಯೂರು

ಶಿಕ್ಷಣ ಕಲಿಯಲು ಯಾವುದೇ ಜಾತಿ, ವರ್ಗ,ಲಿಂಗ,ಭೇದಭಾವದ ಹಂಗಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಹೇಳಿದರು.

ಪಟ್ಟಣದ ವೇದಾವತಿ ನಗರದಲ್ಲಿ ನೂತನವಾಗಿ ಪ್ರಾರಂಭಿಸಿರುವ ಅಲ್ಪಸಂಖ್ಯಾತರ ವಸತಿ ಶಾಲೆಯನ್ನು ಶನಿವಾರ ಉದ್ಘಾಟಿಸಿ ಮಾತನಾಡಿದರು.

ವಿದ್ಯಾರ್ಥಿಗಳ ಕಲಿಕೆಯಲ್ಲಿ ಶಿಸ್ತು ಮುಖ್ಯವಾಗಿರುತ್ತದೆ. ಓದುವ ಕಡೆಗೆ ಹೆಚ್ಚು ಆಸಕ್ತಿ ತೋರಿದರೆ ಉತ್ತಮ ಭವಿಷ್ಯ ರೂಪಿಸಿಕೊಳ್ಳಬಹುದು. ಏಕಾಗ್ರತೆ, ಆಸಕ್ತಿ, ಶ್ರದ್ದೆ ಇದ್ದರೆ ವಿದ್ಯೆಯಲ್ಲಿ ಸಾಧನೆ ಸಾಧ್ಯ ಎಂದರು.

ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಖಾದಿ ರಮೇಶ್, ಈರಲಿಂಗೇಗೌಡ, ನಗರಸಭೆ ಸದಸ್ಯರಾದ ಶಿವರಂಜನಿ ಯಾದವ್, ಗುಂಡೇಶ್ ಕುಮಾರ್, ತಿಪ್ಪೇಸ್ವಾಮಿ, ವಿಠಲ್ ಪಾಂಡುರಂಗ,ಮಾಜಿ ಸದಸ್ಯ ಶಿವಣ್ಣ, ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಅಧಿಕಾರಿ ಕಾಂತರಾಜ್, ಗಿರೀಶ್, ಜ್ಞಾನೇಶ್ ಮತ್ತಿತರರು ಹಾಜರಿದ್ದರು.