ನಾಗಮಾರ್ಷಲ್ ಆರ್ಟ್ಸ್ ಅಕಾಡೆಮಿ ಕರಾಟೆಪಟುಗಳ ಸಾಧನೆ

| Published : Jan 08 2025, 12:18 AM IST

ಸಾರಾಂಶ

ಮೈಸೂರು ನಾಗಮಾರ್ಷಲ್ ಆರ್ಟ್ಸ್ ಅಕಾಡೆಮಿ ವತಿಯಿಂದ ಮೈಸೂರಿನ ಚಾಮುಂಡಿ ವಿಹಾರದ ಒಳ ಕ್ರೀಡಾಂಗದಲ್ಲಿ ರಾಷ್ಟ್ರೀಯ ಮಟ್ಟದ ಕರಾಟೆ ಪಂದ್ಯಾವಳಿಯಲ್ಲಿ ಚಾಮರಾಜನಗರ ನಾಗಮಾರ್ಷಲ್ ಆರ್ಟ್ಸ್ ಅಕಾಡೆಮಿ ಕರಾಟೆಪಟುಗಳು ವಿಜೇತರಾದರು.

ಚಾಮರಾಜನಗರ: ಮೈಸೂರು ನಾಗಮಾರ್ಷಲ್ ಆರ್ಟ್ಸ್ ಅಕಾಡೆಮಿ ವತಿಯಿಂದ ಮೈಸೂರಿನ ಚಾಮುಂಡಿ ವಿಹಾರ ಒಳ ಕ್ರೀಡಾಂಗಣದಲ್ಲಿ ನಡೆದ ರಾಷ್ಟ್ರೀಯ ಮಟ್ಟದ ಕರಾಟೆ ಪಂದ್ಯಾವಳಿಯಲ್ಲಿ ಚಾಮರಾಜನಗರ ನಾಗಮಾರ್ಷಲ್ ಆರ್ಟ್ಸ್ ಅಕಾಡೆಮಿ ಕರಾಟೆಪಟುಗಳು ವಿಜೇತರಾಗಿ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.ಕಟ ಮತ್ತು ಕುಮಿತೆ ವಿಭಾಗದಲ್ಲಿ ಭಾಗವಹಿಸಿ ಸಾಧನೆಗೈದ ಕರಾಟೆ ಪಟುಗಳಾದ ವಿಜಯ್ ಕೆ., ಸಂಸ್ಕೃತಿ, ಅಧಿತಿಪಾನಿ, ವಿಕ್ರಂ, ಶೋಹನ್, ವಿವೇಕ್ ಸಾಯಿರಾಥೋಡ್, ಹೇಮಂತ್ ಸಾಯಿ ರಾಥೋಡ್, ಚಿರಂತ್ ಎಂ., ಮಂಜುನಾಥ್ ಎಂ., ಜ್ಞಾಣೇಶ್ ಕುಮಾರ್‌, ಸಮರ್ಥ್, ಗೌತಮ್, ಭೂಮಿಕ, ಭೌಮಿಕ್, ಪವನ್, ಮೋಹಿತ್ ಎಂ.ವೀರ್, ಸುಮುಖ್ ವೀರ್, ಮಹೇಂದ್ರ ಕುಮಾರ್, ಮಹಮದ್, ಮಹಮ್ಮದ್ ನವಾಜ್, ಮಹಮ್ಮದ್ ಫಾವಜ್, ಮಹಮ್ಮದ್ ರಜಕ್, ಮಹಮದ್ ಅಜ್ಜದ್, ಮಹಮದ್ ಉಮರ್, ಮಹಮ್ಮದ್ ಅರ್ಮನ್, ಅವೇಜ್ ಕಮಲ್, ಸೈಯದ್ ರಿಹಾನ್, ಚಿರಂತ್, ಎಂ.ಆರ್.ಭರತ್ ಕುಮಾರ್, ಉಮ್ಮರ್, ಅಫ್ಫನ್ ಅಹ್ಮದ್, ಜೈದುಲ್ಲಾ, ಹಸನ್ ಫಾರದ್, ಅರ್ಹನ್ ಖಾನ್‌, ಮಹಮ್ಮದ್ ಅಬುಜರ್, ಉಮ್ಮೆಅಮರಾ, ಇಜ್ಜಾಫಾತಿಮಾ, ತಾಬ್ರಿನ್ ಬಾನು, ಹಬೀಬಾ, ಜೈಬಾ ಉತ್ತಮ ಪ್ರದರ್ಶನ ನೀಡಿ ಸಮಗ್ರ ಪ್ರಶಸ್ತಿ, ಪ್ರಮಾಣಪತ್ರ ಪಡೆದಿದ್ದಾರೆ. ವಿಜೇತ ಕರಾಟೆ ಪಟುಗಳನ್ನು ಮುಖ್ಯ ಕರಾಟೆ ತರಬೇತುದಾರರು ಹಾಗೂ ವಕೀಲರಾದ ಸೆನ್ಸಾಯ್ ರಾಜೇಂದ್ರ, ತರಬೇತುದಾರ ಸೆನ್ಸಾಯ್‌ಗಳಾದ ಯೋಗೀಶ್, ರಮೇಶ್, ಫೈಜಲ್, ಶೇಖರ್ ಅಭಿನಂದಿಸಿದ್ದಾರೆ.