ಸಾರಾಂಶ
ಬೆಂಗಳೂರಿನಲ್ಲಿ ಆ.4 ರ ಭಾನುವಾರ ಜರುಗಿದ 11ನೇ ರಾಷ್ಟ್ರೀಯ ಕರಾಟೆ ಓಪನ್ ಚಾಂಪಿಯನ್‌ಶಿಪ್ ಸ್ಪರ್ಧಾ ವಿಭಾಗಗಳಲ್ಲಿ ಕೊಳ್ಳೇಗಾಲ ಪಟ್ಟಣದ ಶೋಟೊಕಾನ್ ಕರಾಟೆ ಶಾಲೆಯ 19 ಮಂದಿ ವಿದ್ಯಾರ್ಥಿಗಳು 2 ಚಿನ್ನದ ಪದಕ, 6 ಬೆಳ್ಳಿ ಹಾಗೂ 11 ಮಂದಿ ಕಂಚಿನ ಪದಕಗಳಿಸಿ ಸಾಧನೆಗೈದಿದ್ದಾರೆ.
ಕೊಳ್ಳೇಗಾಲ: ಬೆಂಗಳೂರಿನಲ್ಲಿ ಆ.4 ರ ಭಾನುವಾರ ಜರುಗಿದ 11ನೇ ರಾಷ್ಟ್ರೀಯ ಕರಾಟೆ ಓಪನ್ ಚಾಂಪಿಯನ್‌ಶಿಪ್ ಸ್ಪರ್ಧಾ ವಿಭಾಗಗಳಲ್ಲಿ ಕೊಳ್ಳೇಗಾಲ ಪಟ್ಟಣದ ಶೋಟೊಕಾನ್ ಕರಾಟೆ ಶಾಲೆಯ 19 ಮಂದಿ ವಿದ್ಯಾರ್ಥಿಗಳು 2 ಚಿನ್ನದ ಪದಕ, 6 ಬೆಳ್ಳಿ ಹಾಗೂ 11 ಮಂದಿ ಕಂಚಿನ ಪದಕಗಳಿಸಿ ಸಾಧನೆಗೈದಿದ್ದಾರೆ.
ಬೆಂಗಳೂರಿನಲ್ಲಿ ನಡೆದ ಕತಾ ಪ್ರದರ್ಶನ ವಿಭಾಗದಲ್ಲಿ ಧ್ರುವ.ಎಸ್, ಜೆ.ಸಾತ್ವಿಕ್ ಎಂಬ ಇಬ್ಬರು ವಿದ್ಯಾರ್ಥಿಗಳು ಸಾಧನೆಗೈದು ಎರಡು ಚಿನ್ನದ ಪದಕಗಳಿಸಿದ್ದಾರೆ. ಅದೇ ರೀತಿಯಲ್ಲಿ ಜೀವನ್ ನಾಯಕ್, ಸನ್ನಿಧಿಪಟೇಲ್, ಪ್ರೀತಮ್, ನಯನ, ಲಿಖಿತ. ಅಜರ್ಜುನ್ ಎಂಬ ಆರು ಮಂದಿ ವಿದ್ಯಾರ್ಥಿಗಳು 6 ಕಂಚಿನ ಪದಕಗಳಿಸಿ ಸಾಧನೆ ಮಾಡಿದ್ದಾರೆ.ಶ್ರೇಯಸ್, ಕುಶಾಲ್, ಅಭಯ್, ಪ್ರಣತಿ, ಅಥರ್ವ, ಆರ್.ಹರ್ಷಿತ, ದಿವ್ಯಾಂಕ, ಪಿ.ಅಕ್ಷಯ, ಪ್ರಣವ ಜಯಂತ್, ಕೈಲಾಶ ನಾಗ್, ಸಾಯಿ ವೈಷ್ಣವಿ ಎಂಬ 11 ಮಂದಿ ವಿದ್ಯಾರ್ಥಿಗಳು ತಲಾ ಒಂದು ಕಂಚಿನ ಪದಕಗಳಿಸಿದ್ದಾರೆ.
ಇದೆ 19 ಮಂದಿ ವಿದ್ಯಾರ್ಥಿಗಳ ತಂಡ ಕುಮಿತೆ ವಿಭಾಗದಲ್ಲಿ 9 ಪ್ರಥಮ ಸ್ಥಾನ, 6 ದ್ವೀತಿಯ ಸ್ಥಾನ, 4 ಮಂದಿ ತೖತೀಯ ಸ್ಥಾನದ ಜೊತೆಗೆ ಪ್ರಶಸ್ತಿ ಫಲಕ ಹಾಗೂ ಪ್ರಶಂಸಾ ಪತ್ರವನ್ನು ಭಾನುವಾರ ಸಂಜೆ ಪಡೆಯುವ ಮೂಲಕ ಮೆಚ್ಚುಗೆಗೆ ಭಾಜನರಾಗಿದ್ದಾರೆ. ಸಾಧಕ ವಿದ್ಯಾರ್ಥಿಗಳನ್ನು ಶೋಟೊಕಾನ್ ಸ್ಕೂಲ್ ಆಫ್ ಕರಾಟೆ ಇಂಡಿಯಾ ಕಾರ್ಯದರ್ಶಿ ರೆನ್ಶಿ ಯೋಗೇಶ್, ಕೊಳ್ಳೇಗಾಲ ಪಟ್ಟಣದ ಕರಾಟೆ ತರಬೇತುದಾರರಾದ ಸೆನ್ಸೈ ಸೌಜನ್ಯ ಪ್ರಭಾಕರ್ ಅಭಿನಂದಿಸಿದ್ದಾರೆ.