ಕನ್ನಡಪ್ರಭ ವಾರ್ತೆ ಬಾಗಲಕೋಟೆ ತಮ್ಮ ಜನ್ಮ ದಿನದ ಪ್ರಯುಕ್ತ ತಮ್ಮ ವಿವಿಕೆ ಪ್ರತಿಷ್ಠಾನದಿಂದ ಆ.22ರಂದು ನವನಗರದ ಕಲಾಭವನದಲ್ಲಿ ವಿಚಾರ ಸಂಕಿರಣ, ಸಾಧಕ ರೈತರು ಮತ್ತು ರೈತ ಮಹಿಳೆಯರಿಗೆ ಪ್ರಶಸ್ತಿ ಪ್ರದಾನ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ಜಿಪಂ ಮಾಜಿ ಅಧ್ಯಕ್ಷೆ ವೀಣಾ ಕಾಶಪ್ಪನವರ ತಿಳಿಸಿದರು

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ತಮ್ಮ ಜನ್ಮ ದಿನದ ಪ್ರಯುಕ್ತ ತಮ್ಮ ವಿವಿಕೆ ಪ್ರತಿಷ್ಠಾನದಿಂದ ಆ.22ರಂದು ನವನಗರದ ಕಲಾಭವನದಲ್ಲಿ ವಿಚಾರ ಸಂಕಿರಣ, ಸಾಧಕ ರೈತರು ಮತ್ತು ರೈತ ಮಹಿಳೆಯರಿಗೆ ಪ್ರಶಸ್ತಿ ಪ್ರದಾನ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ಜಿಪಂ ಮಾಜಿ ಅಧ್ಯಕ್ಷೆ ವೀಣಾ ಕಾಶಪ್ಪನವರ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಬೆಳಗ್ಗೆ 10.30ಕ್ಕೆ ಆರಂಭಗೊಳ್ಳುವ ಕಾರ್ಯಕ್ರಮವನ್ನು ಅವರ ಪತಿ, ಜಿಲ್ಲಾ ಉಸ್ತುವಾರಿ ಸಚಿವ ವಿಜಯಾನಂದ ಕಾಶಪ್ಪನವರ ಉದ್ಘಾಟಿಸಲಿದ್ದು, ಇಳಕಲ್ಲಿನ ಶ್ರೀಗುರುಮಹಾಂತ ಸ್ವಾಮೀಜಿ, ಶಿರೂರಿನ ಡಾ.ಬಸವಲಿಂಗ ಸ್ವಾಮೀಜಿ, ಅಡಮಿಹಾಳ-ಬಿಲ್ಕೆರೂರಿನ ಶ್ರೀಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ, ಸಿದ್ದನಕೊಳ್ಳದ ಶ್ರೀಶಿವಕುಮಾರ ಸ್ವಾಮೀಜಿ, ಶ್ರೀಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ, ಕಮತಗಿಯ ಶ್ರೀಹುಚ್ಚೇಶ್ವರ ಸ್ವಾಮೀಜಿ, ಟೀಕಿನಮಠದ ಶ್ರೀಮಲ್ಲಿಕಾಜ ಸ್ವಾಮೀಜಿ, ಹಾವೇರಿಯ ಅಗಡಿ ಡಾ.ಗುರುಲಿಂಗ ಸ್ವಾಮೀಜಿ, ಹನಮಸಾಗರದ ಹಜರತ್ ಸೈಯ್ಯದ್ ಷಾ ಮುರ್ತುಜಾ ಖಾದ್ರಿ ಹುಸೈನಿ, ಮಾತೆ ಮಾಣಿಕೇಶ್ವರಿ ಅಮ್ಮನವರು ಸಾನಿಧ್ಯ ವಹಿಸುವರು ಎಂದರು.

ಜಿಲ್ಲಾಧಿಕಾರಿ ಸಂಗಪ್ಪ, ಜಿಪಂ ಸಿಇಒ ಗಜಾನನ ಬಾಲೆ ಹಾಗೂ ಎಸ್ಪಿ ಸಿದ್ಧಾರ್ಥ ಗೋಯಲ್ ಸೇರಿ ಗಣ್ಯರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಪ್ರೊ.ಡಾ.ಚಂದ್ರಶೇಖರ ಬಿರಾದಾರ ಹಾಗೂ ರೈತ ಮಹಿಳೆ ಕವಿತಾ ಮಿಶ್ರಾ ಉಪನ್ಯಾಸ ನೀಡಲಿದ್ದಾರೆ ಎಂದರು. ಜಿಲ್ಲೆಯಲ್ಲಿ ಕೃಷಿ ಕ್ಷೇತ್ರದಲ್ಲಿ ಸಾಧನೆ ಮಾಡಿದ ರೈತರು ಹಾಗೂ ರೈತ ಮಹಿಳೆಯರನ್ನು ಗುರುತಿಸಿ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಕಾರ್ಯಕ್ರಮದಲ್ಲಿ ರೈತರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮನವಿ ಮಾಡಿದರು. ಈ ವೇಳೆ ರೇಣುಕಾ ನ್ಯಾಮಗೌಡರ ಇದ್ದರು.------------

ಕೋಟ್‌

ಮುಂದಿನ ದಿನಮಾನದಲ್ಲಿ ರಾಜಕೀಯ ಯಾವ ರೀತಿ ಬರುತ್ತದೆಯೋ ಅದರ ಮೇಲೆ ನಾವು ತೀರ್ಮಾನ ಮಾಡಬೇಕಾಗುತ್ತದೆ. ನಾನು ಜನಪ್ರತಿನಿಧಿ ಆಗೋದು ನಿಶ್ಚಿತ. ಅದು 2028 ಅಗಬಹುದು, 2029 ಆಗಬಹುದು. ಸಂದರ್ಭ ಬಂದಾಗ ಈ ಬಗ್ಗೆ ತಿಳಿಸುವೆ.

- ವೀಣಾ ಕಾಶಪ್ಪನವರ, ಜಿಪಂ ಮಾಜಿ ಅಧ್ಯಕ್ಷೆ