ಸರ್ಕಾರಿ ನೌಕರರ ಸಮಸ್ಯೆಗೆ ಧ್ವನಿಯಾಗಿ ಕೆಲಸ ಮಾಡಿ: ಮಾಜಿ ಸಚಿವ ವೆಂಕಟರಮಣಪ್ಪ

| Published : Nov 18 2024, 12:08 AM IST

ಸಾರಾಂಶ

ಮಾಜಿ ಸಚಿವ ವೆಂಕಟರಮಣಪ್ಪ ಹಾಗೂ ಶಾಸಕ ಎಚ್‌.ವಿ.ವೆಂಕಟೇಶ್‌ ಅವರಿಗೆ ಕೃತಜ್ಞತೆ ಸಲ್ಲಿಸಲಿದ್ದು, ಅವರ ಮಾರ್ಗದರ್ಶನದೊಂದಿಗೆ ತಾಲೂಕಿನ ಸರ್ಕಾರಿ ನೌಕರರ ಸಮಸ್ಯೆಗಳಿಗೆ ಕಾನೂನಾತ್ಮಕವಾಗಿ ಬಗೆ ಹರಿಸಲು ಬದ್ದರಿದ್ದೇವೆ.

ಕನ್ನಡಪ್ರಭ ವಾರ್ತೆ ಪಾವಗಡ

ಸರ್ಕಾರಿ ನೌಕರರ ಸಮಸ್ಯೆಗಳಿಗೆ ಸ್ಪಂದಿಸಿ ಅವರ ಬೇಡಿಕೆಗನುಗುಣವಾಗಿ ಸೇವೆ ಸಲ್ಲಿಸುವಂತೆ ಮಾಜಿ ಸಚಿವ ವೆಂಕಟರಮಣಪ್ಪ ಸರ್ಕಾರಿ ನೌಕರರ ಸಂಘದ ನೂತನ ಪದಾಧಿಕಾರಿಗಳಿಗೆ ಕರೆ ನೀಡಿದರು.

ಭಾನುವಾರ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಘಟಕದ ನೂತನ ಅಧ್ಯಕ್ಷರಾಗಿ ಕಂದಾಯ ಇಲಾಖೆಯ ಎಚ್‌.ವಿ.ರವಿಕುಮಾರ್‌ ಹಾಗೂ ಖಚಾಂಚಿಯಾಗಿ ಶೇಖರ್‌ಬಾಬು ಹಾಗೂ ಸಂಘದ ರಾಜ್ಯ ಪರಿಷತ್‌ ಘಟಕದ ಸದಸ್ಯರಾಗಿ ಶಿಕ್ಷಣ ಇಲಾಖೆಯ ಗಂಗಾಧರ್‌ ಆಯ್ಕೆಯಾದರು.ಈ ಹಿನ್ನೆಲೆಯಲ್ಲಿ ಭಾನುವಾರ ತಾಲೂಕಿನ ಹನುಮಂತನಹಳ್ಳಿಯ ತೋಟದ ಮನೆಗೆ ತೆರಳಿ ಮಾಜಿ ಸಚಿವ ವೆಂಕಟರಮಣಪ್ಪ ಹಾಗೂ ಶಾಸಕ ಎಚ್‌.ವಿ.ವೆಂಕಟೇಶ್‌ ಅವರನ್ನು ಭೇಟಿಯಾಗಿ ಅರ್ಶೀವಾದ ಪಡೆದರು.

ಈ ವೇಳೆ ಮಾಜಿ ಸಚಿವ ವೆಂಕಟರಮಣಪ್ಪ ಮಾತನಾಡಿ, ಸರ್ಕಾರಿ ನೌಕರರಿಗೆ ಸಮಾಜದಲ್ಲಿ ವಿಶೇಷ ಸ್ಥಾನಮಾನವಿದೆ. ಇಲಾಖೆಗೆ ಸಮಸ್ಯೆಯೆಂದು ಬಂದವರಿಗೆ ಕೆಲಸ ವಿಳಂಬ ಮಾಡದೇ ಮಾಡಿಕೊಡಬೇಕು. ಬಡವರ ಹಾಗೂ ನೊಂದವರ ಪರ ಕೆಲಸ ಮಾಡಿ ಅವರನ್ನು ಸಾಮಾಜಿಕ ಹಾಗೂ ಅರ್ಥಿಕ ಪ್ರಗತಿಯತ್ತ ಕೊಂಡೊಯ್ಯುವಲ್ಲಿ ನಿಮ್ಮ ಜವಾಬ್ದಾರಿ ಹೆಚ್ಚಿದೆ, ನೌಕರರ ಸಂಘದ ಚುನಾವಣೆಯಲ್ಲಿ ವಿಜೇತರಾದ ಎಲ್ಲಾ ಸಂಘದ ಪದಾಧಿಕಾರಿಗಳಿಗೆ ಒಳ್ಳೆಯದಾಗಲಿ ಎಂದು ಹಾರೈಸಿದರು.

ನೌಕರರ ಸಂಘದ ಚುನಾವಣಾ ಪ್ರಕ್ರಿಯೆ:

ಇದಕ್ಕೂ ಮುನ್ನ ಶನಿವಾರ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಶಾಖೆಯ ಅಧ್ಯಕ್ಷರು, ಖಜಾಂಜಿಗಳ ಆಯ್ಕೆ ಪ್ರಕ್ರಿಯೆಗೆ ಚುನಾವಣೆ ನಡೆದಿದ್ದು, ತಾಲೂಕಿನ ವಿವಿಧ ಇಲಾಖೆಯ 33 ಮತಗಳ ಪೈಕಿ 31 ಮಂದಿ ಸಂಘದ ನಿರ್ದೇಶಕರು ಮತದಾನ ಮಾಡಿದ್ದ ಹಿನ್ನೆಲೆಯಲ್ಲಿ 30 ಮತಗಳಿಂದ ಇಲ್ಲಿನ ಕಂದಾಯ ಇಲಾಖೆಯ ಗ್ರಾಮ ಲೆಕ್ಕಾಧಿಕಾರಿ ಎಚ್‌.ವಿ.ರವಿಕುಮಾ‌ರ್ ಹಾಗೂ ಎಲ್ಲಾ 31 ಮತಗಳು ಒಬ್ಬರಿಗೆ ಲಭಿಸಿದ್ದ ಹಿನ್ನೆಲೆಯಲ್ಲಿ ಖಜಾಂಜಿಯಾಗಿ ಸರ್ಕಾರಿ ಐಟಿಐ ಕಾಲೇಜು ಉಪನ್ಯಾಸ ಶೇಖರ್‌ಬಾಬು ಆಯ್ಕೆಯಾಗಿದ್ದಾರೆ. ಅಧ್ಯಕ್ಷ ಸ್ಥಾನದ ಆಕಾಂಕ್ಷಿ,ಅಭ್ಯರ್ಥಿ ಶಿಕ್ಷಕ ಯತಿಕುಮಾರ್‌ ಹಾಗೂ ಖಜಾಂಚಿ ಸ್ಥಾನದ ಆಕಾಂಕ್ಷಿ, ಅಭ್ಯರ್ಥಿ ಕೆ.ರಾಮಾಂಜಿನೇಯ ಪರಾಜಿತರಾಗಿದ್ದಾರೆ.

ಸಂಘದ ರಾಜ್ಯ ಪರಿಷತ್ ಸದಸ್ಯರಾಗಿ ಗಂಗಾಧ‌ರ್ ಅವಿರೋಧವಾಗಿ ಆಯ್ಕೆಯಾಗಿದ್ದು, ಈ ವೇಳೆ ಸಂಘದ ನೂತನ ಅಧ್ಯಕ್ಷ, ಖಜಾಂಜಿ ಹಾಗೂ ರಾಜ್ಯ ಪರಿಷತ್ ಸದಸ್ಯರನ್ನು ಅಭಿನಂದಿಸಲಾಯಿತು.

ನೂತನ ಅಧ್ಯಕ್ಷ ಎಚ್‌.ವಿ.ರವಿಕುಮಾರ್‌ ಮಾತನಾಡಿ, ಮಾಜಿ ಸಚಿವ ವೆಂಕಟರಮಣಪ್ಪ ಹಾಗೂ ಶಾಸಕ ಎಚ್‌.ವಿ.ವೆಂಕಟೇಶ್‌ ಅವರಿಗೆ ಕೃತಜ್ಞತೆ ಸಲ್ಲಿಸಲಿದ್ದು, ಅವರ ಮಾರ್ಗದರ್ಶನದೊಂದಿಗೆ ತಾಲೂಕಿನ ಸರ್ಕಾರಿ ನೌಕರರ ಸಮಸ್ಯೆಗಳಿಗೆ ಕಾನೂನಾತ್ಮಕವಾಗಿ ಬಗೆ ಹರಿಸಲು ಬದ್ದರಿದ್ದೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಅಧ್ಯಕ್ಷ ಹಾಗೂ ಖಜಾಂಚಿ ಆಯ್ಕೆ ಚುನಾವಣೆಯ ಮುಖ್ಯ ಚುನಾವಣಾಧಿಕಾರಿಯಾಗಿ ರಾಂಬಾಬು ಹಾಗೂ ಸಹಾಯಕ ಚುನಾವಣಾಧಿಕಾರಿಯಾಗಿ ಯರಿಸ್ವಾಮಿ ಕರ್ತವ್ಯ ನಿರ್ವಹಿಸಿದ್ದು. ಪೊಲೀಸ್ ಬಿಗಿ ಬಂದೋಬಸ್ತ್ ನಿಯೋಜಿಸಲಾಗಿತ್ತು.

ಪ್ರಾಂಶುಪಾಲ ಮಾರಪ್ಪ, ಮಂಜುನಾಥ್, ರಾಜಗೋಪಾಲ್, ಇದಾಯಿತ್ ವುಲ್ಲಾ, ಮಧು ಕುಮಾರ್, ಮಕ್ತಿಯಾರ್, ರಾಘವೇಂದ್ರ, ರಂಜಿತ್ ಕುಮಾರ್, ಕಿರಣ್, ಮಹೇಶ್, ಮಾರುತೀಶ್, ಗಂಗಾಧ‌ರ್, ರಾಮಾಂಜನೇಯ,ನಾಗರಾಜು, ರಾಕೇಶ್, ಪ್ರಸಾದ್, ನವೀನ್ ಕುಮಾರ್ ಸೇರಿದಂತೆ ತಾಲೂಕು ಸರ್ಕಾರಿ ನೌಕರರ ಸಂಘದ ಎಲ್ಲಾ ನೂತನ ನಿರ್ದೇಶಕರು ಉಪಸ್ಥಿತರಿದ್ದರು.