ಡೆಂಘೀ ಹೆಚ್ಚಾಗದಂತೆ ಕಟ್ಟುನಿಟ್ಟಿನ ಕ್ರಮ: ಡಾ.ಎನ್.ಕಾಶಿ

| Published : Jul 18 2024, 01:41 AM IST

ಡೆಂಘೀ ಹೆಚ್ಚಾಗದಂತೆ ಕಟ್ಟುನಿಟ್ಟಿನ ಕ್ರಮ: ಡಾ.ಎನ್.ಕಾಶಿ
Share this Article
  • FB
  • TW
  • Linkdin
  • Email

ಸಾರಾಂಶ

Action against dengue cases not increse: awareness programm conduct

ಚಳ್ಳಕೆರೆ: ಡೆಂಘೀ ಪ್ರಕರಣಗಳು ಹೆಚ್ಚುತ್ತಿದ್ದು, ಮುಂಜಾಗ್ರತಾ ಕ್ರಮವಾಗಿ ತಾಲೂಕು ಆರೋಗ್ಯ ಇಲಾಖೆ ನಗರಸಭೆಯ ಸಹಯೋಗದೊಂದಿಗೆ ನಗರದ ವಾರ್ಡ್‌ಗಳಲ್ಲಿ ಡೆಂಘೀ ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ತಾಲೂಕು ಆರೋಗ್ಯಾಧಿಕಾರಿ ಡಾ.ಎನ್.ಕಾಶಿ, ನಗರದ ವಾರ್ಡ್-೧೪ರಲ್ಲಿ ಮನೆ, ಮನೆಗೂ ತೆರಳಿ ಡೆಂಘೀ ಜಾಗೃತಿಯ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಿದರು. ನಗರಸಭೆ ನೈರ್ಮಲ್ಯ ಇಂಜಿನಿಯರ್ ನರೇಂದ್ರಬಾಬು, ಡೆಂಘೀ ನಿಯಂತ್ರಣಕ್ಕೆ ಸಾರ್ವಜನಿಕರು ನಗರಸಭೆ ಆಡಳಿತದೊಂದಿಗೆ ಕೈಗೊಡಿಸುವಂತೆ ಮನವಿ ಮಾಡಿದರು. ಆರೋಗ್ಯ ನಿರೀಕ್ಷರಾದ ಗೀತಕುಮಾರಿ, ಗಣೇಶ್, ಚೇತನ್, ಆಶಾ, ಅಂಗನವಾಡಿ ಕಾರ್ಯಕರ್ತೆಯರು ಜಾಗೃತಿ ಕಾರ್ಯದಲ್ಲಿ ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ಮನೆ, ಮನೆಗೂ ತೆರಳಿ ನಿಂತಿದ್ದ ನೀರನ್ನು ತೆರವುಗೊಳಿಸಲಾಯಿತು.

-----

ಪೋಟೋ: ೧೬ಸಿಎಲ್‌ಕೆ೩

ಚಳ್ಳಕೆರೆ ನಗರದ ನಗರದ ವಾರ್ಡ್-೧೪ರಲ್ಲಿ ಮನೆ, ಮನೆಗೂ ತೆರಳಿ ಡೆಂಘೀ ಜಾಗೃತಿಯ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದರು.