ಸರ್ಕಾರಿ ಆಸ್ಪತ್ರೆಗಳಲ್ಲಿ ಸ್ತನ ಕ್ಯಾನ್ಸರ್ ಚಿಕಿತ್ಸೆಗೆ ಕ್ರಮ: ಶಾಸಕ ಜಿ.ಎಚ್.ಶ್ರೀನಿವಾಸ್

| Published : Sep 30 2025, 12:00 AM IST

ಸರ್ಕಾರಿ ಆಸ್ಪತ್ರೆಗಳಲ್ಲಿ ಸ್ತನ ಕ್ಯಾನ್ಸರ್ ಚಿಕಿತ್ಸೆಗೆ ಕ್ರಮ: ಶಾಸಕ ಜಿ.ಎಚ್.ಶ್ರೀನಿವಾಸ್
Share this Article
  • FB
  • TW
  • Linkdin
  • Email

ಸಾರಾಂಶ

ತರೀಕೆರೆ, ಲಯನ್ ಸಂಸ್ಥೆ ಈ ನಿಸ್ವಾರ್ಥ ಸೇವೆ ಪರಿಗಣಿಸಿ ಸರ್ಕಾರಿ ಆಸ್ಪತ್ರೆಗಳಲ್ಲಿ ಸ್ತನ ಕ್ಯಾನ್ಸರ್ ಚಿಕಿತ್ಸೆ ಒದಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಜಿ.ಎಚ್.ಶ್ರೀನಿವಾಸ್ ಹೇಳಿದ್ದಾರೆ.

- ತರೀಕೆರೆಯಲ್ಲಿ ಉಚಿತ ಮ್ಯಾಮೊಗ್ರಫಿ (ಸ್ತನ ಕ್ಯಾನ್ಸರ್) ತಪಾಸಣಾ ಶಿಬಿರ

ಕನ್ನಡಪ್ರಭ ವಾರ್ತೆ, ತರೀಕೆರೆ

ಲಯನ್ ಸಂಸ್ಥೆ ಈ ನಿಸ್ವಾರ್ಥ ಸೇವೆ ಪರಿಗಣಿಸಿ ಸರ್ಕಾರಿ ಆಸ್ಪತ್ರೆಗಳಲ್ಲಿ ಸ್ತನ ಕ್ಯಾನ್ಸರ್ ಚಿಕಿತ್ಸೆ ಒದಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಜಿ.ಎಚ್.ಶ್ರೀನಿವಾಸ್ ಹೇಳಿದ್ದಾರೆ.

ಲಯನ್ಸ್ ಇಂಟರ್ ನ್ಯಾಷನಲ್, ಲಯನ್ಸ್ ಕ್ಲಬ್ ಮತ್ತು ಲಿಯೋ ಕ್ಲಬ್ ತರೀಕೆರೆ , ಸಹ್ಯಾದ್ರಿ ನಾರಾಯಣ ಆಸ್ಪತ್ರೆ ಶಿವಮೊಗ್ಗ ಸಂಜೀವಿನಿ ಹೆಲ್ತ್ ಕೇರ್ ತರೀಕೆರೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಚಿಕ್ಕಮಗಳೂರು ತಾಲೂಕು ಆರೋಗ್ಯಧಿ ಕಾರಿ ಕಚೇರಿ ತರೀಕೆರೆ ಮತ್ತು ವಿವಿಧ ಮಹಿಳಾ ಸಮಾಜದ ಸಹಯೋಗದಲ್ಲಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ನಡೆದ ಉಚಿತ ಮ್ಯಾಮೊಗ್ರಫಿ (ಸ್ತನ ಕ್ಯಾನ್ಸರ್) ತಪಾಸಣಾ ಶಿಬಿರದಲ್ಲಿ ಮಾತನಾಡಿದರು. ಈ ದಿನ ಸಂಸ್ಥೆ ಎಲ್ಲಾ ಸದಸ್ಯರು ಹಾಜರಾಗಿ ಈ ಕಾರ್ಯಕ್ರಮ ಯಶಸ್ವಿಗೊಳಿಸಲು ಕಾರಣರಾಗಿದ್ದಾರೆ ಎಂದು ಹೇಳಿದರು. ಲಯನ್ಸ್ ಕ್ಲಬ್ ಅಧ್ಯಕ್ಷ ಟಿ. ಎಂ. ಹರೀಶ್ ಮಾತನಾಡಿ ಸಂಸ್ಥೆ ಎಲ್ಲಾ ಸದಸ್ಯರು ನೀಡುವ ಉತ್ತೇಜನ ಮತ್ತು ಆಸಕ್ತಿ ನನಗೆ ಈ ರೀತಿ ಕಾರ್ಯಕ್ರಮ ಮಾಡುವ ಮುಖಾಂತರ ಲಯನ್ ಸಂಸ್ಥೆಯನ್ನು ಇನ್ನೂ ಬೃಹತ್ತಾಗಿ ಬೆಳೆಸುವುದಾಗಿ ತಿಳಿಸಿದರು.ಡಾ.ಟಿ.ಎಂ.ದೇವರಾಜ್ ಸ್ತನ ಕ್ಯಾನ್ಸ್ ರ್ ಬಗ್ಗೆ ಮಾಹಿತಿ ನೀಡಿ ಮಹಿಳೆಯರಿಗೆ ಹಂತ ಹಂತವಾಗಿ ಈ ರೋಗ ಹರಡುತ್ತದೆ ಹೀಗಾಗಿ ಮಹಿಳೆಯರು ತಪಾಸಣೆ ಮಾಡಿಸಿಕೊಳ್ಳಬೇಕು. ಪ್ರಾಥಮಿಕ ಹಂತದಲ್ಲಿ ಚಿಕಿತ್ಸೆ ಪಡೆದರೆ ಜೀವಕ್ಕೆ ಅಪಾಯವಿಲ್ಲ, ಪುರುಷರಿಗೂ ಈ ರೋಗ ಲಕ್ಷಣ ಕಂಡು ಬರುತ್ತವೆ ಪುರುಷರು ಸಹ ಸೂಕ್ತ ವೈಧ್ಯಕೀಯ ಪರೀಕ್ಷೆ ಮಾಡಿಸಿಕೊಳ್ಳಬೇಕು ಹೆಣ್ಣು ಮನೆಯ ಕಣ್ಣು ಎಂದು ತಿಳಿಸಿದರು. ಸಂಜೀವಿನಿ ಹೆಲ್ತ್ ಕೇರ್ ಮುಖ್ಯಸ್ಥರು ಮತ್ತು ಲಯನ್ಸ್ ಕ್ಲಬ್ ಸದಸ್ಯರು ಮೊಹಮ್ಮದ್ ಬೀಲಾಲ್ ಖಾನ್ ಶಿಬಿರ ಯಶಸ್ವಿ ಯಾಗಲು ಹೆಚ್ಚಿನ ಶ್ರಮ ವಹಿಸಿದ್ದರು.ಲಯನ್ಸ್ ಕ್ಲಬ್ ಉಪಾಧ್ಯಕ್ಷ ಪ್ರದೀಪ್ ಕುಮಾರ್ .ಟಿ. ವಿ, ಖಂಜಾಚಿ ನವೀನ್ ಟಿ. ಎಂ,ಮೊಹಮ್ಮದ್ ಬೀಲಾಲ್ ಖಾನ್ ಲಯನ್ಸ್ ಕ್ಲಬ್ ಸದಸ್ಯರು, ವೈದ್ಯರು, ವೈದ್ಯ ಸಿಬ್ಬಂದಿ ಭಾಗವಹಿಸಿದ್ದರು.-

29ಕೆಟಿಆರ್.ಕೆ.1ಃ ತರೀಕೆರೆಯಲ್ಲಿ ಲಯನ್ಸ್ ಇಂಟರ್ ನ್ಯಾಷನಲ್ ಲಯನ್ಸ್ ಕ್ಲಬ್‌ ನಿಂದ ನಡೆದ ಉಚಿತ ಮ್ಯಾಮೊಗ್ರಫಿ (ಸ್ತನ ಕ್ಯಾನ್ಸರ್) ತಪಾಸಣಾ ಶಿಬಿರದಲ್ಲಿ ಶಾಸಕ ಜಿ.ಎಚ್.ಶ್ರೀನಿವಾಸ್, ಲಯನ್ಸ್ ಕ್ಲಬ್ ಅಧ್ಯಕ್ಷ ಟಿ.ಎಂ.ಹರೀಶ್, ಉಪಾಧ್ಯಕ್ಷ ಪ್ರದೀಪ್ ಕುಮಾರ್, ಖಚಾಂಚಿ ನವೀನ್, ಲಯನ್ಸ್ ಕ್ಲಬ್ ಸದಸ್ಯ ಮೊಹಮ್ಮದ್ ಬೀಲಾಲ್ ಖಾನ್ ಭಾಗವಹಿಸಿದ್ದರು.

--------------