ವಿದ್ಯುತ್ ಸಮಸ್ಯೆ ಬಗೆಹರಿಸಲು ಕ್ರಮ: ಸೆಸ್ಕ್ ಎಇಇ

| Published : Jun 16 2024, 01:52 AM IST

ಸಾರಾಂಶ

ಮೀಟರ್ ರೈಡರ್ ಮನಬಂದಂತೆ ಮಾತನಾಡುತ್ತಾರೆ. ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದರು. ಬೆಳಕವಾಡಿಯಲ್ಲಿರುವ ಶಾಖಾಧಿಕಾರಿ ಕಚೇರಿಯಲ್ಲಿ ಸುಮಾರು ಒಂದೂವರೆ ಎಕರೆ ಸ್ಥಳವಿದೆ. ತಾಲೂಕು ಕೇಂದ್ರದಲ್ಲಿರುವ ಹೋಬಳಿ ಮಟ್ಟದ ಉಪಶಾಖೆಗಳನ್ನು ಅಲ್ಲಿಯೇ ಪ್ರಾರಂಭಿಸಬೇಕು.

ಮಳವಳ್ಳಿ: ಗ್ರಾಹಕರು ತಿಳಿಸಿದ ಎಲ್ಲಾ ವಿದ್ಯುತ್ ಸಮಸ್ಯೆಗಳನ್ನು ಬಗೆಹರಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಸೆಸ್ಕ್ ಎಇಇ ಪ್ರೇಮ್‌ಕುಮಾರ್ ತಿಳಿಸಿದರು.

ಪಟ್ಟಣದ ಚೆಸ್ಕಾಂ ಕಚೇರಿಯಲ್ಲಿ ನಡೆದ ಗ್ರಾಹಕ ಸಂಪರ್ಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಪಟ್ಟಣದಲ್ಲಿ ಮೂರು ಹಾಗೂ ಗ್ರಾಮಾಂತರದಲ್ಲಿ 6 ಅರ್ಜಿಗಳು ಸಲ್ಲಿಕೆಯಾಗಿದ್ದು, ಬಂದಿರುವ ಎಲ್ಲಾ ಅರ್ಜಿಗಳನ್ನು ಆಯಾ ಶಾಖಾ ಅಧಿಕಾರಿಗಳ ಗಮನಕ್ಕೆ ತಂದು ಒಂದು ತಿಂಗಳ ಒಳಗೆ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಲಾಗುವುದು ಎಂದರು.

ಈ ವೇಳೆ ಸೌಭಾಗ್ಯವತಿ ವೆಂಕಟೇಶ್, ಜಯಶಂಕರೇಗೌಡರು ವಿದ್ಯುತ್ ಕಂಬ ಹಾಗೂ ಮಾರ್ಗವನ್ನು ಸ್ಥಳಾಂತರ ಮಾಡಬೇಕೆಂದು ಮನವಿ ಮಾಡಿಕೊಂಡರು.

ನಜೀಮ್ ಮಾತನಾಡಿ, ಮೀಟರ್ ರೈಡರ್ ಮನಬಂದಂತೆ ಮಾತನಾಡುತ್ತಾರೆ. ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದರು. ಬೆಳಕವಾಡಿಯಲ್ಲಿರುವ ಶಾಖಾಧಿಕಾರಿ ಕಚೇರಿಯಲ್ಲಿ ಸುಮಾರು ಒಂದೂವರೆ ಎಕರೆ ಸ್ಥಳವಿದೆ. ತಾಲೂಕು ಕೇಂದ್ರದಲ್ಲಿರುವ ಹೋಬಳಿ ಮಟ್ಟದ ಉಪಶಾಖೆಗಳನ್ನು ಅಲ್ಲಿಯೇ ಪ್ರಾರಂಭಿಸಬೇಕು ಎಂದು ಉಮೇಶ್ ತಿಳಿಸಿದರು.

ಸಭೆಯಲ್ಲಿ ಎಇ ಶಿವಕುಮಾರ್, ರಾಜೇಶ್ವರಿ, ಹಿರಿಯ ಸಹಾಯಕ ದಾಸೇಗೌಡ, ಶಿವಚಂದ್ರಮೂರ್ತಿ, ಸಹಾಯಕ ಇಂಜಿನಿಯರ್‌ಗಳಾದ ನಾಗೇಂದ್ರ, ಎಂ.ಪಿ ಪ್ರಕಾಶ್, ಶಾಖಾಧಿಕಾರಿಗಳಾದ ದಿವಾಕರ್, ವಿಜೇಂದ್ರ ಕಾಂತರಾಜು, ಗುರುಸೂರ್ಯಕುಮಾರ್, ಶಿವಲಿಂಗು ಸೇರಿ ಇತರರು ಇದ್ದರು.