ಸರಗೂರು ಕಾಲೇಜಲ್ಲಿ ಬಿ.ಎಸ್ಸಿ ಆರಂಭಿಸಲು ಕ್ರಮ: ಶಾಸಕ ಅನಿಲ್ ಚಿಕ್ಕಮಾದು

| Published : Mar 15 2024, 01:25 AM IST

ಸರಗೂರು ಕಾಲೇಜಲ್ಲಿ ಬಿ.ಎಸ್ಸಿ ಆರಂಭಿಸಲು ಕ್ರಮ: ಶಾಸಕ ಅನಿಲ್ ಚಿಕ್ಕಮಾದು
Share this Article
  • FB
  • TW
  • Linkdin
  • Email

ಸಾರಾಂಶ

ಕೋಟೆ ಪಟ್ಟಣದ ಪ್ರಥಮ ದರ್ಜೆ ಕಾಲೇಜಿನಲ್ಲಿ ಬಿ.ಎಸ್ಸಿ ತರಗತಿ ಆರಂಭಿಸಲು ಬೇಡಿಕೆ ಇತ್ತು. ಹೀಗಾಗಿ ಅಲ್ಲಿ ತರಗತಿ ಆರಂಭಿಸಲು ಕ್ರಮವಹಿಸಲಾಗಿದೆ. ಅದೇ ಮಾದರಿಯಲ್ಲಿಯೇ ಸರಗೂರಿನಲ್ಲೂ ತರಗತಿ ಶುರು ಮಾಡಲು ಕ್ರಮವಹಿಸಲಾಗುವುದು. ಇದಕ್ಕೆ ಸಂಬಂಧಿಸಿದಂತೆ ಸರ್ಕಾರದ ಗಮನ ಸೆಳೆಯಲಾಗುವುದು.

ಕನ್ನಡಪ್ರಭ ವಾರ್ತೆ ಸರಗೂರುಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸರಗೂರು ಪ್ರಥಮ ದರ್ಜೆ ಕಾಲೇಜಿನಲ್ಲಿ ಬಿ.ಎಸ್ಸಿ ತರಗತಿ ಆರಂಭಿಸಲು ಕ್ರಮವಹಿಸಲಾಗುವುದು ಎಂದು ಶಾಸಕ ಅನಿಲ್ ಚಿಕ್ಕಮಾದು ಹೇಳಿದರು.

ಪಟ್ಟಣದ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಗುರುವಾರ 3.50 ಕೋಟಿ ರು. ವೆಚ್ಚದ 7 ತರಗತಿ ಕೊಠಡಿ, ಗ್ರಂಥಾಲಯ, 2 ಶೌಚಾಲಯ ಕಟ್ಟಡ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.

ಕೋಟೆ ಪಟ್ಟಣದ ಪ್ರಥಮ ದರ್ಜೆ ಕಾಲೇಜಿನಲ್ಲಿ ಬಿ.ಎಸ್ಸಿ ತರಗತಿ ಆರಂಭಿಸಲು ಬೇಡಿಕೆ ಇತ್ತು. ಹೀಗಾಗಿ ಅಲ್ಲಿ ತರಗತಿ ಆರಂಭಿಸಲು ಕ್ರಮವಹಿಸಲಾಗಿದೆ. ಅದೇ ಮಾದರಿಯಲ್ಲಿಯೇ ಸರಗೂರಿನಲ್ಲೂ ತರಗತಿ ಶುರು ಮಾಡಲು ಕ್ರಮವಹಿಸಲಾಗುವುದು. ಇದಕ್ಕೆ ಸಂಬಂಧಿಸಿದಂತೆ ಸರ್ಕಾರದ ಗಮನ ಸೆಳೆಯಲಾಗುವುದು ಎಂದು ಅವರು ತಿಳಿಸಿದರು.

ಶಾಸಕನಾಗಿ ಆಯ್ಕೆಯಾದ ಮೇಲೆ ಸರಗೂರಿನಲ್ಲಿ ಪ್ರಥಮ ದರ್ಜೆ ಕಾಲೇಜು ನೂತನ ಕಟ್ಟಡಕ್ಕೆ ಬೇಡಿಕೆ ಇಟ್ಟು ವಿಧಾನಸೌಧದಲ್ಲಿ ಚರ್ಚಿಸಿದ್ದೆ. ಆಗಿನ ಸರ್ಕಾರ ಕಟ್ಟಡ ನಿರ್ಮಾಣಕ್ಕೆ ಅನುದಾನ ಬಿಡುಗಡೆ ಮಾಡಿತ್ತು. ಇದರಿಂದಾಗಿ ಗ್ರಾಮಾಂತರ ಪ್ರದೇಶದ ಮಕ್ಕಳ ಶಿಕ್ಷಣಕ್ಕೆ ಅನುಕೂಲವಾಗಲಿದೆ. ಯಾರೂ ಶಿಕ್ಷಣದಿಂದ ವಂಚಿತರಾಗಬಾರದೆಂದು ಶಿಕ್ಷಣ ಕ್ಷೇತ್ರಕ್ಕೆ ಸಾಕಷ್ಟು ಅನುದಾನ ಬಿಡುಗಡೆ ಮಾಡಿಸಿಕೊಂಡು ಬಂದಿದ್ದೇನೆ. ಮುಂದಿನ ದಿನಗಳಲ್ಲಿಯೂ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಲಾಗುವುದು ಎಂದು ಭರವಸೆ ನೀಡಿದರು.

ಪಪಂ ಅಧ್ಯಕ್ಷೆ ರಾಧಿಕಾ ಶ್ರೀನಾಥ್, ಸದಸ್ಯರಾದ ಶ್ರೀನಿವಾಸ್, ಚಲುವಕೃಷ್ಣ, ಕಾಲೇಜು ಪ್ರಾಂಶುಪಾಲ ಎಂ.ಜೆ. ದಯಾನಂದ, ಕರ್ನಾಟಕ ಹೌಸಿಂಗ್ ಬೋರ್ಡ್‌ನ ಎಇ ಅಶ್ವಿನ್, ಕಾರ್ತಿಕ್, ರಮೇಶ್, ಜಿಪಂ ಉಪಾಧ್ಯಕ್ಷೆ ಭಾಗ್ಯಲಕ್ಷ್ಮಿ, ಮಂಜುನಾಥ್, ಸುದರ್ಶನ್, ರಾಜು, ಕಾಲೇಜು ಉಪನ್ಯಾಸಕರಾದ ವೆಂಕಟಮ್ಮ, ಎಸ್‌. ಮಂಜುಳಾದೇವಿ, ಡಾ.ಎಂ.ಬಿ. ದೀಪ, ಎಸ್‌.ಆರ್‌. ಯತೀಶ್, ಡಾ.ಜೆ. ಶ್ರುತಿ, ಎಂ.ಬಿ. ಕವಿತಾ, ಅಲಮೇಲಕುಮಾರಿ, ಭಾಗ್ಯಮ್ಮ, ಭೂಮಿ ಪೂಜೆ ನೆರವೇರಿಸಿದರು. ವಿನಯ್‌ ಗುರೂಜಿ ಇದ್ದರು.

ಎಚ್‌.ಡಿ. ಕೋಟೆಯಲ್ಲಿ ಬಿ.ಎಸ್ಸಿ ಕಾಲೇಜು ತರಲು ಸಫಲ: ಶಾಸಕಕನ್ನಡಪ್ರಭ ವಾರ್ತೆ ಎಚ್‌.ಡಿ. ಕೋಟೆತಾಲೂಕಿಗೆ ಪ್ರಥಮವಾಗಿ ಬಿ.ಎಸ್ಸಿ ಕಾಲೇಜು ತರುವ ನಿಟ್ಟಿನಲ್ಲಿ ಸತತ ಪ್ರಯತ್ನ ಮಾಡಿ ಯಶಸ್ಸು ಕಂಡಿದ್ದೇವೆ ಎಂದು ಶಾಸಕ ಅನಿಲ್ ಚಿಕ್ಕಮಾದು ಹೇಳಿದರು.ಪಟ್ಟಣದ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಎಸ್. ಸಿಪಿ, ಟಿ.ಎಸ್.ಪಿ ಯೋಜನೆಯಲ್ಲಿ ಗುರುವಾರ ನೂತನ ಕಟ್ಟಡ ನಿರ್ಮಿಸಲು ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.ಎಚ್.ಡಿ. ಕೋಟೆ ತಾಲೂಕಿಗೆ ಪ್ರಪ್ರಥಮವಾಗಿ ಬಿ.ಎಸ್ಸಿ ಕಾಲೇಜನ್ನು ತರುವ ನಿಟ್ಟಿನಲ್ಲಿ ಸತತ ಪ್ರಯತ್ನ ಮಾಡಿ, ಶಿಕ್ಷಣ ಇಲಾಖೆ ಸಚಿವರೊಂದಿಗೆ ಚರ್ಚಿಸಿ ಹಾಗೂ ಮುಖ್ಯಮಂತ್ರಿಗಳಿಗೂ ಮನವಿ ಸಲ್ಲಿಸಿದ್ದೆ ಎಂದು ತಿಳಿಸಿದರು.ಎಚ್.ಡಿ. ಕೋಟೆಯ ಪದವಿ ಪೂರ್ವ ಕಾಲೇಜಿಗೆ ನೂತನವಾಗಿ 2.70 ಕೋಟಿ ವೆಚ್ಚದಲ್ಲಿ 6 ಕೊಠಡಿಗಳನ್ನು ನಿರ್ಮಾಣ ಮಾಡಲು ಭೂಮಿ ಪೂಜೆ ನೆರವೇರಿಸಿದ್ದೇನೆ, ಈಗಾಗಲೇ ಒಂದು ಕೋಟಿ ರು.ವೆಚ್ಚದಲ್ಲಿ 5 ಕೊಠಡಿಗಳ ಕಾಮಗಾರಿ ನಿರ್ಮಾಣ ಹಂತದಲ್ಲಿವೆ. ಮುಂದಿನ ಶೈಕ್ಷಣಿಕ ವರ್ಷಕ್ಕೆ ಈ ಕೊಠಡಿಗಳು ಬಳಕೆಗೆ ಸಿಗಲಿವೆ ಎಂದರು.ಕಾಲೇಜಿನ ಪ್ರಾಂಶುಪಾಲ ಎಚ್.ಆರ್. ಅರುಣ್ ಕುಮಾರ್, ಮೈಮುಲ್ ನಿರ್ದೇಶಕ ಈರೇಗೌಡ, ರಾಜೇಗೌಡ, ಪ್ರದೀಪ, ರಾಜು, ಸುದರ್ಶನ್, ಪ್ರಾಧ್ಯಾಪಕ ಕಾತ್ಯಾಯಿನಿ, ಗಣೇಶ, ಕೆಂಪರಾಜು, ಪುಷ್ಪಲತಾ, ಪೂರ್ಣಿಮಾ, ರಾಜಶೇಖರ, ಪುಟ್ಟರಾಜು, ನಿಂಗರಾಜು, ಬೋರಮ್ಮ ಅಂಗಡಿ, ದಮ್ಮೂರಪ್ಪ, ಗುರುದತ್ತ ಕುಮಾರ್, ಪುಟ್ಟರಾಜು, ಬಾಲಾಜಿ, ಮಹದೇವಮ್ಮ ಇದ್ದರು.