ಸಾರಾಂಶ
ಬಾಗಲಕೋಟೆ: ನಿಗಮ ಮಂಡಳಿಗಳಿಗೆ ಸರ್ಕಾರ ಅಧ್ಯಕ್ಷರನ್ನು ನೇಮಿಕ ಮಾಡಿರುವುದು ಜಿಲ್ಲೆಯಲ್ಲಿ ಕಾರ್ಯಕರ್ತರಿಗೆ ಯಾವುದೇ ಅಸಮಾಧಾನವಿಲ್ಲ ಎಂದು ಜಿಲ್ಲಾಧ್ಯಕ್ಷ ಎಸ್.ಜಿ.ನಂಜಯ್ಯನಮಠ ಹೇಳಿದ್ದಾರೆ.
ಬಾಗಲಕೋಟೆ: ನಿಗಮ ಮಂಡಳಿಗಳಿಗೆ ಸರ್ಕಾರ ಅಧ್ಯಕ್ಷರನ್ನು ನೇಮಿಕ ಮಾಡಿರುವುದು ಜಿಲ್ಲೆಯಲ್ಲಿ ಕಾರ್ಯಕರ್ತರಿಗೆ ಯಾವುದೇ ಅಸಮಾಧಾನವಿಲ್ಲ ಎಂದು ಜಿಲ್ಲಾಧ್ಯಕ್ಷ ಎಸ್.ಜಿ.ನಂಜಯ್ಯನಮಠ ಹೇಳಿದ್ದಾರೆ.
ಬಾಗಲಕೋಟೆ ಪಟ್ಟಣ ಅಭಿವೃದ್ದಿ ಪ್ರಾಧಿಕಾರ ಅಧ್ಯಕ್ಷರನ್ನಾಗಿ ಶಾಸಕ ಮೇಟಿ ಅವರನ್ನು ನೇಮಿಸಿದ್ದಕ್ಕೆ ಅಸಮಾಧಾನ ಹೊಗೆ ಆಡುತ್ತಿದೆ ಎಂಬ ಪತ್ರಕರ್ತರ ಪ್ರಶ್ನೆಗೆ, ಯಾವುದೇ ಅಸಮಾಧಾನವಿಲ್ಲ. ಯಾರಿಗೂ ವಾಗ್ದಾನ ಮಾಡಿಲ್ಲ. ಪ್ರಯತ್ನ ಮಾಡುತ್ತೇವೆ ಎಂದು ಹೇಳಿದ್ದೇವೆ. ಆದರೆ ಸರ್ಕಾರ ಈಗಾಗಲೇ ನಿಗಮ ಮಂಡಳಿಗೆ ನೇಮಕ ಮಾಡಿ ಆದೇಶ ಹೊರಡಿಸಿದೆ ಎಂದರು.ಜಿಲ್ಲೆಯಲ್ಲಿ ಬೇರೆ ಪಕ್ಷದಿಂದ ಬರುವವರೂ ಮತ್ತು ನಮ್ಮ ಪಕ್ಷದಿಂದ ಹೊರೆಗಡೆ ಹೋಗುವವರು ಇದ್ದೇ ಇರುತ್ತಾರೆ. ಆದರೆ ಸ್ಥಾನಮಾನ ಬೇಕಾದರೆ ಕಾಯ ಬೇಕಾಗುತ್ತದೆ ಪಕ್ಷ ಯಾರನ್ನೂ ಕೈ ಬಿಡುವುದಿಲ್ಲ. ಸಾಧ್ಯ ಇದ್ದ ಮಟ್ಟಿಗೆ ಅವಕಾಶ ನೀಡುತ್ತದೆ ಎಂದರು.