ಸಾರಾಂಶ
ಕನ್ನಡಪ್ರಭ ವಾರ್ತೆ ಚಾಮರಾಜನಗರ
ದೇಶಾದ್ಯಂತ ಮತಗಳ್ಳತನ ತಡೆಯುವ ಸಂಬಂಧ ಎಐಸಿಸಿ ಆದೇಶದ ಮೇರೆಗೆ ನಗರದ ಜಿಲ್ಲಾ ಕಾಂಗ್ರೆಸ್ ಸಮಿತಿ ಕಚೇರಿಯಲ್ಲಿ ಚಾಮರಾಜನಗರ ನಗರ ಹಾಗೂ ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ವತಿಯಿಂದ ಚಾಮರಾಜನಗರ ವಿಧಾನಸಭೆ ಕ್ಷೇತ್ರದಲ್ಲಿ ವೋಟ್ ಚೋರಿ ಸಹಿ ಸಂಗ್ರಹ ಅಭಿಯಾನಕ್ಕೆ ಚಾಲನೆ ನೀಡಲಾಯಿತು.ಶಾಸಕ ಸಿ.ಪುಟ್ಟರಂಗಶೆಟ್ಟಿ ಮಾತನಾಡಿ, ದೇಶದ ವಿವಿಧೆಡೆ ಮತಗಳ್ಳತನ ನಡೆಯುತ್ತಿದ್ದು, ಪಕ್ಷಕ್ಕೆ ನಿರೀಕ್ಷಿತ ಪ್ರಮಾಣದ ಮತಗಳು ಚಲಾವಣೆಯಾಗುತ್ತಿಲ್ಲ, ಇದನ್ನು ತಡೆಯುವ ಸಂಬಂಧ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವೋಟ್ ಚೋರಿ ಸಹಿ ಸಂಗ್ರಹ ಅಭಿಯಾನದ ಉಸ್ತುವಾರಿ ವಹಿಸಿದ್ದಾರೆ. ಈ ಮಹತ್ವದ ಕಾರ್ಯಕ್ಕೆ ಕಾಂಗ್ರೆಸ್ ಕಾರ್ಯಕರ್ತರು, ಮುಂಚೂಣಿ ಘಟಕದ ಪದಾಧಿಕಾರಿಗಳು ಕೈಜೋಡಿಸಬೇಕು, ಪಕ್ಷದ ಹಿತದೃಷ್ಟಿಯಿಂದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ ಅವರ ಕೈಬಲಪಡಿಸಬೇಕು, ಚಾಮರಾಜನಗರ ವಿಧಾನಸಭೆ ಕ್ಷೇತ್ರದಲ್ಲಿ 230 ಬೂತ್ ಗಳಿದ್ದು, ಪ್ರತಿಬೂತ್ ನಲ್ಲೂ ಕನಿಷ್ಠ 100 ಸಹಿ ಸಂಗ್ರಹವಾಗುವ ರೀತಿಯಲ್ಲಿ ತಾವು ನೋಡಿಕೊಳ್ಳಬೇಕು ಎಂದರು.
ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಪಿ.ಮರಿಸ್ವಾಮಿ ಮಾತನಾಡಿ, ಜಿಲ್ಲೆಯ ಒಂದು ವಿಧಾನಸಭಾ ಕ್ಷೇತ್ರದಲ್ಲಿ ತಲಾ 25 ಸಾವಿರದಂತೆ 4 ವಿಧಾನಸಭೆ ಕ್ಷೇತ್ರಗಳಲ್ಲಿ 1 ಲಕ್ಷ ಸಹಿ ಸಂಗ್ರಹಿಸುವ ಗುರಿ ಹೊಂದಲಾಗಿದೆ ಎಂದರು.ಈ ಸಂದರ್ಭದಲ್ಲಿ ಜಿಲ್ಲಾ ಉಪಾಧ್ಯಕ್ಷ ಬಿ.ಕೆ.ರವಿಕುಮಾರ್, ಚಾಮರಾಜನಗರ ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹಮದ್ ಅಸ್ಗರ್, ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎ.ಎಸ್.ಗುರುಸ್ವಾಮಿ, ಎಪಿಎಂಸಿ ಅಧ್ಯಕ್ಷ ಮಹದೇವಸ್ವಾಮಿ (ಸೋಮೇಶ್), ಪಿಎಲ್‌ಡಿ ಬ್ಯಾಂಕ್‌ನಿರ್ದೇಶಕ ಬಸುಮರಿ, ಮಹಿಳಾ ಜಿಲ್ಲಾಧ್ಯಕ್ಷೆ ನಾಗರತ್ನ,ನಗರಸಭೆ ಸದಸ್ಯೆ ಚಿನ್ನಮ್ಮ,ಜಿಪಂ ಮಾಜಿ¸ದಸ್ಯರಾದ ಕೆ.ನವೀನ್, ರಮೇಶ್, ಜಿ,ಪಂ ಕೆ,ಡಿ,ಪಿ ಸದಸ್ಯ ಸೈಯದ್‌ಮುಜಾಯಿದ್, ಚುಡಾಮಾಜಿಅಧ್ಯಕ್ಷ ಸುಹೇಲ್ ಅಲಿಖಾನ್, ಶಕುಂತಲಾ, ಮರಿಯಾಲದಹುಂಡಿ ಕುಮಾರ್, ನಾಗಯ್ಯನಾಗವಳ್ಳಿ, ಚಂದು ಕಾಗಲವಾಡಿ, ಆಯಿಭ್‌ಖಾನ್, ಸಿದ್ದರಾಜು, ರಾಜು, ಕಾಂಗ್ರೆಸ್ ಪಕ್ಷದ ವಿವಿದ ಘಟಕದ ಅಧ್ಯಕ್ಷರು ಪಧಾಧಿಕಾರಿಗಳು ಕಾರ್ಯಕರ್ತರು ಮುಖಂಡರು ಹಾಜರಿದ್ದರು.