ರೈತರು ಇರುವ ಭೂಮಿ ಉಳಿಸಿಕೊಂಡು ಕೃಷಿ ಮುಂದುವರಿಸಿ

| Published : Oct 20 2025, 01:02 AM IST

ರೈತರು ಇರುವ ಭೂಮಿ ಉಳಿಸಿಕೊಂಡು ಕೃಷಿ ಮುಂದುವರಿಸಿ
Share this Article
  • FB
  • TW
  • Linkdin
  • Email

ಸಾರಾಂಶ

ಕೃಷಿ ಪೂರಕವಾದ ಸಣ್ಣ ಉದ್ಯಮಗಳು ಸ್ಥಾಪನೆಯಾಗಿ ರೈತ ಯುವಕರಿಗೆ ಉದ್ಯೋಗ ದೊರೆಯಬೇಕು.

ಕನ್ನಡಪ್ರಭ ವಾರ್ತೆ ಮೈಸೂರು

ಮೈಸೂರು ಸುತ್ತಮುತ್ತ ಕೃಷಿ ಭೂಮಿ ಕೃಷಿಯೇತರ ಉದ್ದೇಶಕ್ಕೆ ಬಳಕೆ ಜಾಸ್ತಿಯಾಗಿದೆ. ರೈತ ಸಮುದಾಯ ಇರುವ ಭೂಮಿಯನ್ನು ಉಳಿಸಿಕೊಂಡು ಕೃಷಿಯನ್ನು ಮುಂದುವರಿಸಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಕರೆ ನೀಡಿದರು.

ಮೈಸೂರು ತಾಲೂಕು ಇಲವಾಲದಲ್ಲಿ ನಡೆದ ತಾಲೂಕು ಘಟಕದ ಪದಾಧಿಕಾರಿಗಳ ಮತ್ತು ಇಲವಾಲ ಹೋಬಳಿಯ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಈ ಭಾಗದಲ್ಲಿ ಕೃಷಿ ಪೂರಕವಾದ ಸಣ್ಣ ಉದ್ಯಮಗಳು ಸ್ಥಾಪನೆಯಾಗಿ ರೈತ ಯುವಕರಿಗೆ ಉದ್ಯೋಗ ದೊರೆಯಬೇಕು. ಇಲ್ಲದಿದ್ದಲ್ಲಿ ನಗರದ ಸುತ್ತಮುತ್ತ ಕೃಷಿ ನಾಶವಾಗುತ್ತದೆ ಎಂದರು.

ಸಂಘದ ಜಿಲ್ಲಾಧ್ಯಕ್ಷ ಹೊಸೂರು ಕುಮಾರ್, ಮಹಿಳಾ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ನೇತ್ರಾವತಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ. ಮರಂಕಯ್ಯ, ಜಿಲ್ಲಾ ಕಾರ್ಯದರ್ಶಿ ನಾಗನಹಳ್ಳಿ ವಿಜಯೇಂದ್ರ, ಮೈಸೂರು ತಾಲೂಕು ಅಧ್ಯಕ್ಷ ಆನಂದ ಪ್ರಭಾಕರ್, ತಾಲೂಕು ಪ್ರಧಾನ ಕಾರ್ಯದರ್ಶಿ ಮಂಡಕಳ್ಳಿ ಮಹೇಶ್, ಕಾರ್ಯದರ್ಶಿ ನಾಗನಹಳ್ಳಿ ಚಂದ್ರಶೇಖರ್, ಯುವ ಘಟಕದ ತಾಲೂಕು ಅಧ್ಯಕ್ಷ ಮಹೇಶ, ತಾಲೂಕು ಸಂಘಟನಾ ಕಾರ್ಯದರ್ಶಿ ಬಸಪ್ಪ ನಾಯಕ, ಇಲವಾಲ ಹೋಬಳಿ ಘಟಕದ ಅಧ್ಯಕ್ಷ ವೆಂಕಟೇಶ್ ಮೊದಲಾದವರು ಇದ್ದರು.