ಸಾರಾಂಶ
ದಾಬಸ್‌ಪೇಟೆ: ಚಲನಚಿತ್ರ ನಟ ದರ್ಶನ್ ಅವರು ಹಿರಿಯ ನಟಿ ಲೀಲಾವತಿ ಅವರು ನಿರ್ಮಿಸಿರುವ ಪಶು ಆಸ್ಪತ್ರೆಗೆ ಭೇಟಿ ನೀಡಿದ ಬಳಿಕ ಲೀಲಾವತಿ ಅವರ ಆರೋಗ್ಯ ವಿಚಾರಿಸಿದರು.
ನೆಲಮಂಗಲ ತಾಲೂಕಿನ ಸೋಲದೇವನಹಳ್ಳಿ ಗ್ರಾಪಂ ಬಳಿ ನಿರ್ಮಿಸಿರುವ ಪಶು ಆಸ್ಪತ್ರೆ ಭೇಟಿ ಬಳಿಕ ಲೀಲಾವತಿ ಅವರ ಮನೆಗೆ ತೆರಳಿ ಕೆಲಕಾಲ ಅವರ ಮನೆಯಲ್ಲಿದ್ದು ಆರೋಗ್ಯ ವಿಚಾರಿಸಿದರು.87 ವರ್ಷದ ಹಿರಿಯ ನಟಿ ಲೀಲಾವತಿಯವರು ಆರೋಗ್ಯ ಸಮಸ್ಯೆಯಿಂದಾಗಿ ಮನೆಯಲ್ಲಿಯೇ ವಿಶ್ರಾಂತಿ ಪಡೆಯುತ್ತಿದ್ದಾರೆ. ಇತ್ತೀಚೆಗೆ ಅನೇಕ ಕಲಾವಿದರು, ಸಿನಿಮಾ ನಟ, ನಟಿಯರು, ನಿರ್ದೇಶಕರು ಮತ್ತು ತಂತ್ರಜ್ಞರು ಸೋಲದೇವನಹಳ್ಳಿಗೆ ತೆರೆಳ ಆರೋಗ್ಯ ವಿಚಾರಿಸುತ್ತಿದ್ದಾರೆ.
ನಟ ದರ್ಶನ್ ಮಾತನಾಡಿ, ಕನ್ನಡ ಚಿತ್ರರಂಗಕ್ಕೆ ಲೀಲಾವತಿ ಅಮ್ಮನವರ ಕೊಡುಗೆ ಅಪಾರ. ಅವರ ಸಿನಿಮಾಗಳನ್ನು ನೋಡಿಕೊಂಡು ಬೆಳೆದಿದ್ದೇವೆ. ಅವರ ಅಭಿನಯಕ್ಕೆ ಸೋಲದ ವ್ಯಕ್ತಿಯೇ ಇಲ್ಲ. ಚಿತ್ರರಂಗದ ಜತೆಗೆ ಈ ಭಾಗದ ಜನಗಾಗಿ ಅವರು ಆಸ್ಪತ್ರೆ ಹಾಗೂ ಪ್ರಾಣಿಗಳಿಗೆ ಪಶು ಆಸ್ಪತ್ರೆ ನಿರ್ಮಿಸಿರುವ ಅವರ ಕಾರ್ಯ ಶ್ಲಾಘನೀಯ ಎಂದರು.ನ.28ರಂದು ಪಶು ಆಸ್ಪತ್ರೆ ಉದ್ಘಾಟನೆ: ನ.26ರಂದು ಭಾನುವಾರ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಉದ್ಘಾಟನೆ ಮಾಡಬೇಕಾಗಿತ್ತು. ಡಿ.ಕೆ.ಶಿವಕುಮಾರ್ ಅವರು ಕಾರಣಾಂತರಗಳಿಂದ ಬರದ ಕಾರಣ ಸಾಂಕೇತಿಕವಾಗಿ ಪೂಜೆ ಮಾಡಿ ಉದ್ಘಾಟಿಸಲಾಯಿತು. ನ.28ರಂದು ಬೆಳಿಗ್ಗೆ 10 ಗಂಟೆಗೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಶಾಸಕ ಎನ್.ಶ್ರೀನಿವಾಸ್, ವಿಧಾನ ಪರಿಷತ್ ಸದಸ್ಯರಾದ ಎಸ್.ರವಿ ಸೇರಿದಂತೆ ಇಲಾಖಾ ಅಧಿಕಾರಿಗಳು ಉದ್ಘಾಟಿಸಲಿದ್ದಾರೆ.ಪೋಟೋ 8 : ಸೋಲದೇವನಹಳ್ಳಿಯಲ್ಲಿ ನಟಿ ಲೀಲಾವತಿ ಅವರು ನಿರ್ಮಿಸಿರುವ ಪಶು ಆಸ್ಪತ್ರೆಯಲ್ಲಿ ಏರ್ಪಡಿಸಿದ್ದ ಪೂಜೆಯಲ್ಲಿ ನಟ ದರ್ಶನ್ ಭಾಗವಹಿಸಿದ್ದರು.