ಕುತ್ತಾರು ದೆಕ್ಕಾಡು ಕೊರಗಜ್ಜನ ಆದಿಸ್ಥಳಕ್ಕೆ ನಟ ದರ್ಶನ್‌ ಭೇಟಿ

| Published : Mar 11 2024, 01:17 AM IST

ಕುತ್ತಾರು ದೆಕ್ಕಾಡು ಕೊರಗಜ್ಜನ ಆದಿಸ್ಥಳಕ್ಕೆ ನಟ ದರ್ಶನ್‌ ಭೇಟಿ
Share this Article
  • FB
  • TW
  • Linkdin
  • Email

ಸಾರಾಂಶ

ಭಾನುವಾರ ಹೆಚ್ಚಿನ ಸಂಖ್ಯೆಯಲ್ಲಿದ್ದ ಭಕ್ತರು ದರ್ಶನ್‌ ಭೇಟಿ ಗಮನಿಸಿ ಅವರ ಜೊತೆಗೆ ಸೆಲ್ಫೀ ಹಾಗೂ ಭಾವಚಿತ್ರ ತೆಗೆಯಲು ಮುಗಿಬಿದ್ದರು. ಆದರೆ ಜತೆಗಿದ್ದ ಬಾಡಿಗಾರ್ಡ್‌ಗಳು ಅಭಿಮಾನಿಗಳ ಕಾಲರ್‌ ಹಿಡಿದು ತಳ್ಳಿದ್ದು , ಸಾರ್ವಜನಿಕ ವಲಯದಲ್ಲಿ ಮುಜುಗರ ಉಂಟು ಮಾಡಿಸಿತು.

ಕನ್ನಡಪ್ರಭ ವಾರ್ತೆ ಉಳ್ಳಾಲ ಮಂಗಳೂರು ಹೊರವಲಯದ ಕುತ್ತಾರು ದೆಕ್ಕಾಡುವಿನ ಕೊರಗಜ್ಜ ಆದಿತಳಕ್ಕೆ ಚಿತ್ರನಟ ದರ್ಶನ್‌ ಸಹಿತ ಹಲವು ಚಿತ್ರನಟರು ಭಾನುವಾರ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು. ಈ ವೇಳೆ ಮಂಡ್ಯ ಸಂಸದೆ ಸುಮಲತಾ ಪರ ಮಾತನಾಡಿದ ದರ್ಶನ್, ಚುನಾವಣಾ ಪ್ರಚಾರ ವಿಚಾರದಲ್ಲಿ ಹೆತ್ತ ತಾಯಿಯ ಎಂದಾದರೂ ಬಿಟ್ಟು ಕೊಡಕಾಗುತ್ತಾ ಎಂದಿದ್ದಾರೆ. ಮಂಡ್ಯ ಕ್ಷೇತ್ರದ ಚುನಾವಣೆ ವಿಷಯದ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಮೊನ್ನೆವರೆಗೂ ಎಲ್ಲ ಸುಮಲತಾ ಅಮ್ಮನ ಜೊತೆ ಇದ್ದೆ, ಈಗ ಅವರ ಕೈ ಬಿಟ್ಟರೆ ಆಗುತ್ತಾ ಸರ್, ನಿಮ್ಮ ಮನೇಲಿ ನಿಮ್ಮ ತಾಯಿನ ಬಿಟ್ಟು ಬಿಡುತ್ತೀರಾ, ಸುಮಲತಾ ಅಮ್ಮ ಅಮ್ಮನೇ ಎಂದಿದ್ದಾರೆ.ಮಂಗಳೂರಿಗೆ ಸುಮಾರು ಸಲ ಬಂದಿದ್ದೆ, ಆದರೆ ಕುತ್ತಾರಿಗೆ ಬರೋದಕ್ಕೆ ಆಗಿರಲಿಲ್ಲ. ಕುತ್ತಾರು ಏನು ಡಿಫರೆನ್ಸ್ ಇಲ್ಲ ,ಎಲ್ಲ ದೇವಸ್ಥಾನ ಒಂದೇ. ಎಲ್ಲರೂ ಈ ಕ್ಷೇತ್ರದ ಬಗ್ಗೆ ಹೇಳುತ್ತಾ ಇದ್ದರು, ಹಾಗಾಗಿ ಭೇಟಿ ನೀಡಿ ಪ್ರಾರ್ಥಿಸಿದ್ದೇನೆ. ನಾನು ಭೇಟಿ ನೀಡಿದಕ್ಕೆ ಯಾವುದೇ ಬೇರೆ ಕಾರಣ ಇಲ್ಲ ಎಂದ ಅವರು, ನಾನು ಏನು ಪ್ರಾರ್ಥನೆ ಮಾಡಿದೆ ಎಂದು ಹೇಳಿದರೆ ನೀವು ನೆರವೇರಿಸಿಕೊಡುತ್ತೀರಾ ಎಂದು ಗರಂ ಆದರು.ಹಾಸ್ಯ ನಟ ಚಿಕ್ಕಣ್ಣ, ಪ್ರಶಾಂತ್‌ ಮಾರ್ಲ, ಮಹಾಬಲ ಶೆಟ್ಟಿ , ವಿದ್ಯಾಚರಣ್‌ ಶೆಟ್ಟಿ, ದೇವಿಪ್ರಸಾದ್‌ ಶೆಟ್ಟಿ, ಪ್ರೀತಮ್‌ ಶೆಟ್ಟಿ ಹಾಗೂ ಕೊರಗಜ್ಜ ಆದಿಸ್ಥಳ ದೆಕ್ಕಾಡುವಿನ ಟ್ರಸ್ಟಿಗಳು ಇದ್ದರು. ಭಾನುವಾರ ಹೆಚ್ಚಿನ ಸಂಖ್ಯೆಯಲ್ಲಿದ್ದ ಭಕ್ತರು ದರ್ಶನ್‌ ಭೇಟಿ ಗಮನಿಸಿ ಅವರ ಜೊತೆಗೆ ಸೆಲ್ಫೀ ಹಾಗೂ ಭಾವಚಿತ್ರ ತೆಗೆಯಲು ಮುಗಿಬಿದ್ದರು. ಆದರೆ ಜತೆಗಿದ್ದ ಬಾಡಿಗಾರ್ಡ್‌ಗಳು ಅಭಿಮಾನಿಗಳ ಕಾಲರ್‌ ಹಿಡಿದು ತಳ್ಳಿದ್ದು , ಸಾರ್ವಜನಿಕ ವಲಯದಲ್ಲಿ ಮುಜುಗರ ಉಂಟು ಮಾಡಿಸಿತು.

---ಕಟೀಲು ದೇವಳಕ್ಕೆ ಅಶ್ವಿನಿ ಪುನೀತ್ ಭೇಟಿ

ಮೂಲ್ಕಿ:

ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನಕ್ಕೆ ಅಶ್ವಿನಿ ಪುನೀತ್ ರಾಜ್‌ಕುಮಾರ್‌ ಹಾಗೂ ಚಿತ್ರ ನಿರ್ದೇಶಕ ಸಂತೋಷ್ ಆನಂದ್‌ರಾಮ ಹಾಗೂ ನಟ ಯುವ ರಾಜ್‌ಕುಮಾರ್ ಭೇಟಿ ನೀಡಿ ದೇವರ ದರ್ಶನ ಪಡೆದರು. ಮಾರ್ಚ್ 29ರಂದು ಬಿಡುಗಡೆಯಾಗಲಿರುವ ‘ಯುವ’ ಚಿತ್ರದ ಹಿನ್ನಲೆಯಲ್ಲಿ ಶ್ರೀ ಕ್ಷೇತ್ರಕ್ಕೆ ಚಿತ್ರತಂಡದ ಪ್ರಮುಖರು ಭೇಟಿ ನೀಡಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.