ಮಾದಕ ವಸ್ತುಗಳು ಸೇವನೆ ಬೇಡ: ತಿಪ್ಪಾರೆಡ್ಡಿ

| Published : Mar 11 2024, 01:17 AM IST

ಸಾರಾಂಶ

ಮುದ್ದೇಬಿಹಾಳ: ಮಾದಕ ವಸ್ತುಗಳು ಹಾಗೂ ದುಶ್ಚಟಗಳಿಂದ ದೂರವಿದ್ದರೆ ಉತ್ತಮ ಜೀವನ ರೂಪಿಸಿಕೊಳ್ಳಬಹುದು. ಮಾದಕ ವಸ್ತುಗಳ ಸೇವನೆಯಿಂದ ಸಮಾಜ ಮತ್ತು ಕುಟುಂಬಕ್ಕೂ ತೊಂದರೆ. ಹೀಗಾಗಿ, ಪಾಲಕರು ಮಕ್ಕಳ ಬಗ್ಗೆ ಎಚ್ಚರಿಕೆ ವಹಿಸಬೇಕು ಎಂದು ಪಿಎಸ್‌ಐ ಸಂಜಯಕುಮಾರ ತಿಪ್ಪಾರೆಡ್ಡಿ ಹೇಳಿದರು.

ಮುದ್ದೇಬಿಹಾಳ: ಮಾದಕ ವಸ್ತುಗಳು ಹಾಗೂ ದುಶ್ಚಟಗಳಿಂದ ದೂರವಿದ್ದರೆ ಉತ್ತಮ ಜೀವನ ರೂಪಿಸಿಕೊಳ್ಳಬಹುದು. ಮಾದಕ ವಸ್ತುಗಳ ಸೇವನೆಯಿಂದ ಸಮಾಜ ಮತ್ತು ಕುಟುಂಬಕ್ಕೂ ತೊಂದರೆ. ಹೀಗಾಗಿ, ಪಾಲಕರು ಮಕ್ಕಳ ಬಗ್ಗೆ ಎಚ್ಚರಿಕೆ ವಹಿಸಬೇಕು ಎಂದು ಪಿಎಸ್‌ಐ ಸಂಜಯಕುಮಾರ ತಿಪ್ಪಾರೆಡ್ಡಿ ಹೇಳಿದರು.ಪಟ್ಟಣದ ಪೊಲೀಸ್ ಠಾಣೆಯಿಂದ ಹಮ್ಮಿಕೊಂಡಿದ್ದ ಮಾದಕ ವಸ್ತುಗಳ ಸೇವನೆಯಿಂದ ಉಂಟಾಗುವ ದುಷ್ಪರಿಣಾಮಗಳ ಕುರಿತು ಅರಿವು ಮೂಡಿಸುವ ಹಾಗೂ ಪೊಲೀಸ್ ಇಲಾಖೆಯ ಸುವರ್ಣ ಮಹೋತ್ಸವ ಪ್ರಯುಕ್ತ ಪೊಲೀಸ್ ರನ್ 10ಕೆ/5 ಕೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಯುವಜನರು ಜೀವಕ್ಕೆ ಮಾರಕವಾಗುವ ವ್ಯಸನಗಳನ್ನು ಬೆಳೆಸಿಕೊಳ್ಳಬಾರದು. ಮಾದಕ ವಸ್ತುಗಳನ್ನು ಮಾರುವುದು ಅಥವಾ ಬಳಸುತ್ತಿರುವುದು ಕಂಡುಬಂದಲ್ಲಿ ಪೊಲೀಸರಿಗೆ ಮಾಹಿತಿ ನೀಡುವಂತೆ ತಿಳಸಿದರು. ಅಲ್ಲದೇ, ವಾಹನ ಚಲಾಯಿಸುವ ಪ್ರತಿಯೊಬ್ಬರೂ ಸಂಚಾರ ನಿಯಮಗಳನ್ನು ಪಾಲಿಸಬೇಕು. ಇದರಿಂದ, ಅಪಘಾತಗಳ ಪ್ರಮಾಣವನ್ನು ತಪ್ಪಿಸಬಹುದಾಗಿದೆ ಎಂದು ತಿಳಿಸಿದರು.ಸಿಪಿಐ ಮಲ್ಲಿಕಾರ್ಜುನ ತುಳಸಿಗೇರಿ, ಕ್ರೈಂ ಪಿಎಸ್‌ಐ ಎಸ್.ಆರ್.ನಾಯಕ, ಎಎಸ್‌ಐ ಕೆ.ಎಸ್.ಅಸ್ಕೀ, ಬಿ.ವಿ.ಪವಾರ, ಎಂ.ಪಿ.ಓಕಳೆ, ಅರುಣ ಯಾಳವಾರ, ಉಮೇಶ ಚಿಂಚೂರ, ಎಂ.ಬಿ.ಮುಳವಾಡ, ಬಿ.ಡಿ.ಪವಾರ, ಸಂಗಮೇಶ ತೋಟದ, ಎಂ.ಬಿ.ಹೂಗಾರ, ಚಿದಾನಂದ ಸುರಗಿಹಳ್ಳಿ, ಶಿವಾನಂದ ಮ್ಯಾಗೇರಿ ಸೇರಿದಂತೆ ಸಿಬ್ಬಂದಿ ಇದ್ದರು.