ಸಾರಾಂಶ
ಮೂರು ದಿನಗಳ ಕಾಲ ಮಂಗಳೂರಿನ ವಾಮಂಜೂರು ಸೇರಿದಂತೆ ವಿವಿಧೆಡೆ ಶೂಟಿಂಗ್ ನಡೆಯುತ್ತಿದೆ. ಹಾಗಾಗಿ ಮಂಗಳೂರಿಗೆ ಬಂದಿದ್ದೇವೆ. ಕೊರಗಜ್ಜನ ಬಗ್ಗೆ ಕೇಳುತ್ತಾ ಬಂದಿದ್ದರಿಂದ ಭೇಟಿ ನೀಡಬೇಕೆಂಬ ಮನದಾಸೆಯಿತ್ತು. ಇಲ್ಲಿ ಬಂದು ಆಶೋತ್ತರಗಳನ್ನು ಈಡೇರಿಸುವಂತೆ ಬೇಡಿಕೊಂಡಿದ್ದೇನೆ ಎಂದರು.
ಕನ್ನಡಪ್ರಭ ವಾರ್ತೆ ಉಳ್ಳಾಲ
ಕೊರಗಜ್ಜ ದೈವದ ಬಗ್ಗೆ ಕೇಳುತ್ತಾ ಬಂದಿದ್ದೇನೆ. ಇಂಥ ವಿಶೇಷ ಸ್ಥಳಕ್ಕೆ ಭೇಟಿ ನೀಡುವ ಉದ್ದೇಶದಿಂದ ಮಂಗಳೂರಲ್ಲಿ ಶೂಟಿಂಗ್ ಇರುವ ಸಮಯದಲ್ಲಿ ಬಂದಿದ್ದೇನೆ. ಮುಂದಿನ ಪ್ರಾಜೆಕ್ಟ್‌ನಲ್ಲಿ ಮಗಳಿಗಾಗಿಯೇ ಒಂದು ಚಿತ್ರ ತೆಗೀತಾ ಇದ್ದೇನೆ ಎಂದು ನಟ ದುನಿಯಾ ವಿಜಯ್ ಹೇಳಿದರು.ಅವರು ಕಲ್ಲಾಪು ಬುರ್ದುಗೋಳಿ ಗುಳಿಗ ಕೊರಗಜ್ಜ ಉದ್ಭವ ಶಿಲೆಯ ಆದಿಸ್ಥಳಕ್ಕೆ ಶುಕ್ರವಾರ ರಾತ್ರಿ ಭೇಟಿ ನೀಡಿ ಮಾತನಾಡಿದರು.
ಕುತ್ತಾರು ಆದಿಸ್ಥಳ ಮತ್ತು ಕಲ್ಲಾಪುವಿನ ಎರಡೂ ಕ್ಷೇತ್ರಗಳಲ್ಲಿ ವೈಬ್ರೇಷನ್ ಪವರ್ ಇದೆ. ತಾನು ನಟಿಸುತ್ತಿರುವ 29ನೇ ಚಿತ್ರವನ್ನು ಕಾಟೇರಾದ ಜಡೇಶ್ ಅವರು ನಿರ್ದೇಶಿಸುತ್ತಿದ್ದು, ಚಿತ್ರಕ್ಕೆ ಇನ್ನೂ ಹೆಸರನ್ನಿಟ್ಟಿಲ್ಲ. ಮೂರು ದಿನಗಳ ಕಾಲ ಮಂಗಳೂರಿನ ವಾಮಂಜೂರು ಸೇರಿದಂತೆ ವಿವಿಧೆಡೆ ಶೂಟಿಂಗ್ ನಡೆಯುತ್ತಿದೆ. ಹಾಗಾಗಿ ಮಂಗಳೂರಿಗೆ ಬಂದಿದ್ದೇವೆ. ಕೊರಗಜ್ಜನ ಬಗ್ಗೆ ಕೇಳುತ್ತಾ ಬಂದಿದ್ದರಿಂದ ಭೇಟಿ ನೀಡಬೇಕೆಂಬ ಮನದಾಸೆಯಿತ್ತು. ಇಲ್ಲಿ ಬಂದು ಆಶೋತ್ತರಗಳನ್ನು ಈಡೇರಿಸುವಂತೆ ಬೇಡಿಕೊಂಡಿದ್ದೇನೆ ಎಂದರು.ಬುರ್ದುಗೋಳಿ ಕ್ಷೇತ್ರದ ಪರವಾಗಿ ದುನಿಯಾ ವಿಜಯ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಕದ್ರಿ ಈವೆಂಟ್ಸ್‌ನ ಸಂಚಾಲಕ ಜಗದೀಶ್ ಕದ್ರಿ, ಬುರ್ದುಗೋಳಿ ಕ್ಷೇತ್ರದ ಆಡಳಿತ ಸಮಿತಿಯ ಪುರುಷೋತ್ತಮ ಮೇಲಾಂಟ, ನವೀನ್ ಕಾಯಂಗಳ, ಪ್ರಶಾಂತ್ ಕಾಯಂಗಳ, ಪುರುಷೋತ್ತಮ ಕಲ್ಲಾಪು, ಸಂಜಯ್, ಯೋಗಿಶ್, ಜಯಶ್ರೀ ಕೊಟ್ಟಾರಿ, ದೀಕ್ಷಾ ಕುತ್ತಾರು, ವನಿತಾ ಗಿರೀಶ್, ಗುರುಪ್ರಸಾದ್ ಕೊಟ್ಟಾರಿ, ಪ್ರವೀಣ್ ಕೊಲ್ಯ, ಸದಾನಂದ, ರೇಣುಕಾ ಮೊದಲಾದವರು ಇದ್ದರು.