ನಟಿ, ನಿರ್ಮಾಪಕಿ ವಿಜಯಲಕ್ಷ್ಮೀ ಸಿಂಗ್ ಹಾಗೂ ಬೆಂಗಳೂರಿನ ಡಾ. ಜ್ಯೋತಿಕಾ ಅವರು ಕೃಷ್ಣಮಠಕ್ಕೆ ಆಗಮಿಸಿದರು.

ಉಡುಪಿ: ನಟಿ, ನಿರ್ಮಾಪಕಿ ವಿಜಯಲಕ್ಷ್ಮೀ ಸಿಂಗ್ ಹಾಗೂ ಬೆಂಗಳೂರಿನ ಡಾ. ಜ್ಯೋತಿಕಾ ಅವರು ಕೃಷ್ಣಮಠಕ್ಕೆ ಆಗಮಿಸಿ, ಪರ್ಯಾಯ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರನ್ನು ಭೇಟಿ ಮಾಡಿ ಗೀತಾ ಲೇಖನ ಅಭಿಮಾನದಲ್ಲಿ ತಾವು ಬರೆದ ಗೀತೆ ಪುಸ್ತಕಗಳನ್ನು ಸಮರ್ಪಿಸಿದರು. ಅಲ್ಲದೆ ಫಲಪುಷ್ಪಗಳೊಂದಿಗೆ ಶ್ರೀಪಾದರನ್ನು ಗೌರವಿಸಿದರು.

ಈ ಸಂದರ್ಭದಲ್ಲಿ ಗೀತೆಯನ್ನು ಬರೆದದ್ದರಿಂದ ತಮಗಾದ ಸಂತೋಷವನ್ನು ವ್ಯಕ್ತಪಡಿಸಿದ ಅವರು, ಶ್ರೀಗಳ ಸನ್ಯಾಸಾಶ್ರಮದ ಸುವರ್ಣ ವರ್ಷದ ಹಿನ್ನೆಲೆಯಲ್ಲಿ ನಿರ್ಮಿಸಿದ ಪಾರ್ಥಸಾರಥಿ ರಥಕ್ಕೆ ಸುವರ್ಣವನ್ನು ಸಮರ್ಪಿಸಿದರು. ಅವರಿಬ್ಬರ ಪರವಾಗಿ ಗಾಯಕ ಮಧೂರು ನಾರಾಯಣ ಶರಳಾಯ ಅವರು ಗುರುಗಳಿಗೆ ಶಾಲುಹೊದಿಸಿ, ಪೇಟವನ್ನು ತೊಡಿಸಿ ಗೌರವಿಸಿದರು. ಶ್ರೀಪಾದರು ಅವರಿಗೆ ಅನುಗ್ರಹ ಮಂತ್ರಾಕ್ಷತೆ ನೀಡಿ ಹರಸಿದರು