ಸಾರಾಂಶ
ಬಾಗಲಕೋಟೆ: ನಗರದ ಎಂಆರ್ ಎನ್ ಆಯುರ್ವೇದಿಕ್ ಮೆಡಿಕಲ್ ಕಾಲೇಜಿನಲ್ಲಿ ನಡೆದ 2023-24ನೇ ಸಾಲಿನ ಬಿಎಎಂಎಸ್ ಹಾಗೂ ಬಿಎಸ್ಸಿ ನರ್ಸಿಂಗ್ ವಿದ್ಯಾರ್ಥಿಗಳ ಸ್ವಾಗತ ಸಮಾರಂಭದಲ್ಲಿ ಆರ್ ಜಿಯುಎಚ್ಎಸ್ ನ ಸಿಂಡಿಕೇಟ್ ಸದಸ್ಯ ಡಾ.ಗಜಾನನ್ ಹೆಗಡೆ ಮಾತನಾಡಿ, ಬದಲಾದ ವೈದ್ಯಕೀಯ ವಿಧಾನಗಳಲ್ಲಿ ಆಯುರ್ವೇದ ಪದ್ಧತಿ ದೇಶದಲ್ಲಿಯೇ ಎರಡನೇ ಸ್ಥಾನ ಪಡೆದಿದೆ ಎಂದು ಅಭಿಪ್ರಾಯಪಟ್ಟರು. ವಿದ್ಯಾರ್ಥಿಗಳು ವೈದ್ಯಕೀಯ ಕ್ಷೇತ್ರದಲ್ಲಿನ ಬದಲಾವಣೆಗಳಿಗೆ ತಕ್ಕಂತೆ ಹೊಂದಿಕೊಂಡು ಹೋದರೆ ಯಶಸ್ಸನ್ನು ಸಾಧಿಸಬಹುದು ಎಂದರು.
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಬದಲಾದ ವೈದ್ಯಕೀಯ ವಿಧಾನಗಳಲ್ಲಿ ಆಯುರ್ವೇದ ಪದ್ಧತಿ ದೇಶದಲ್ಲಿಯೇ ಎರಡನೇ ಸ್ಥಾನ ಪಡೆದಿದೆ ಎಂದು ಆರ್ ಜಿಯುಎಚ್ಎಸ್ ನ ಸಿಂಡಿಕೇಟ್ ಸದಸ್ಯ ಡಾ.ಗಜಾನನ್ ಹೆಗಡೆ ಅಭಿಪ್ರಾಯಪಟ್ಟರು.ನಗರದ ಎಂಆರ್ ಎನ್ ಆಯುರ್ವೇದಿಕ್ ಮೆಡಿಕಲ್ ಕಾಲೇಜಿನಲ್ಲಿ ನಡೆದ 2023-24ನೇ ಸಾಲಿನ ಬಿಎಎಂಎಸ್ ಹಾಗೂ ಬಿಎಸ್ಸಿ ನರ್ಸಿಂಗ್ ವಿದ್ಯಾರ್ಥಿಗಳ ಸ್ವಾಗತ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ವಿದ್ಯಾರ್ಥಿಗಳು ವೈದ್ಯಕೀಯ ಕ್ಷೇತ್ರದಲ್ಲಿನ ಬದಲಾವಣೆಗಳಿಗೆ ತಕ್ಕಂತೆ ಹೊಂದಿಕೊಂಡು ಹೋದರೆ ಯಶಸ್ಸನ್ನು ಸಾಧಿಸಬಹುದು ಎಂದರು.
ಸಂಸ್ಥೆಯ ಅಧ್ಯಕ್ಷರಾದ ಮಾಧುರಿ ಮುಧೋಳ ಮಾತನಾಡಿ, ವೈದ್ಯಕೀಯ ವಿದ್ಯಾರ್ಥಿಗಳು ಸಹ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸುವುದರಿಂದ ಉತ್ಸಾಹದಿಂದ ಕಲಿಯಲು ಸಾಧ್ಯವಾಗುತ್ತದೆ ಎಂದರು.ವಾರ್ಷಿಕ ಸಮಾರಂಭದಲ್ಲಿ ಶಿವಾಜಿ ಮಹಾರಾಜರ ಜೀವನ ಆಧಾರಿತ ನಾಟಕ, ಪ್ರಭು ಶ್ರೀ ರಾಮನ ಹಾಡುಗಳಿಗೆ ಹೆಜ್ಜೆ ಕುಣಿತ, ವಿಭಿನ್ನ ರೀತಿಯ ಪ್ರಾದೇಶಿಕ ನೃತ್ಯ ಕಲೆಗಳು ಸೇರಿದ್ದ ಜನಸ್ತೋಮವನ್ನು ರಂಜಿಸಿದವು.
ಕಾಲೇಜಿನ ಪ್ರಾಂಶುಪಾಲರಾದ ಡಾ.ಪ್ರಲ್ಹಾದ್ ಗಂಗಾವತಿ, ಡೀನ್ / ಆಡಳಿತ ಅಧಿಕಾರಿ ಡಾ.ಶಿವಕುಮಾರ್ ಗಂಗಾಲ್, ಟಿಐಆರ್ ಎಸ್ ನ ಪ್ರಾಂಶುಪಾಲರಾದ ಸಚಿನ್ ಬಾತ್ರ, ತೇಜಸ್ ಪಿಯು ಕಾಲೇಜಿನ ಪ್ರಾಂಶುಪಾಲರಾದ ಶಶಾಂಕ್ ದೀಕ್ಷಿತ್ ಹಾಗೂ ಬಿಎಎಂಎಸ್ನ ಪ್ರಾಧ್ಯಾಪಕ ವರ್ಗ ಹಾಗೂ ಬಿಎಸ್ಸಿ ನರ್ಸಿಂಗ್ ಕಾಲೇಜಿನ ಪ್ರಾಧ್ಯಾಪಕರು ಹಾಗೂ ಸಂಸ್ಥೆಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.ಆಡಳಿತಾಧಿಕಾರಿ ಡಾ.ಶಿವಕುಮಾರ್ ಗಂಗಾಲ್ ಕಾಲೇಜಿನ ವಾರ್ಷಿಕ ವರದಿ ಮಂಡಿಸಿದರು. ಡಾ.ವಿಜಯಕುಮಾರ್ ಚವಡಿ ಹಾಗೂ ಡಾ.ರಜನಿ ದಡೇದ ನಿರೂಪಿಸಿದರು. ಡಾ.ವೆಂಕಟೇಶ್ ಗೌಡರ್ ಸ್ವಾಗತಿಸಿದರು. ಡಾ.ಈಶ್ವರ ಪಾಟೀಲ ಪರಿಚಯಿಸಿದರು. ಡಾ.ದೀಪಾ ಗಂಗಾಲ್ ವಂದಿಸಿದರು.