ಪುತ್ತೂರು : ಆದರ್ಶ ವಿವಿಧೋದ್ದೇಶ ಸಹಕಾರ ಸಂಘದ ೧೭ನೇ ಶಾಖೆ ಜ. ೧೦ರಂದು ಈಶ್ವರಮಂಗಲದಲ್ಲಿ ಉದ್ಘಾಟನೆಗೊಳ್ಳಲಿದೆ
ಪುತ್ತೂರು : ಆದರ್ಶ ವಿವಿಧೋದ್ದೇಶ ಸಹಕಾರ ಸಂಘದ ೧೭ನೇ ಶಾಖೆ ಜ. ೧೦ರಂದು ಈಶ್ವರಮಂಗಲದಲ್ಲಿ ಉದ್ಘಾಟನೆಗೊಳ್ಳಲಿದೆ. ಸಂಘಕ್ಕೆ ೨೫ ವರ್ಷ ತುಂಬುವುದರೊಳಗೆ ೨೦ ಶಾಖೆಗಳನ್ನು ತೆರೆಯುವುದು ಹಾಗೂ ೨೦೦ ಕೋಟಿ ರು. ಠೇವಣಿ ಸಂಗ್ರಹಿಸುವ ಗುರಿ ಹೊಂದಲಾಗಿದೆ ಎಂದು ಆದರ್ಶ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷ, ಸಹಕಾರ ರತ್ನ ಸವಣೂರು ಸೀತಾರಾಮ ರೈ ತಿಳಿಸಿದ್ದಾರೆ.ಶುಕ್ರವಾರ ಪುತ್ತೂರು ಪ್ರೆಸ್‌ಕ್ಲಬ್‌ನಲ್ಲಿ ಸುದ್ಧಿಗೋಷ್ಟಿಯಲ್ಲಿ ಮಾತನಾಡಿ, ಈಗಾಗಲೇ ೩೦,೯೦೦ ಸದಸ್ಯರನ್ನು ಹೊಂದಿರುವ ಸಂಘ ಪ್ರಸ್ತುತ ಸಾಲಿನಲ್ಲಿ ೮೨೯.೮೮ ಕೋಟಿ ರು, ವ್ಯವಹಾರ ನಡೆಸುವ ಮೂಲಕ ೨.೦೧ ಕೋಟಿ ರು. ಲಾಭಾಂಶ ಗಳಿಸಿದೆ. ಸಂಘವು ೧೬೧ ಕೋಟಿ ರು. ರೇವಣಿ ಹೊಂದಿದೆ. ೧೪೩ ಕೋಟಿ ರು. ಸಾಲ ವಿತರಿಸಿದೆ. ೩.೪೪ ಕೋಟಿ ರು. ಪಾಲು ಬಂಡವಾಳವನ್ನು ಸಂಘ ಹೊಂದಿದೆ. ಅವಿಭಜಿತ ದ.ಕ. ಜಿಲ್ಲೆಯ ಅತ್ಯುತ್ತಮ ಸಹಕಾರ ಸಂಘ ಹಾಗೂ ಉತ್ತಮ ವಿವಿಧೋದ್ದೇಶ ಸಹಕಾರ ಸಂಘ ಎಂಬ ಪ್ರಶಸ್ತಿಗೂ ಪಾತ್ರವಾಗಿದೆ. ಆರಂಭದಿಂದಲೇ `ಎ'''''''''''''''' ವರ್ಗದ ಶ್ರೇಷ್ಟತೆಯನ್ನು ಕಾಪಾಡಿಕೊಂಡು ಬಂದು ಸದಸ್ಯರಿಗೆ ಶೇ.೧೦ಕ್ಕಿಂತ ಮೇಲ್ಪಟ್ಟು ಡಿವಿಡೆಂಡ್ ನೀಡಿದ ಏಕೈಕ ಸಂಘವಾಗಿದೆ. ಸಮಾಜ ಸೇವೆಯ ಭಾಗವಾಗಿ ೧,೫೪೫ ಮಕ್ಕಳಿಗೆ ೩೧.೧೨ ಲಕ್ಷ ರು. ವಿದ್ಯಾನಿಧಿಯನ್ನು ವಿತರಿಸಿದೆ. ಸಂಘವು ಈಗಾಗಲೇ ಪುತ್ತೂರು, ಸುಳ್ಯ, ಸುಬ್ರಹ್ಮಣ್ಯ, ವಿಟ್ಲ, ಉಜಿರೆ, ಕಡಬ, ಸವಣೂರು, ಸಾಲೆತ್ತೂರು, ಕುಂಬ್ರ, ಬೆಳ್ಳಾರೆ, ಪಂಜ, ಬೊಳುವಾರು, ಮಡಂತ್ಯಾರು, ಬಿಸಿರೋಡ್, ಕಲ್ಲಡ್ಕ ಹಾಗೂ ಪಾಂಡೇಶ್ವರದಲ್ಲಿ ಶಾಖೆಗಳನ್ನು ಹೊಂದಿದ್ದು, ೧೭ನೇ ಶಾಖೆ ಈಶ್ವರಮಂಗಲದ ಗಣೇಶ್ ಕಾಂಪ್ಲೆಕ್ಸ್ ನ ಮೊದಲ ಮಹಡಿಯಲ್ಲಿ ಲೋಕಾರ್ಪಣೆಗೊಳ್ಳಲಿದೆ. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಕೋಡಿಂಬಾಡಿ ವಹಿಸಲಿದ್ದಾರೆ. ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಉದ್ಘಾಟಿಸುವರು.
ಮಾಜಿ ಶಾಸಕ ಸಂಜೀವ ಮಠಂದೂರು ಭದ್ರತಾ ಕೊಠಡಿಯನ್ನು, ಕಾವು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ನನ್ಯ ಅಚ್ಚುತ ಮೂಡತ್ತಾಯ ಕಂಪ್ಯೂಟರ್ ಉದ್ಘಾಟನೆ ಮಾಡುವರು. ಪ್ರಥಮ ಠೇವಣಿ ಪತ್ರವನ್ನು ದ.ಕ. ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಶಶಿಕುಮಾರ್ ಬಾಲ್ಯೊಟ್ಟು ಬಿಡುಗಡೆ ಮಾಡುವರು. ದ.ಕ. ಜಿಲ್ಲಾ ಹಾಲು ಉತ್ಪಾದಕರ ಒಕ್ಕೂಟದ ನಿರ್ದೇಶಕ ಎಸ್.ಬಿ. ಜಯರಾಮ್ ರೈ ಬಳಜ್ಜ, ನೆಟ್ಟಣಿಗೆ ಮುಡ್ನೂರು ಗ್ರಾಪಂ ಅಧ್ಯಕ್ಷೆ ಪೌಝಿಯಾ ಇಬ್ರಾಹಿಂ ಕೆ., ಗಣೇಶ್ ಕಾಂಪ್ಲೆಕ್ಸ್ ಮಾಲೀಕ ಗಣೇಶ್ ರೈ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.ಸುದ್ಧಿಗೋಷ್ಟಿಯಲ್ಲಿ ಸಂಘದ ಉಪಾಧ್ಯಕ್ಷ ಎನ್. ಸುಂದರ ರೈ ಸವಣೂರು, ನಿರ್ದೇಶಕ ಅಶ್ವಿನ್ ಎಲ್. ಶೆಟ್ಟಿ, ನಿರ್ದೇಶಕ ಜೈರಾಜ್ ಭಂಡಾರಿ ನೊಣಾಲು, ಮಹಾಪ್ರಬಂಧಕ ವಸಂತ ಜಾಲಾಡಿ, ಸಹಾಯಕ ಮಹಾ ಪ್ರಬಂಧಕ ಸುನಾದ್‌ರಾಜ್ ಶೆಟ್ಟಿ ಉಪಸ್ಥಿತರಿದ್ದರು.