ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರುಒಂದೇ ವರ್ಗ, ಒಂದೇ ಗುಂಪು ಬರೆದ ಇತಿಹಾಸವನ್ನು ಓದುತ್ತ ಬಂದಿದ್ದೇವೆ. ಆದರೆ, ಇತಿಹಾಸ ಸರಳ ಅಲ್ಲ. ಇತಿಹಾಸದಲ್ಲಿ ಅಂಬೇಡ್ಕರ್ ಅವರಿಗೆ ಅನ್ಯಾಯವಾಗಿದೆ ಎಂದು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ತಿಳಿಸಿದರು.ನಗರದ ಕಲಾಮಂದಿರದ ಕಿರು ರಂಗಮಂದಿರದಲ್ಲಿ ಅಖಿಲ ಭಾರತೀಯ ಸಾಹಿತ್ಯ ಪರಿಷದ್, ರಂಗಭೂಮಿ ಟ್ರಸ್ಟ್ ಮಂಗಳವಾರ ಆಯೋಜಿಸಿದ್ದ ಸಮಾರಂಭದಲ್ಲಿ ರಂಗಕರ್ಮಿ ಅಡ್ಡಂಡ ಕಾರ್ಯಪ್ಪ ಅವರ ನಿಜಮಹಾತ್ಮ ಬಾಬಾ ಸಾಹೇಬ ನಾಟಕ ಕೃತಿಯನ್ನು ಅವರು ಬಿಡುಗಡೆಗೊಳಿಸಿ ಮಾತನಾಡಿದರು.ಡಾ.ಬಿ.ಆರ್. ಅಂಬೇಡ್ಕರ್ ಅವರು ಅರ್ಥಶಾಸ್ತ್ರ ವಿಷಯದಲ್ಲಿ ಪಾಂಡಿತ್ಯ ಸಂಪಾದಿಸಿದ್ದರೂ ನೆಹರು ಅವರು ಆರ್ಥಿಕ ಖಾತೆ ಕೊಡದೇ ಅನ್ಯಾಯ ಮಾಡಿದ್ದರು. ಸತ್ಯವನ್ನು ಜನರ ಮುಂದಿಟ್ಟರೇ ಜನರು ಅರ್ಥ ಮಾಡಿಕೊಳ್ಳುತ್ತಾರೆ ಎಂದ ಅವರು, ಅಡ್ಡಂಡ ಕಾರ್ಯಪ್ಪ ಅವರು ಸತ್ಯವನ್ನು ತಿಳಿಸುವ ಕೆಲಸವೂ ಒಂದು ಹೋರಾಟವಾಗಿದೆ ಎಂದರು.ಕೃತಿ ಕುರಿತು ಲೇಖಕ ವಾದಿರಾಜ್ ಮಾತನಾಡಿ, ಈ ನಾಟಕ ಕೃತಿಯಲ್ಲಿ ಮಹಾತ್ಮ ಗಾಂಧಿ ಮತ್ತು ಅಂಬೇಡ್ಕರ್ ನಡುವಿನ ವಾಗ್ವಾದ, ಮಾತುಕತೆಯ ಹಿನ್ನೆಲೆ ಮುನ್ನೆಲೆ ಇದೆ. ಈ ಸಂವಾದದಲ್ಲಿ ಮಹಾತ್ಮ ಯಾರು ಎಂಬ ಪ್ರಶ್ನೆಯನ್ನು ಎತ್ತುವುದರ ಜೊತೆಗೆ ಉತ್ತರವನ್ನು ತೆರೆದಿಡುತ್ತದೆ ಎಂದು ಹೇಳಿದರು.ದುಂಡು ಮೇಜಿನ ಸಭೆಯ ಚರ್ಚೆಗಳು, ಹೋರಾಟಗಳು, ರಾಷ್ಟ್ರೀಯ ಸ್ವಯಂ ಸೇವಕ ಸಂಘದೊಂದಿಗೆ ಸಂಬಂಧ, ಸಾರ್ವಕರ್ ಜೊತೆಗೆ ಮಾತುಕತೆ, ಗಾಂಧಿ ಕಾಂಗ್ರೆಸ್ ಅಸ್ಪೃಶ್ಯರರಿಗೆ ಏನು ಮಾಡಿತು, ಪಾಕಿಸ್ತಾನದ ನಿಲುವುಗಳು, ದೇಶದ ಸಂವಿಧಾನ ಸಭೆಯ ಚರ್ಚೆಗಳನ್ನು ರಂಗದ ಮೇಲೆ ಕಾರ್ಯಪ್ಪ ತಂದಿದ್ದಾರೆ ಎಂದರು.ಇತಿಹಾಸದಲ್ಲಿ ಹುದುಗಿದ್ದ ಪಾತ್ರಗಳನ್ನು ರಂಗದ ಮೇಲೆ ತರುವುದಕ್ಕೆ ಸೂಕ್ಷ್ಮ ಪ್ರವೃತ್ತಿ ಬೆಳೆಸುವುದರಲ್ಲಿ ಅಡ್ಡಂಡ ಕಾರ್ಯಪ್ಪ ಅವರು ಕಾರ್ಯ ಪ್ರವೃತ್ತರಾಗಿದ್ದಾರೆ. ಇತಿಹಾಸದ ನೈಜ ಸಂಗತಿಗಳನ್ನು ಪ್ರೇಕ್ಷಕನಿಗೆ ನಾಟಿಸುವುದು ಮುಖ್ಯ. ವಿರೋಧಿಗಳು ಒಪ್ಪಿಕೊಳ್ಳುವ ರೀತಿಯಲ್ಲಿ ಕೆಲಸ ಮಾಡಿದ್ದಾರೆ ಎಂದು ಅವರು ತಿಳಿಸಿದರು. ಸತ್ಯ ಹೇಳಲು ಹೆದರವುದಿಲ್ಲಕೃತಿಯ ಕರ್ತೃ ಅಡ್ಡಂಡ ಕಾರ್ಯಪ್ಪ ಮಾತನಾಡಿ, ಸತ್ಯವನ್ನು ಹೇಳಲು ನಾನು ಹೆದರುವುದಿಲ್ಲ. ಅಂಬೇಡ್ಕರ್ ಬಗೆಗಿನ ಸತ್ಯ ತೋರಿಸುವ ಛಲದಿಂದ ಈ ಕೃತಿಯನ್ನು ಬರೆದಿದ್ದೇನೆ. ನಮ್ಮ ಕಡೆ ಅಂಬೇಡ್ಕರ್ ಅವರಿಂದ ನಮಗೇ ಮೋಸವಾಯಿತು. ಮೀಸಲಾತಿ ಇನ್ನೆಷ್ಟು ವರ್ಷ ಇರಬೇಕು ಇತ್ಯಾದಿ ಆಕ್ಷೇಪದ ಮಾತುಗಳನ್ನು ಕೇಳುತ್ತ ಬೆಳೆದೆ. 4- 5 ವರ್ಷಗಳಿಂದ ಅಂಬೇಡ್ಕರ್ ಓದಲಾರಂಭಿಸಿದ ಬಳಿಕ ಸತ್ಯವನ್ನು ಕಂಡುಕೊಂಡೆ ಎಂದರು.42 ಪುಸ್ತಕಗಳನ್ನು ಓದಿ ಬರೆದಿದ್ದೇನೆ. ದೇಶ ವಿಭಜನೆಗೆ ಬಗ್ಗೆ ಅಂಬೇಡ್ಕರ್ ಹೇಳಿರುವ ಮಾತುಗಳು, ದೇಹದಲ್ಲಿ ಬೆಳೆದಿರುವ ದುರ್ಮಾಂಸ ಎಂದು ಹೇಳಿದ್ದಾರೆ. ಸಂಘದ ಶತಮಾನೋತ್ಸವ ಆಚರಣೆ ಹಿನ್ನೆಲೆಯಲ್ಲಿ ಹೆಗಡೆವಾರ್- ಅಂಬೇಡ್ಕರ್ ಸಂವಾದವನ್ನು ನಾಟಕದಲ್ಲಿ ನಿರೂಪಿಸಲಾಗಿದೆ ಎಂದು ಹೇಳಿದರು.ಹಿರಿಯ ಸಮಾಜ ಸೇವಕ ವೆಂಕಟರಾಮ್, ಆದಿತ್ಯ ಆಸ್ಪತ್ರೆಯ ಆಡಳಿತಾಧಿಕಾರಿ ಡಾ. ಚಂದ್ರಶೇಖರ್, ಅಖಿಲ ಭಾರತ ಸಾಹಿತ್ಯ ಪರಿಷದ್‌ಅಧ್ಯಕ್ಷ ಎನ್. ಸುಬ್ರಹ್ಮಣ್ಯ, ವಲಯ ಪ್ರಮುಖ ಡಾ.ವಿ. ರಂಗನಾಥ್, ರಂಗಭೂಮಿ ಟ್ರಸ್ಟ್‌ಕಾರ್ಯದರ್ಶಿ ಅನಿತಾ ಕಾರ್ಯಪ್ಪ ಇದ್ದರು.