ಸಮರ್ಪಕ ಮಳೆ: ರೈತನ ಮೊಗದಲ್ಲಿ ಮಂದಹಾಸ

| Published : Jul 18 2024, 01:34 AM IST

ಸಾರಾಂಶ

ಜೇವರ್ಗಿ ಹಾಗೂ ಯಡ್ರಾಮಿ ತಾಲೂಕಿನಲ್ಲಿ ಕಳೆದ ವರ್ಷ ಮಳೆ ಬಾರದೆ ಬಿತ್ತನೆ ಮಾಡಿದ್ದ ಬೀಜ ಗೊಬ್ಬರ ಹಾಳಾಗಿ ಬೆಳೆ ಬಾರದೆ ಸಾಲದ ಸುಳಿಗೆ ಸಿಕ್ಕು ಕಂಗಾಲಾಗಿದ್ದ ರೈತಾಪಿ ವರ್ಗ ಪ್ರಸಕ್ತ ಸಾಲಿನಲ್ಲಿ ಸಮರ್ಪಕವಾಗಿ ಮಳೆ ಬಂದು ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.

ರವೀಂದ್ರ ವಕೀಲ

ಕನ್ನಡಪ್ರಭ ವಾರ್ತೆ ಜೇವರ್ಗಿಜೇವರ್ಗಿ ಹಾಗೂ ಯಡ್ರಾಮಿ ತಾಲೂಕಿನಲ್ಲಿ ಕಳೆದ ವರ್ಷ ಮಳೆ ಬಾರದೆ ಬಿತ್ತನೆ ಮಾಡಿದ್ದ ಬೀಜ ಗೊಬ್ಬರ ಹಾಳಾಗಿ ಬೆಳೆ ಬಾರದೆ ಸಾಲದ ಸುಳಿಗೆ ಸಿಕ್ಕು ಕಂಗಾಲಾಗಿದ್ದ ರೈತಾಪಿ ವರ್ಗ ಪ್ರಸಕ್ತ ಸಾಲಿನಲ್ಲಿ ಸಮರ್ಪಕವಾಗಿ ಮಳೆ ಬಂದು ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.

ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ವಾಡಿಕೆಗಿಂತ ಅಧಿಕ ಮಳೆಯಾಗಿದ್ದು, ಬಿತ್ತನೆ ಮಾಡಿದ ತೊಗರಿ, ಹತ್ತಿ, ಹೆಸರು, ಎಳ್ಳು ತಮ್ಮ ಕೈ ಹಿಡಿಯುತ್ತವೆ ಎಂಬ ನಂಬಿಕೆ ರೈತರದ್ದಾಗಿದೆ.

ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಮಾಡಿದ ಬೆಳೆಗಳಿಗೆ ಕೀಟಬಾಧೆ ಕಂಡು ಬಂದಿಲ್ಲ. ಕಳೆದ ಒಂದು ದಶಕದಿಂದ ಸಕಾಲಕ್ಕೆ ಮಳೆ ಬರದೇ ಇರುವುದರಿಂದ ಅಲ್ಪಾವಧಿ ಬೆಳೆಗಳಾದ ಎಳ್ಳು, ಹೆಸರು, ರೈತರಿಗೆ ಗಗನ ಕುಸುಮವಾಗಿತ್ತು. ಪ್ರಸಕ್ತ ಸಾಲಿನಲ್ಲಿ ಕಾಲಕ್ಕೆ ತಕ್ಕಂತೆ ಮಳೆಯಾಗಿರುವುದರಿಂದ ಬಹುತೇಕ ರೈತರು ಎಳ್ಳು ಮತ್ತು ಹೆಸರು ಈ ಭಾಗದಲ್ಲಿ ಅಲ್ಪಾವಧಿ ಬೆಳೆಗಳು ರೈತರಿಗೆ ಕೈ ಸೇರಿದ್ದೆಯಾದರೆ ಧೀರ್ಘಾವಧಿ ಬೆಳೆಗಳಿಗೆ ಖರ್ಚುವೆಚ್ಚ ಭರಿಸಲು ಅನುಕೂಲಕರವಾಗಿರುತ್ತದೆ. ಹೀಗಾಗಿ ಮುಂಗಾರಿನ ಮಳೆ ರೈತಾಪಿ ವರ್ಗಕ್ಕೆ ಆಶಾಕಿರಣವಾಗಿದೆ.

ಜೇವರ್ಗಿ ತಾಲೂಕಿನಲ್ಲಿ 211.5 ಮೀ. ಮೀಟರ್ ಸರಾಸರಿ ಮಳೆಗಿಂತ 288.3 ಮೀ. ಮೀಟರ್ ಮಳೆಯಾಗಿದೆ. ಒಟ್ಟು ಜೇವರ್ಗಿ ತಾಲ್ಲೂಕಿನಲ್ಲಿ 36% ಅಧಿಕ ಮಳೆಯಾಗಿದೆ. ಯಡ್ರಾಮಿ ತಾಲೂಕಿನಲ್ಲಿ 184 ಮಿ. ಮೀಟರ್ ಸರಾಸರಿ ಮಳೆಗಿಂತ 263.4 ಮಿ. ಮೀಟರ್ ಮಳೆಯಾಗಿದೆ. ಒಟ್ಟು ಯಡ್ರಾಮಿ ತಾಲೂಕಿನಲ್ಲಿ 42.5 ಮಿಮೀ. ಮಳೆ ಅಧಿಕವಾಗಿದೆ. ಜೇವರ್ಗಿ ತಾಲೂಕಿನಲ್ಲಿ 1,00,980 ಹೆಕ್ಟೇರ್ ಬಿತ್ತನೆ ಗುರಿಯಿದ್ದು ,ಅದರಲ್ಲಿ 71,176 ಹೆಕ್ಟೇರ್ ಕ್ಷೇತ್ರದಲ್ಲಿ ಬಿತ್ತನೆಯಾಗಿದೆ. ಯಡ್ರಾಮಿ ತಾಲೂಕಿನಲ್ಲಿ 64,919 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಗುರಿ ಹೊಂದಲಾಗಿದ್ದು. ಅದರಲ್ಲಿ 47,362 ಹೆಕ್ಟೇರ್ ಕ್ಷೇತ್ರದಲ್ಲಿ ಬಿತ್ತನೆ ಮಾಡಲಾಗಿದೆ.

ಮುಂಗಾರು ಹಂಗಾಮಿನಲ್ಲಿ ತೊಗರಿ ಖುಷ್ಕಿಯಲ್ಲಿ 55,100 ಹೆಕ್ಟೇರ್ ಜಮೀನಿನಲ್ಲಿ ಬಿತ್ತನೆಯಾಗಿದೆ. ಹತ್ತಿ ಖುಷ್ಕಿ ಮತ್ತು ನೀರಾವರಿ ಸೇರಿ 53,015 ಹೆಕ್ಟೇರ್ ಕ್ಷೇತ್ರದಲ್ಲಿ ಬಿತ್ತನೆಯಾಗಿದೆ. ಕಬ್ಬು 6,515 ಹೆಕ್ಟೇರ್ ಕ್ಷೇತ್ರದಲ್ಲಿ ನಾಟಿಮಾಡಲಾಗಿದೆ. ಶೇಂಗಾ ಎಳ್ಳು, ಸೂರ್ಯಕಾಂತಿ. ಗುರೆಳ್ಳು ಹೆಸರು, ಉದ್ದು, ಅಲಸಂದಿ, ಹುರಳಿ, ಬಿತ್ತನೆ ಮಾಡಲಾಗಿದೆ. ಸರಾಸರಿ ಮಳೆಗಿಂತ ಮಳೆ ಪ್ರಮಾಣ ಅಧಿಕವಾಗಿದ್ದರು ಮುಂಗಾರು ಹಂಣಗಾಮಿನಲ್ಲಿ ಬಿತ್ತನೆ ಮಾಡಿದ ಬೆಳೆಗಳಿಗೆ ತೇವಾಂಶದ ಕೊರತೆಯಾಗಿಲ್ಲ.

--

ಮುಂಗಾರು ಹಂಗಾಮಿನಲ್ಲಿ ರೈತರಿಗೆ ರಸಗೊಬ್ಬರ ಹಾಗೂ ಬೀಜಗಳ ಕೊರತೆಯಾಗದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ.

- ಅಬ್ದುಲ್ ಮಾಜೀದ್, ಕೃಷಿ ಇಲಾಖೆ ಸಹಾಯಕ ನಿರ್ದೇಶಕ.

-----

ರೈತರ ಅನುಕೂಲಕ್ಕಾಗಿ ಕೃಷಿ ಇಲಾಖೆ ಯೋಜನೆಗಳನ್ನು ಜಾರಿಗೆ ತಂದಿದ್ದು ಅದರ ಸದುಪಯೋಗವನ್ನು ರೈತರು ಪಡೆದುಕೊಳ್ಳುವ ಮುಖಾಂತರ ಕೃಷಿ ಇಲಾಖೆಯಿಂದ ಕೃಷಿ ಪರಿಕರಗಳನ್ನು ಗಳನ್ನು ನಿಗದಿತ ದರದಲ್ಲಿ ರೈತ ಫಲಾನುಭವಿಗಳಿಗೆ ವಿತರಿಸಬೇಕು.

- ಮರೆಪ್ಪ ಪೂಜಾರಿ, ಜೇವರ್ಗಿ ರೈತ