ಸಾರಾಂಶ
ಭಾರಿ ಸದ್ದು ಮಾಡುವ ಪಟಾಕಿಗಳಿಗೆ ಜಿಲ್ಲಾಡಳಿತ ನಿಷೇಧ ಹೇರಿದೆ. ಹಸಿರು ಪಟಾಕಿಗಳಿಗೆ ಮಾತ್ರ ಅವಕಾಶ ನೀಡಲಾಗಿದೆ. ಆದರೆ ಹಸಿರು ಪಟಾಕಿ ಲೇಬಲ್ ಹಚ್ಚಿ ಹೆಚ್ಚಿನ ಸದ್ದು ಬರುವ ಪಟಾಕಿಗಳನ್ನು ಮಾರಾಟಗಾರರು ಮಾರುತ್ತಿದ್ದು, ಅಂತಹ ಪಟಾಕಿಗಳನ್ನು ತಂದು ಸಿಡಿಸುತ್ತಿರುವ ದೃಶ್ಯಸಾಮಾನ್ಯವಾಗಿತ್ತು.
ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ವಿಘ್ನ ನಿವಾರಕ, ಲಂಬೋದರ, ಏಕದಂತ, ಮೂಷಿಕ ವಾಹನ, ವಿಜ್ಞೆಶ್ವರ, ವಿನಾಯಕ ಎಂಬ ಹಲವಾರು ನಾಮದೇಯಗಳಿಂದ ಕರೆಸಿಕೊಳ್ಳುವ ಗಣಪತಿಯನ್ನ ಶನಿವಾರ ಜಿಲ್ಲೆಯಾದ್ಯಂತ ಶನಿವಾರ ಅದ್ಧೂರಿಯಿಂದ ಆಚರಿಸಲಾಯಿತು.ಚಿಕ್ಕಬಳ್ಳಾಪುರ ನಗರದ ಪ್ರತಿಯೊಂದು ವಾರ್ಡ್ ಗಲ್ಲಿ ಬೀದಿಗಳಲ್ಲೂ ಗಣೇಶ ಪ್ರತಿಷ್ಟಾಪನೆ ಮಾಡುತಿದ್ದಾರೆ ಹತ್ತಾರು ವರ್ಷಗಳಿಂದ ಗಣೇಶ ಹಬ್ಬ ಆಚರಣೆಯಲ್ಲಿ ತೊಡಗಿಸಿಕೊಂಡಿರುವ ಗಣೇಶ ಭಕ್ತರು ಹತ್ತಾರು ಭಂಗಿಗಳಲ್ಲಿ ವಿವಿಧ ದೇವಾಲಯಗಳ ರೂಪದಲ್ಲಿ ಮಂಟಪ ರಚಿಸಿ ಮೂರು ರಿಂದ ಹದಿನೈದು ದಿನಗಳ ಕಾಲ ಪೂಜಿಸಿ ನಂತರ ನೀರಿಗೆ ಬಿಡುವುದು ರೂಢಿ.
ಪ್ರತಿ ಗ್ರಾಮದಲ್ಲೂ ಉತ್ಸವನಗರದ ಗಣಪತಿ ದೇವಾಲಯ, ಮಹಾಕಾಳಿ ದೇವಾಲಯ,ಜಾಲಾರಿ ಗಂಗಮಾಂಭ ದೇವಾಲಯ,ಬಲಮುರಿ ಗಣಪತಿ, ವಾಪಸಂದ್ರ ವಾರ್ಡ್, ಎಪಿಎಂಸಿ ಬಳಿಯ ಮುನಿಸಿಪಲ್ ಲೇಔಟ್,ಭುವನೇಶ್ವರಿ ವೃತ್ತ,ಪ್ರಶಾಂತ ನಗರ, ಹೆಚ್.ಎಸ್.ಗಾರ್ಡನ್,ಕಂದವಾರ,ಅಂಬೇಡ್ಕರ್ ನಗರ, ಬಾಪೂಜಿ ನಗರ ಸೇರಿಂತೆ ನಗರದ ಪ್ರತಿ ವಾರ್ಡ್ ಗಳಲ್ಲಿ ಮತ್ತು ಗ್ರಾಮೀಣ ಭಾಗದ ಪೆರೇಸಂದ್ರ, ದಿಬ್ಬೂರು ಸೇರಿದಂತೆ ಪ್ರತಿ ಗ್ರಾಮಗಳಲ್ಲಿ ಗಣೇಶೋತ್ಸವವನ್ನು ಶ್ರದ್ಧಾ, ಭಕ್ತಿಯಿಂದ ಆಚರಿಸಿದರು.ನಗರದ ಮಹಾಕಾಳಿ ದೇವಾಲಯದಲ್ಲಿ ಮಹಾಕಾಳಿ ಯುವಕರ ಸಂಘವು ಮಹಾಕಾಳಿ ಬಾಬು ನೇತೃತ್ವದಲ್ಲಿ ಬೃಹತ್ ಗಣಪತಿ ಮೂರ್ತಿಯನ್ನು ಪ್ರತಿಷ್ಠಾಪಿಸಿದ್ದರೆ, ಜಾಲಾರಿ ಗಂಗಮಾಂಭ ದೇವಾಲಯದಲ್ಲಿ ರಾಮಲಲ್ಲಾ ಗಣೇಶ ಮೂರ್ತಿ,ವಾಪಸಂದ್ರ ವಾರ್ಡ್ ನ ವಿನಾಯಕ ಗೆಳೆಯರ ಬಳಗ, ಎಪಿಎಂಸಿ ಬಳಿಯ ಮುನಿಸಿಪಲ್ ಲೇಔಟ್ ನ ಶ್ರೀ ಸಿದ್ದಿ ವಿನಾಯಕ ಗೆಳೆಯರ ಸಂಘ ಗಣಪತಿ ಮೂರ್ತಿಗಳನ್ನು ಪ್ರತಿಷ್ಠಾಪಿಸಿದ್ದವು. ಸದ್ದು ಮಾಡಿದ ಪಟಾಕಗಳುಭಾರಿ ಸದ್ದು ಮಾಡುವ ಪಟಾಕಿಗಳಿಗೆ ಜಿಲ್ಲಾಡಳಿತ ನಿಷೇಧ ಹೇರಿದೆ. ಹಸಿರು ಪಟಾಕಿಗಳಿಗೆ ಮಾತ್ರ ಅವಕಾಶ ನೀಡಲಾಗಿದೆ. ಆದರೆ ಹಸಿರು ಪಟಾಕಿ ಲೇಬಲ್ ಹಚ್ಚಿ ಹೆಚ್ಚಿನ ಸದ್ದು ಬರುವ ಪಟಾಕಿಗಳನ್ನು ಮಾರಾಟಗಾರರು ಮಾರುತ್ತಿದ್ದು, ಅಂತಹ ಪಟಾಕಿಗಳನ್ನು ತಂದು ಸಿಡಿಸುತ್ತಿರುವ ದೃಶ್ಯಸಾಮಾನ್ಯವಾಗಿ ಎಲ್ಲಡೆ ಕಂಡು ಬಂತು.