ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ನಗರದಲ್ಲಿ ಶುಕ್ರವಾರ ಜಿಲ್ಲಾ ಬ್ರಾಹ್ಮಣ ಸಭಾ, ಹೊಯ್ಸಳ ಕರ್ನಾಟಕ ಸೇವಾ ಟ್ರಸ್ಟ್ ಮತ್ತು ಇನ್ನಿತರೆ ಸಂಘಟನೆಗಳ ಆಶ್ರಯದಲ್ಲಿ ಭಗವದ್ಪಾದ ಶ್ರೀಆದಿ ಶಂಕರಾಚಾರ್ಯರು ಹಾಗೂ ರಾಮಾನುಜಾಚಾರ್ಯರ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು.ನಗರದ ಗಣಪತಿ ದೇವಾಲಯದಿಂದ ಆಚಾರ್ಯರ ಭಾವ ಚಿತ್ರಗಳ ಮೆರವಣಿಗೆಯಲ್ಲಿ ವಿಪ್ರ ಬಂಧುಗಳು, ಬ್ರಾಹ್ಮಣ ಸಮಾಜದ ವಿವಿಧ ಸಂಘಟನೆಗಳ ಮುಖಂಡರು, ವೇದ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಮೆರವಣಿಗೆಯು ಚಂಡೇ ವಾದನ, ವಿಶ್ವೇಶ್ವರಯ್ಯ ವೇಷಧಾರಿ, ಪಟ ಕುಣಿತ, ನಾದ ಸ್ವರ, ಡೊಳ್ಳು ಕುಣಿತಗಳ ಜಾನಪದ ಕಲಾ ಪ್ರಕಾರದೊಂದಿಗೆ ನಗರದ ಪ್ರಮುಖ ಬೀದಿಗಳಲ್ಲಿ ಸಾಗಿ ನೆಹರು ನಗರದ ಶಂಕರ ಮಠದಲ್ಲಿ ಪೂಜೆ ಸಲ್ಲಿಸಿ ನಂತರ ಶ್ರೀ ಗಣಪತಿ ದೇವಾಲಯದಲ್ಲಿ ಸಂಪನ್ನಗೊಂಡಿತು.ತದ ನಂತರ ಶ್ರೀಶಂಕರರ ಬಗ್ಗೆ ವೇ.ಬ್ರ. ಶಿವಶಂಕರ ದೀಕ್ಷಿತ್ ಅವರಿಂದ ಪ್ರವಚನ ಕಾರ್ಯಕ್ರಮ ನಡೆಯಿತು.
ಮೆರವಣಿಗೆಯಲ್ಲಿ ಬ್ರಾಹ್ಮಣ ಸಭಾದ ಅಧ್ಯಕ್ಷ ಪ್ರೊ.ನರಸಿಂಹ ಮೂರ್ತಿ, ಹೊಯ್ಸಳ ಕರ್ನಾಟಕ ಸೇವಾ ಟ್ರಸ್ಟ್‌ನ ಕಾರ್ಯದರ್ಶಿ ರಾಘವೇಂದ್ರ, ಬಬ್ಬೂರು ಕಮ್ಮೆಯ ಬಾಲಾಜಿ, ಗೋಪಿನಾಥ್, ಲಕ್ಷ್ಮೀ ನಾರಾಯಣ, ಅಖಿಲ ಕರ್ನಾಟಕ ಬ್ರಾಹ್ಮಣ ಸಭಾದ ಉಪಾಧ್ಯಕ್ಷ ಜಿ.ವಿ.ನಾಗರಾಜು, ಕಲಾಶ್ರೀ ವಿದ್ಯಾಶಂಕರ್, ಜಿ.ವಿ.ಕುಮಾರ್, ಪತ್ರಕರ್ತ ಅರುಣ್ ಪ್ರಸಾದ್, ಲಲಿತ ಗುಂಡೂರಾವ್, ಶ್ರೀತೀರ್ಥ ಬ್ರಾಹ್ಮಣ ಸಭಾದ ನಿರ್ದೇಶಕರಾದ ಗೋಪಾಲಕೃಷ್ಣ, ಗೋಪಾಲ್, ಶೆಣೈ, ವೆಂಕಟೇಶ್, ಮಮತ ರಮೇಶ್, ಶಂಕರ್, ಭಾರತಿ ಅಡಿಗ, ಪ್ರೇಮ, ಬಿ.ಜಿ.ಉಮಾ, ಸಂಧ್ಯಾ ರಾಣಿ, ಸದಾಶಿವ ಭಟ್, ವೇ.ಬ್ರಹ್ಮ ಶ್ರೀನರಸಿಂಹ ಮೂರ್ತಿ, ಶಿವಪ್ರಕಾಶ್ ಬಾಬು, ದಾಮೋದರ್ ಮತ್ತು ಅನೇಕ ಮಹಿಳಾ ಮಣಿಯರು ಸೇರಿದಂತೆ ನೂರಾರು ಮಂದಿ ಆಸ್ತಿಕ ಮಹಾಶಯರು ಭಾಗವಹಿಸಿದ್ದರು.ಶಂಕರ ಜಯಂತಿ ಅಂಗವಾಗಿ ಸಾಮೂಹಿಕ ಉಪನಯನ, ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು. ಕಾರ್ಯಕ್ರಮದಲ್ಲಿ ಮಂಡ್ಯ ಶಾಸಕ ರವಿಕುಮಾರ್ ಗಣಿಗ ಭಾಗವಹಿಸಿದ್ದರು.
ಮೇ 7ಕ್ಕೆ ಕೃಷಿ ಜನಜಾಗೃತಿ ಅಭಿಯಾನ: ಜೋಗಿಗೌಡಮಂಡ್ಯ: ಸಮಗ್ರ ಸಾವಯವ ಸುಸ್ಥಿರ ಕೃಷಿ ಟ್ರಸ್ಟ್‌ನಿಂದ ಮೇ 7ರಂದು ಬೆಳಗ್ಗೆ 10.30ಕ್ಕೆ ತಾಲೂಕಿನ ಕೆ.ಗೌಡಗೆರೆ ಗ್ರಾಮದಲ್ಲಿ ಕೃಷಿ ಜನ ಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಟ್ರಸ್ಟ್‌ನ ಅಧ್ಯಕ್ಷ ಜೋಗೀಗೌಡ ತಿಳಿಸಿದರು.
ಕೃಷಿ ಮಾರುಕಟ್ಟೆ ವ್ಯವಸ್ಥೆ, ಸಮಗ್ರ ಕೃಷಿ ವಿಚಾರ, ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಉಪಯೋಗಿಸಿಕೊಳ್ಳುವುದರ ಕುರಿತು ಹಾಗೂ ಇನ್ನೂ ಹಲವು ವಿಚಾರಗಳ ಕುರಿತು ರೈತರ ಸಮ್ಮುಖದಲ್ಲಿ ಪರಿಹಾರ ಕಂಡುಕೊಳ್ಳುವುದಕ್ಕಾಗಿ ಜನಜಾಗೃತಿ ಅಭಿಯಾನ ಹಮ್ಮಿಕೊಂಡಿರುವುದಾಗಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.ರೈತರಿಗಾಗಿ ಸಂಸ್ಥೆ ಮೂಲಕ ಹಂತ ಹಂತವಾಗಿ ಕೃಷಿ ಜ್ಞಾನವನ್ನು ನೀಡುವುದು. ಭೂಮಿಗೆ ತಕ್ಕಂತೆ ಬೆಳೆ ಬೆಳೆಯುವುದು, ಆ ಬೆಳೆಯನ್ನು ಸಮಗ್ರ ಕೃಷಿಯಲ್ಲಿ ಮಾಡುವುದರ ಬಗ್ಗೆ ಅರಿವು ಮೂಡಿಸುವುದು. ಹೆಚ್ಚು ಲಾಭ ಬರುವಂತಹ ಒಂದೇ ಪ್ರದೇಶದಲ್ಲಿ ಪೂರಕ ಬೆಳೆಗಳನ್ನು ಬೆಳೆಯುವ ಕುರಿತು ಚರ್ಚಿಸಲಾಗುವುದು ಎಂದರು.
ಸುದ್ದಿಗೋಷ್ಠಿಯಲ್ಲಿ ಕಾಂತರಾಜು, ರಾಜು ಇದ್ದರು.