ಆದಿಲ್‌ ಪ್ರಕರಣ: 6 ತಂಡಗಳ ರಚನೆ

| Published : May 29 2024, 12:52 AM IST

ಸಾರಾಂಶ

ಚನ್ನಗಿರಿ ಪಟ್ಟಣದಲ್ಲಿ ಆದಿಲ್‌ ಸಾವು ಹಿನ್ನೆಲೆ ಪೊಲೀಸ್ ಠಾಣೆಯ ಮೇಲೆ ಕಳೆದ ಶುಕ್ರವಾರ ರಾತ್ರಿ ನಡೆಸಿದ ಕಲ್ಲು ತೂರಾಟ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಲ್ಲಿಯವರೆಗೆ 28 ಆರೋಪಿಗಳನ್ನು ಬಂಧಿಸಲಾಗಿದೆ. ಮಂಗಳವಾರವೂ ಚನ್ನಗಿರಿ ಠಾಣೆ ಪೊಲೀಸರು ಆರೋಪಿಗಳನ್ನು ಪತ್ತೆಹಚ್ಚುವ ಕಾರ್ಯಾಚರಣೆ ನಡೆಸಿದ್ದಾರೆ.

ಚನ್ನಗಿರಿ: ಚನ್ನಗಿರಿ ಪಟ್ಟಣದಲ್ಲಿ ಆದಿಲ್‌ ಸಾವು ಹಿನ್ನೆಲೆ ಪೊಲೀಸ್ ಠಾಣೆಯ ಮೇಲೆ ಕಳೆದ ಶುಕ್ರವಾರ ರಾತ್ರಿ ನಡೆಸಿದ ಕಲ್ಲು ತೂರಾಟ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಲ್ಲಿಯವರೆಗೆ 28 ಆರೋಪಿಗಳನ್ನು ಬಂಧಿಸಲಾಗಿದೆ. ಮಂಗಳವಾರವೂ ಚನ್ನಗಿರಿ ಠಾಣೆ ಪೊಲೀಸರು ಆರೋಪಿಗಳನ್ನು ಪತ್ತೆಹಚ್ಚುವ ಕಾರ್ಯಾಚರಣೆ ನಡೆಸಿದರು.

ಚನ್ನಗಿರಿ ಪಟ್ಟಣ ಸೇರಿದಂತೆ ಹೊನ್ನೆಬಾಗಿ, ಆಗರಬನ್ನಿಹಟ್ಟಿ, ನಲ್ಲೂರು, ಸಂತೆಬೆನ್ನೂರು ವ್ಯಾಪ್ತಿ ಪ್ರದೇಶಗಳ ಗಲಭೆಕೋರರು ಕಲ್ಲು ತೂರಾಟದಲ್ಲಿ ಭಾಗಿಯಾಗಿದ್ದಾರೆ. ಇವರಲ್ಲಿ ಕೆಲ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ. ಮಂಗಳೂರು, ಬೆಂಗಳೂರಿಗೆ ಹೋಗಿರುವ ಶಂಕೆಯೂ ಇದ್ದು, ಕಿಡಿಗೇಡಿಗಳ ಪತ್ತೆಗೆ ಪೊಲೀಸರು ಶ್ರಮಿಸುತ್ತಿದ್ದಾರೆ. ಆರೋಪಿಗಳನ್ನು ಬಂಧಿಸಲು ಪೊಲೀಸರ 6 ತಂಡಗಳನ್ನು ರಚಿಸಿ, ಬಲೆ ಬೀಸಲಾಗಿದೆ.

- - - (ಆದಿಲ್‌)