ಸುರಪುರ ಅರಸರ ಆಡಳಿತ ವ್ಯವಸ್ಥೆ ಆದರ್ಶ: ದೇಶಪಾಂಡೆ

| Published : Jul 30 2024, 12:36 AM IST

ಸುರಪುರ ಅರಸರ ಆಡಳಿತ ವ್ಯವಸ್ಥೆ ಆದರ್ಶ: ದೇಶಪಾಂಡೆ
Share this Article
  • FB
  • TW
  • Linkdin
  • Email

ಸಾರಾಂಶ

ಎಲ್ಲ ಜಾತಿ, ಜನಾಂಗಗಳ ಮಠ-ಮಾನ್ಯಗಳಿಗೆ ತಮ್ಮ ಆಡಳಿತದಲ್ಲಿ ಅಧಿಕಾರ, ನೆರವು ನೀಡಿದ ಸುರಪುರ ಸಂಸ್ಥಾನದ ಅರಸರ ಆಡಳಿತ ವ್ಯವಸ್ಥೆ ಆದರ್ಶ ಹಾಗೂ ಇತರರಿಗೆ ಮಾದರಿಯವಾಗಿತ್ತು ಎಂದು ಹುಣಸಗಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಹಾಗೂ ಪತ್ರಕರ್ತ ವೆಂಕಟಗಿರಿ ದೇಶಪಾಂಡೆ ಹೇಳಿದರು.

ಕನ್ನಡಪ್ರಭ ವಾರ್ತೆ ಸುರಪುರ

ಎಲ್ಲ ಜಾತಿ, ಜನಾಂಗಗಳ ಮಠ-ಮಾನ್ಯಗಳಿಗೆ ತಮ್ಮ ಆಡಳಿತದಲ್ಲಿ ಅಧಿಕಾರ, ನೆರವು ನೀಡಿದ ಸುರಪುರ ಸಂಸ್ಥಾನದ ಅರಸರ ಆಡಳಿತ ವ್ಯವಸ್ಥೆ ಆದರ್ಶ ಹಾಗೂ ಇತರರಿಗೆ ಮಾದರಿಯವಾಗಿತ್ತು ಎಂದು ಹುಣಸಗಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಹಾಗೂ ಪತ್ರಕರ್ತ ವೆಂಕಟಗಿರಿ ದೇಶಪಾಂಡೆ ಹೇಳಿದರು.

ನಗರದ ಕನ್ನಡ ಸಾಹಿತ್ಯ ಸಂಘದ ಭವನದಲ್ಲಿ ಇತ್ತೀಚೆಗೆ ನಡೆದ ಮಾಜಿ ಸಚಿವ ದಿ. ರಾಜಾ ಮದನ ಗೋಪಾಲ ನಾಯಕರ 4ನೇ ಪುಣ್ಯಸ್ಮರಣೆ ನಿಮಿತ್ತ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಬಹುತ್ವದ ನೆಲೆಗಟ್ಟಿನ ಸುರಪುರ ಸಂಸ್ಥಾನ ಹಾಗೂ ಶ್ರೀ ವೇಣುಗೋಪಾಲನ ವಿಶಿಷ್ಟ ಭಜನಾ ಪರಂಪರೆ ಕುರಿತು ವಿಶೇಷ ಉಪನ್ಯಾಸ ನೀಡಿದರು.

ಇಲ್ಲಿಯ ಅರಸರು ಎಲ್ಲ ಜಾತಿ, ಜನಾಂಗದವರಿಗೆ ಅವರ ಯೋಗ್ಯತೆ, ಅಹರ್ತೆಗೆ ಅನುಗುಣವಾಗಿ ಅಧಿಕಾರ, ಹುದ್ದೆಗಳನ್ನು ಕೊಟ್ಟರು. ಪ್ರತಿಯೊಂದು ಮಠಗಳಿಗೂ ನೆರವು ನೀಡಿದರು. ಮುಸ್ಲಿಂ ಬಾಂಧವರ ಹಬ್ಬಗಳ ಆಚರಣೆಯಲ್ಲಿಯೂ ಸಹಕರಿಸಿದರು. ಪ್ರಜೆಗಳ ಬಗ್ಗೆ ಅಪಾರ ಕಾಳಜಿ ಹೊಂದಿದ್ದರು. ಭೂಮಿ, ಜಹಾಗೀರ್, ಇನಾಮು ಕೊಟ್ಟಿದ್ದರು. ಎಲ್ಲ ಉತ್ಸವ, ಆಚರಣೆಗಳು ಸೌಹಾರ್ದತೆಯಿಂದ ಜರುಗುತ್ತಿದ್ದವು. ಇಲ್ಲಿನ ಆಡಳಿತ ವ್ಯವಸ್ಥೆ ಮಾದರಿ ಎನ್ನಬಹುದು. ಸುರಪುರ ಸಂಸ್ಥಾನ ಬಹುತ್ವ ನೆಲೆಗಟ್ಟಿನದಾಗಿತ್ತು ಎಂದು ಹೆಮ್ಮೆಯಿಂದ ಹೇಳಬಹುದು ಎಂದರು.

ಪಬ್ಲಿಕ್ ರಿಕ್ರಿಯೇಷನ್ ಕ್ಲಬ್ ಅಧ್ಯಕ್ಷ ರಾಜಾ ಮುಕುಂದ ನಾಯಕ, ಡಾ. ಅಬ್ದುಲ್ ರಬ್ ಉಸ್ತಾದ್, ಕನ್ನಡ ಸಾಹಿತ್ಯ ಸಂಘದ ಅಧ್ಯಕ್ಷ ಬಸವರಾಜ ಜಮದ್ರಖಾನಿ, ಜೆ. ಅಗಸ್ಟಿನ್, ಮಲ್ಲಯ್ಯ ಕಮತಗಿ, ಮೇಘನಾಥ ಅಬ್ರಾಹಾಂ ಬೆಳ್ಳಿ, ಡಾ.ಮಲ್ಲಿಕಾರ್ಜುನ ಕಮತಗಿ, ಶ್ರೀನಿವಾಸ ಜಾಲವಾದಿ, ಪ್ರಕಾಶಚಂದ ಜೈನ್, ರಾಘವೇಂದ್ರ ಬಾಡಿಯಾಳ, ಲಕ್ಷ್ಮಣ ಗುತ್ತೇದಾರ್ ಸೇರಿ ಇತರರಿದ್ದರು.