ಕಿರು ಮೃಗಾಲಯದ ಗಂಡು ಹುಲಿ ದತ್ತು

| Published : Mar 26 2024, 01:06 AM IST

ಸಾರಾಂಶ

ಗೋಕಾಕ: ಕಿತ್ತೂರ ರಾಣಿ ಚನ್ನಮ್ಮ ಕಿರು ಮೃಗಾಲಯ ಭೂತರಾಮನಹಟ್ಟಿಯಲ್ಲಿರುವ ಗಂಡು ಹುಲಿ (ಕೃಷ್ಣ)ಯನ್ನು ಮುಂಬೈ ಮೂಲದ ಮೋಹನ ವಂಸತ ಕಾಮತ ಸ್ಮರಣಾರ್ಥ ಅವರ ಮೊಮ್ಮಕ್ಕಳಾದ ಲೀಲಾ ಅನಿಲ ಕಾಮತ್, ಮೀರಾ ಅನಿಲ ಕಾಮತ ಅವರು 2024ನೇ ಸಾಲಿಗೆ ದತ್ತು ಪಡೆದುಕೊಂಡರು.

ಗೋಕಾಕ: ಕಿತ್ತೂರ ರಾಣಿ ಚನ್ನಮ್ಮ ಕಿರು ಮೃಗಾಲಯ ಭೂತರಾಮನಹಟ್ಟಿಯಲ್ಲಿರುವ ಗಂಡು ಹುಲಿ (ಕೃಷ್ಣ)ಯನ್ನು ಮುಂಬೈ ಮೂಲದ ಮೋಹನ ವಂಸತ ಕಾಮತ ಸ್ಮರಣಾರ್ಥ ಅವರ ಮೊಮ್ಮಕ್ಕಳಾದ ಲೀಲಾ ಅನಿಲ ಕಾಮತ್, ಮೀರಾ ಅನಿಲ ಕಾಮತ ಅವರು 2024ನೇ ಸಾಲಿಗೆ ದತ್ತು ಪಡೆದುಕೊಂಡರು. ಈ ಸಂದರ್ಭದಲ್ಲಿ ಅವರನ್ನು ಅರಣ್ಯ ಇಲಾಖೆ ವತಿಯಿಂದ ಸನ್ಮಾನಿಸಿ, ಗೌರವ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳಾದ ಶಿವರುದ್ರಪ್ಪ ಕಬಾಡಗಿ, ಸುನೀತಾ ನಿಂಬರಗಿ, ಕಿತ್ತೂರ ರಾಣಿ ಚನ್ನಮ್ಮ ಕಿರು ಮೃಗಾಲಯದ ಅಧಿಕಾರಿ ಕೆ.ಎನ್.ವಣ್ಣೂರ, ಉಪ ವಲಯ ಅರಣ್ಯಾಧಿಕಾರಿ ಜಿ.ಎಚ್.ಕುದರಿ ಹಾಗೂ ಸಿಬ್ಬಂದಿ ಇದ್ದರು.