ಸಾರಾಂಶ
ರಾಜ್ಯದಲ್ಲಿಯೇ ಮಂಡ್ಯ ಗುಣಮಟ್ಟದ, ಹೆಚ್ಚು ಹಾಲು ಸರಬರಾಜು ಮಾಡುವ ಜಿಲ್ಲೆಯಾಗಿದೆ. ರೈತರ ಪರಿಶ್ರಮ ಇದರಲ್ಲಿ ಸಾಕಾಷ್ಟಿದೆ. ಗುಣಮಟ್ಟದ ಹಾಲು ಸರಬರಾಜು ಮಾಡಿ 5 ರು.ಗಳಷ್ಟು ಪ್ರೋತ್ಸಾಹಧನ ಪಡೆಯಿರಿ. ಗ್ರಾಮಾಭಿವೃದ್ಧಿ ಜತೆಗೆ ವೈಯಕ್ತಿಕ ಆರ್ಥಿಕ ಅಭಿವೃದ್ಧಿ ಹೊಂದಬೇಕು. ಡಿಗ್ರಿ, ಕೊಬ್ಬಿನ ಅಂಶ ಸಿಗಲಿ ಎಂದು ಹಲವು ಆರೋಗ್ಯಕ್ಕೆ ಹಾನಿಕಾರಕವಾದ ವಸ್ತು, ರಾಸಾಯನಿಕ ಹಾಕುವುದು ಶಿಕ್ಷಾರ್ಹ ಅಪರಾಧವಾಗಿದೆ.
ಕನ್ನಡಪ್ರಭ ವಾರ್ತೆ ಕಿಕ್ಕೇರಿ
ಕಲಬೆರಕೆ ಹಾಲು ಆರೋಗ್ಯಕ್ಕೆ ಮಾರಕವಾಗಿದ್ದು, ಶಿಕ್ಷಾರ್ಹ ಅಪರಾಧವಾಗಿದೆ ಎಂದು ಮನ್ಮುಲ್ ನಿರ್ದೇಶಕ ಡಾಲುರವಿ ಎಚ್ಚರಿಸಿದರು.ಕೋಡಿಮಾರನಹಳ್ಳಿಯಲ್ಲಿ ಹಮ್ಮಿಕೊಂಡಿದ್ದ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ನೂತನ ಕಟ್ಟಡ ಉದ್ಘಾಟನೆ ಹಾಗೂ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿ, ರೈತರು ಇಂತಹ ಕೆಲಸಕ್ಕೆ ಕೈ ಹಾಕಿ ಹಾಲಿನ ಮಾರಾಟಕ್ಕೆ ಮುಂದಾಗದೆ ಸಮಾಜದ ಆರೋಗ್ಯ ಕಾಪಾಡಲು ಮುಂದಾಗಬೇಕು ಎಂದು ಸಲಹೆ ನೀಡಿದರು.
ರಾಜ್ಯದಲ್ಲಿಯೇ ಮಂಡ್ಯ ಗುಣಮಟ್ಟದ, ಹೆಚ್ಚು ಹಾಲು ಸರಬರಾಜು ಮಾಡುವ ಜಿಲ್ಲೆಯಾಗಿದೆ. ರೈತರ ಪರಿಶ್ರಮ ಇದರಲ್ಲಿ ಸಾಕಾಷ್ಟಿದೆ. ಗುಣಮಟ್ಟದ ಹಾಲು ಸರಬರಾಜು ಮಾಡಿ 5 ರು.ಗಳಷ್ಟು ಪ್ರೋತ್ಸಾಹಧನ ಪಡೆಯಿರಿ. ಗ್ರಾಮಾಭಿವೃದ್ಧಿ ಜತೆಗೆ ವೈಯಕ್ತಿಕ ಆರ್ಥಿಕ ಅಭಿವೃದ್ಧಿ ಹೊಂದಬೇಕು ಎಂದರು.ಡಿಗ್ರಿ, ಕೊಬ್ಬಿನ ಅಂಶ ಸಿಗಲಿ ಎಂದು ಹಲವು ಆರೋಗ್ಯಕ್ಕೆ ಹಾನಿಕಾರಕವಾದ ವಸ್ತು, ರಾಸಾಯನಿಕ ಹಾಕುವುದು ಶಿಕ್ಷಾರ್ಹ ಅಪರಾಧವಾಗಿದೆ. ದಂಡದ ಜೊತೆಗೆ ಜೈಲು ಶಿಕ್ಷೆಗೆ ರೈತರು ಸಂಕಷ್ಟಕ್ಕೆ ಒಳಗಾಗಬಾರದು. ರಾಸುಗಳಿಗೆ ತಪ್ಪದೆ ವಿಮೆ ಮಾಡಿಸಿ ಸಕಾಲಕ್ಕೆ ಸೂಕ್ತ ಚಿಕಿತ್ಸೆ ಕೊಡಿಸಬೇಕು. ಒಕ್ಕೂಟದಿಂದ ಸಿಗುವ ಸವಲತ್ತು ಪಡೆಯಬೇಕು. ನಂದಿನಿ ಉತ್ಪನ್ನ ಖರೀದಿಸಲು ಮುಂದಾಗಬೇಕು ಎಂದು ಕರೆ ನೀಡಿದರು.
ಈ ವೇಳೆ ಜಿಪಂ ಮಾಜಿ ಸದಸ್ಯ ಕೋಡಿಮಾರನಹಳ್ಳಿ ದೇವರಾಜು ಮಾತನಾಡಿದರು. ಮಾರ್ಗ ವಿಸ್ತರಣಾಧಿಕಾರಿ ಗುರುರಾಜ್, ಸಿಇಒ ಜ್ಯೋತಿ, ಎಪಿಎಂಸಿ ಮಾಜಿ ಅಧ್ಯಕ್ಷ ಮಂಜೇಗೌಡ, ಧರ್ಮಸ್ಥಳ ಗ್ರಾಮಾಭಿವೃದ್ಧಿ ತಾಲೂಕು ಯೋಜನಾಧಿಕಾರಿ ಎಂ.ವೀರೇಶಪ್ಪ, ಮುಖಂಡರಾದ ಕೃಷ್ಣೇಗೌಡ, ಹರೀಶ್, ನಾಗಮಣಿ ಮಂಜೇಗೌಡ, ಅನುಸೂಯ ಕೃಷ್ಣೇಗೌಡ, ಮಮತ ಮಂಜೇಗೌಡ, ರುಕ್ಮಿಣಿ ಚಿಕ್ಕೇಗೌಡ, ಸುಶೀಲಮ್ಮ ಕಾಳೇಗೌಡ, ಪ್ರೇಮರವಿ, ರೇಣುಕಾ ಶಿವಣ್ಣ, ತಾಯಮ್ಮ ರುಕ್ಕೇಶ್, ಚಿಕ್ಕಮ್ಮ ಕಾಳೇಗೌಡ, ಪ್ರೇಮ ರಮೇಶ್, ಮಂಜುನಾಥ್, ವಿನೋದ, ಪುಟ್ಟಲಿಂಗಮ್ಮ, ಪಾರ್ವತಮ್ಮ, ಸಾಕಮ್ಮ, ಜಗದೀಶ್, ಶಿವಮ್ಮ, ಗೌರಿ ಉಪಸ್ಥಿತರಿದ್ದರು.ಅಪ್ರಾಪ್ತನಿಗೆ ಸ್ಕೂಟರ್ ನೀಡಿದ ಮಾಲೀಕರಿಗೆ 25 ಸಾವಿರ ರು. ದಂಡಮದ್ದೂರು:ಅಪ್ರಾಪ್ತನಿಗೆ ಸ್ಕೂಟರ್ ಚಾಲನೆ ಮಾಡಲು ಅವಕಾಶ ನೀಡಿದ್ದ ವಾಹನ ಮಾಲೀಕರಿಗೆ ಪಟ್ಟಣದ ಜೆಎಂಎಫ್ಸಿಪ್ರಧಾನ ಸಿವಿಲ್ ನ್ಯಾಯಾಲಯ 25 ಸಾವಿರ ರು. ದಂಡ ವಿಧಿಸಿ ಆದೇಶ ನೀಡಿದೆ.ರಾಮನಗರ ಜಿಲ್ಲೆ ಬಿಡದಿ ಟೌನ್‌ನ ಲಕ್ಷ್ಮಿಕಾಂತ್ ಪತ್ನಿ ಮಧುವಂತಿ ದಂಡದ ಶಿಕ್ಷೆಗೊಳಗಾದ ದ್ವಿಚಕ್ರ ವಾಹನ ಮಾಲೀಕರು.
ಈಕೆ ಅಪ್ರಾಪ್ತನಿಗೆ ತಮ್ಮ ಆಕ್ಟಿವಾ ಸ್ಕೂಟರನ್ನು ಚಾಲನೆ ಮಾಡಲು ಅವಕಾಶ ನೀಡಿದ್ದರು. ಈ ವೇಳೆ ಸಾರಿಗೆ ಸಂಸ್ಥೆ ಬಸ್ ನಿಲ್ದಾಣದ ಬಳಿ ಸಂಚಾರಿ ನಿಯಮ ಉಲ್ಲಂಘಿಸಿ ಚಲಿಸುವ ವಾಹನಗಳ ತಪಾಸಣೆ ನಡೆಸುತ್ತಿದ್ದ ಸಂಚಾರಿ ಠಾಣೆ ಪಿಎಸ್ಐ ಮಹೇಶ್ ಅಪ್ರಾಪ್ತ ಆಕ್ಟಿವಾ ಸ್ಕೂಟರ್ ಚಾಲನೆ ಮಾಡುತ್ತಿದ್ದನ್ನು ಪತ್ತೆ ಹಚ್ಚಿದ್ದಾರೆ. ನಂತರ ಮೋಟಾರ್ ಕಾಯ್ದೆ ಉಲ್ಲಂಘನೆ ಆರೋಪದ ಹಿನ್ನೆಲೆಯಲ್ಲಿ ಸ್ಕೂಟರ್ ಅನ್ನು ವಶಕ್ಕೆ ಪಡೆದುಕೊಂಡು ಮಾಲೀಕರಾದ ಮಧುವಂತಿ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.ಪ್ರಕರಣದ ವಿಚಾರಣೆ ನಡೆಸಿದ ಪ್ರಧಾನ ಸಿವಿಲ್ ನ್ಯಾಯಾಧೀಶ ಅಜಿತ್ ದೇವರಮನಿ ಅವರು ಸ್ಕೂಟರ್ ಮಾಲೀಕರಾದ ಮಧುವಂತಿ ಅವರಿಗೆ 25 ಸಾವಿರ ರು. ದಂಡ ವಿಧಿಸಿ ಆದೇಶ ಹೊರಡಿಸಿದ್ದಾರೆ.