ಸಾರಾಂಶ
ಕನ್ನಡಪ್ರಭ ವಾರ್ತೆ ಕೊರಟಗೆರೆ
ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ತಾಲೂಕಿನಲ್ಲಿ ಈವರೆಗೆ ಸುಮಾರು ೨೨೬೪೨ ಸಾವಿರ ಎಕರೆ ಪ್ರದೇಶದಲ್ಲಿ ಬಿತ್ತನೆಯಾಗಿರುವ ಶೇಂಗಾ, ತೊಗರಿ, ಮುಸಕಿನಜೋಳ, ರಾಗಿ ಹಾಗೂ ಭತ್ತದ ಬೆಳೆಗಳಲ್ಲಿ ಅಲ್ಲಲ್ಲಿ ಕಂಡು ಬಂದಿರುವ ಕೀಟ ಮತ್ತು ರೋಗಗಳ ಬಾಧೆಯನ್ನು ನಿಯಂತ್ರಿಸಲು ಕೃಷಿ ಇಲಾಖೆ ರೈತರಿಗೆ ಸಲಹೆ ನೀಡಿದೆ.ಸೈನಿಕ ಹುಳು ಬಾಧೆಯ ಲಕ್ಷಣಗಳುಗಿಡಗಳ ಎಲೆ ಗರಿಗಳ ಸುಳಿಯಲ್ಲಿ ಸಣ್ಣ ರಂದ್ರಗಳು ಕಂಡುಬರುತ್ತವೆ. ಕ್ರಮೇಣ ಅಂತಹ ಸುಳಿಗಳು ಒಣಗುತ್ತವೆ. ಇದು ಮುಖ್ಯವಾಗಿ ಕಾಂಡಕ್ಕೆ ಬರುವುದರಿಂದ ಕಾಂಡ ಟೊಳ್ಳಾಗಿ ಸುಳಿ ಸಾಯುತ್ತದೆ ಸೈನಿಕ ಹುಳು ಹಗಲು ಹೊತ್ತಿನಲ್ಲಿ ಸುಳಿಯಲ್ಲಿ ಅಡಗಿಕೊಂಡು ರಾತ್ರಿ ಎಲೆಗಳನ್ನು ತೀವ್ರಗತಿಯಲ್ಲಿ ತಿಂದು ಹಾನಿಮಾಡುತ್ತದೆ ಇವುಗಳ ಸಂಖ್ಯೆ ಹೆಚ್ಚಾದಾಗ ಹಾನಿ ಪ್ರಮಾಣ ಹೆಚ್ಚುತ್ತದೆ ಎಲೆ ಮಧ್ಯೆ ಉಳಿದೆಲ್ಲ ಭಾಗ ತಿಂದು ಹಾಕುತ್ತದೆ. ಬೆಳೆಗಳಿಗೆ ಸೈನಿಕ ಹುಳು ಕಾಣಿಸಿಕೊಂಡರೆ ಆದರ ನಿಯಾಂತ್ರಣ ಕಷ್ಟದ ಕೆಲಸ ಹುಳು ಬಾಧೆಯಿಂದಾಗಿ ಇಳುವರಿ ಕುಂಠಿತವಾಗುತ್ತದೆ. ಕೀಟ ನಿಯಾಂತ್ರಣ ಕ್ರಮಗಳು: ಕೀಟದ ಮೊಟ್ಟೆಯ ರಾಶಿ ಮತ್ತು ಮರಿ ಹುಳುಗಳನ್ನು ಕೈಯಿಂದ ಹಾರಿಸಿ ನಾಶಪಡಿಸಬೇಕು. ಮುಂದಿನ ಕೀಟ ಸಂತತಿಯಿಂದಾಗುವ ಹಾನಿ ತಪ್ಪಸಲು ರಾತ್ರಿ ವೇಳೆಯಲ್ಲಿ ಬೆಂಕಿ ಅಥವಾ ಬೆಳಕಿನ ಬಲೆ ಬಳಕೆ ಮಾಡಿ ಪತಂಗಗಳನ್ನು ಸಾಯಿಸುವುದು. ಮುಂಜಾಗ್ರತ ಕ್ರಮವಾಗಿ ತಿಂಗಳಿಗೊಮ್ಮೆ ಶೇ.೫ ರ ಅಜಾಡಿರಾಕ್ಟಿನ್ (ಬೇವಿನ ಮೂಲಕ ಕೀಟನಾಶಕ) ೦೫ ಮಿ.ಲಿ ಒಂದು ಲೀಟರ್ ನೀರಿಗೆ ಬೆರೆಸಿ ಸಿಂಪಡಿಸುವುದು. ಶೇ.೧೦ಕ್ಕಿಂತ ಹೆಚ್ಚು ಎಲೆಗಳ ಹಾನಿ ಕಂಡು ಬಂದಾಗ ಕೀಟದ ನರ‍್ವಹಣೆಗೆ ಕೀಟನಾಶಕವನ್ನು ಬಳಸುವುದು.ಬೆಳೆದ ಹುಳುಗಳನ್ನು ಹತೋಟಿಯಲ್ಲಿಡಲು ವಿಷ ಪ್ರಾಷಣದ ಬಳಕೆ : ಪ್ರೌಢಾವಸ್ಥೆಯ ಕೀಟದ ನರ‍್ವಹಣೆಗೆ ೧೦ ಕೆ.ಜಿ ಅಕ್ಕಿ ತೌಡು(ಬೂಸ) + ೨ ಕೆ.ಜಿ ಬೆಲ್ಲದ ಮಿಶ್ರಣವನ್ನು ೨-೩ ಲೀಟರ್ ನೀರಿನಲ್ಲಿ ೨೪ ಗಂಟೆಗಳ ಕಾಲ ಹುದುಗಿಸಿರಿಸಿ ೧೦೦ ಗ್ರಾಂ ಥಿಯೋಡಿಕರ‍್ಬ ಕೀಟನಾಶಕವನ್ನು ಅರ್ಧ ಗಂಟೆ ಮೊದಲು ಸೇರಿಸಿ ವಿಷ ಆಹಾರವನ್ನು ತಯಾರಿಸಿ ಸಸ್ಯಗಳ ಸುರಳಿಗೆ ಹಾಕುವುದರಿಂದ ಲದ್ದಿ ಹುಳುವಿನ ನಿಯಂತ್ರಣವನ್ನು ಮಾಡಬಹುದು ಎಂದು ಸಹಾಯಕ ಕೃಷಿ ನರ‍್ದೇಶಕರದ ರುದ್ರಪ್ಪ ಎಂ. ಆರ್. ತಿಳಿಸಿದ್ದಾರೆ. ಸೂಚನೆ: ಕೀಟನಾಶಕ ಮತ್ತು ವಿಷ ಪ್ರಾಷಣವನ್ನು ಸುಳಿಯಲ್ಲಿ ನೀಡಬೇಕು, ವಿಷ ಪ್ರಾಷಣ ನೀಡಿಸ ಮೆಕ್ಕೆಜೋಳದ ತಾಕಿನಲ್ಲಿ ರೈತರು ಜಾನುವಾರುಗಳನ್ನು ಮೇಯಲು ಬಿಡಬಾರದು. ಕೀಟನಾಶಕ ಸಿಂಪಡಿಸುವಾಗ ಮತ್ತು ಪ್ರಾಷಣ ಕೈಗೊಳ್ಳುವಾಗ ಕೈಗವಸು ಹಾಗೂ ಮುಸುಕನ್ನು ಧರಿಸಬೇಕು.
ಶೇಂಗಾ ಬೆಳೆಗೆ ಪ್ರಮುಖವಾಗಿ ಕಂಡು ಬರುವ ಸಸ್ಯಹೇನು(ಕರಿ ಸೀಡೆ) ಕೀಟಗಳು ಗಿಡದ ತುದಿಯಲ್ಲಿ ಗುಂಪಾಗಿದ್ದು ರಸವನ್ನು ಹೀರಿ ಬೆಳವಣಿಗೆ ಕುಂಠಿತವಾಗುವುದರಿಂದ ೧.೭ ಮೀ.ಲೀ ಡೈಮಿಥೋಯೇಟ್ ಅಥವಾ ೦.೫ ಮೀ.ಲೀ ಇಮಿಡಕ್ಲೋಪ್ರಿಡ್ ಅನ್ನು ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪರಣೆ ಮಾಡಬೇಕು.ಅಲ್ಲಲ್ಲಿ ಸುರಳಿ ಪೂಚಿ ಕೀಟದ ಬಾಧೆಯು ಕಂಡು ಬಂದಿದ್ದು, ಪ್ರಾರಂಭದಲ್ಲಿ ಮರಿಹುಳು ಚಿಗುರು ಎಲೆಗಳನ್ನು ಕೆರೆದು ಒಳಗಿನ ಹಸಿರನ್ನು ತಿನ್ನುವುದರಿಂದ ಮೊದಲಿಗೆ ಬೊಬ್ಬೆಗಳು ಕಾಣಿಸುತ್ತವೆ. ಒಂದು ವಾರದ ನಂತರ ಬೆಳೆದ ಹುಳು ಹೊರಕ್ಕೆ ಬಂದು ಕೊಂಬೆಯ ೨-೩ ಎಲೆಗಳನ್ನು ದಾರದಿಂದ ಮಡಚಿ ಹಸಿರನ್ನು ಕೆರೆದು ತಿನ್ನುತ್ತವೆ. ಬಾಧೆಯು ತೀವ್ರವಾದಾಗ ಸುಟ್ಟಂತೆ ಕಾಣುವ ಜೊತೆಗೆ ಗಿಡಗಳ ಬೆಳವಣೆಗೆಯು ಕಂಠಿತವಾಗುತ್ತದೆ. ಹತೋಟಿ ಕ್ರಮವಾಗಿ ಬಿತ್ತಿದ ೩೦ ದಿನಗಳ ನಂತರ ೧ ಮೀ.ಲೀ ಲ್ಯಾಂಡಾಸೈಹ್ಯಾಲೋಥೀನ್ ಅನ್ನು ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು. ಬೇರು ತಿನ್ನುವ ಗೊಣ್ಣೆ ಹುಳುವಿನ ನಿಯಂತ್ರಣಕ್ಕಾಗಿ ಪ್ರತಿ ಕೆ.ಜಿ ಬಿತ್ತನೆ ಬೀಜವನ್ನು ೧೫ ಮೀ.ಲೀ ಕ್ಲರ‍್ಪೈರಿಪಾಸ್ ೨೦ ಇ.ಸಿ ಕೀಟನಾಶಕದಿಂದ ಬಿಜೋಪಚಾರ ಮಾಡಿ ಬಿತ್ತನೆ ಮಾಡಬೇಕು. ಶೇಂಗಾ ಬೆಳೆಗೆ ಬಾಧಿಸುವ ರೋಗಗಳಲ್ಲಿ ಎಲೆ ಚುಕ್ಕೆ ರೋಗ(ಟಿಕ್ಕಾ ರೋಗ) ಪ್ರಮುಖವಾಗಿದ್ದು ಎಲೆಗಳ ಮೇಲೆ ದುಂಡನೆಯ ಅಥವಾ ಆಕಾರವಿಲ್ಲದ ತಿಳಿಕಂದು ಬಣ್ಣದ ಚುಕ್ಕೆಯ ಸುತ್ತಲೂ ತಿಳಿಹಳದಿ ಬಣ್ಣದ ಉಂಗುರವನ್ನು ಕಾಣಬಹುದು. ಈ ಚುಕ್ಕೆಗಳು ಕಾಂಡ ಹಾಗೂ ಬಿಳಿಲುಗಳ ಮೇಲೆ ಕಂಡು ಬಂದು ಕಾಯಿಗಳು ಜೊಳ್ಳಾಗುವುದಲ್ಲದೆ ಇಳುವರಿ ಕಡಿಮೆಯಾಗಿ ಮೇವು ಸಹ ಸಿಗುವುದಿಲ್ಲ. ಬಿತ್ತಿದ ೩೦ ದಿನಗಳ ನಂತರ ರೋಗ ಲಕ್ಷಣ ಕಂಡ ಕೂಡಲೇ ೨ ಗ್ರಾಂ ಕ್ಲೋರೋಥ್ಯಾಲೊನಿಲ್ ಅಥವಾ ಕರ‍್ಬೇನ್ಡಜಿಮ್ + ೨ ಗ್ರಾಂ ಮ್ಯಾಕೊಜಾಬ್ ಪ್ರತಿ ಲೀಟರ್ ನೀರಿನಲ್ಲಿ ಬೇರಿಸಿ ೧೦-೧೫ ದಿನಗಳ ಅಂತರದಲ್ಲಿ ೨ ಬಾರಿ ಸಿಂಪರಣೆ ಮಾಡಬೇಕು.