ಸ್ವಯಂ ರಕ್ತದಾನ ಜನಜಾಗೃತಿ ಮೂಡಿಸಲು ಸಲಹೆ

| Published : Sep 23 2025, 01:03 AM IST

ಸಾರಾಂಶ

ವಿಜಯಪುರ: ಸಾರ್ವಜನಿಕರು ಮೂಢನಂಬಿಕೆಯಿಂದ ಹೊರಬಂದು ರಕ್ತದಾನ ಮಾಡಲು ಸ್ವಯಂಪ್ರೇರಿತರಾಗಿ ಜನಜಾಗೃತಿ ಮೂಡಿಸಬೇಕು ಎಂದು ಬಿಜೆಪಿ ತಾಲೂಕು ಅಧ್ಯಕ್ಷ ಅಂಬರೀಶ್‌ಗೌಡ ಹೇಳಿದರು.

ವಿಜಯಪುರ: ಸಾರ್ವಜನಿಕರು ಮೂಢನಂಬಿಕೆಯಿಂದ ಹೊರಬಂದು ರಕ್ತದಾನ ಮಾಡಲು ಸ್ವಯಂಪ್ರೇರಿತರಾಗಿ ಜನಜಾಗೃತಿ ಮೂಡಿಸಬೇಕು ಎಂದು ಬಿಜೆಪಿ ತಾಲೂಕು ಅಧ್ಯಕ್ಷ ಅಂಬರೀಶ್‌ಗೌಡ ಹೇಳಿದರು.

ಪಟ್ಟಣದ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ಸಮುದಾಯ ಭವನದಲ್ಲಿ ಟೌನ್ ಬಿಜೆಪಿ ಮತ್ತು ಬೆಂಗಳೂರಿನ ಸಂಕಲ್ಪ ರಕ್ತದಾನ ಕೇಂದ್ರದ ಸಹಯೋಗದಲ್ಲಿ ಆಯೋಜಿಸಿದ್ದ ಸ್ವಯಂ ಪ್ರೇರಿತ ರಕ್ತದಾನ ಶಿಬಿರದಲ್ಲಿ ಮಾತನಾಡಿದ ಅವರು, ರಕ್ತದಾನದಿಂದ ಯಾವುದೇ ಸಮಸ್ಯೆ ಉಂಟಾಗುವುದಿಲ್ಲ. ಬದಲಾಗಿ ಉತ್ತಮ ಆರೋಗ್ಯ ಹೊಂದಲು ಸಹಕಾರಿಯಾಗುತ್ತದೆ. ರಕ್ತದ ಕೊರತೆ ನಿವಾರಣೆಗೆ ಆರೋಗ್ಯವಂತ ಪ್ರನಾಗರಿಕರೆಲ್ಲರೂ ರಕ್ತದಾನ ಮಾಡಬೇಕು. ಅಪಘಾತದ ಗಾಯಾಳುಗಳಿಗೆ ರಕ್ತ ನೀಡಿ ಜೀವ ಉಳಿಸಬಹುದು. ರಕ್ತದಾನದಿಂದ ಹೊಸ ರಕ್ತ ಶರೀರದಲ್ಲಿ ಉತ್ಪತ್ತಿಯಾಗುವುದಲ್ಲದೆ ಮಾನವೀಯತೆ ಮೆರೆದು ಒಂದು ಜೀವ ಉಳಿಸಿದಂತಾಗುತ್ತದೆ ಎಂದರು.

ರಕ್ತದಾನ ಶಿಬಿರದಲ್ಲಿ ೧೩೫ ಯೂನಿಟ್ ರಕ್ತ ಸಂಗ್ರಹಿಸಲಾಯಿತು. ಬೆಂಗಳೂರು ಗ್ರಾಮಾಂತರ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎಚ್.ಎಂ.ರವಿಕುಮಾರ್, ಪುರಸಭೆ ಸದಸ್ಯೆ ಶಿಲ್ಪಾಅಜಿತ್, ಮುಖಂಡ ಬುಳ್ಳಹಳ್ಳಿ ರಾಜಪ್ಪ, ದೇ.ಸು.ನಾಗರಾಜ್, ತಾಲೂಕು ಕಾರ್ಯದರ್ಶಿ ರವಿಕುಮಾರ್, ಟೌನ್ ಬಿಜೆಪಿ ಮಾಜಿ ಅಧ್ಯಕ್ಷ ರಾಮು ಭಗವಾನ್, ರಾಮಕೃಷ್ಣ ಹೆಗಡೆ, ಶಿವಕುಮಾರಸ್ವಾಮಿ, ವೆಂಕಟೇಶ್ ಪ್ರಭು, ಸುಜಯ್, ಚಂದನ್, ವರದರಾಜು, ಸಾಗರ್, ರಾಮು, ಮಹಿಳಾ ಮೋರ್ಚಾದ ಜಿಲ್ಲಾ ಉಪಾಧ್ಯಕ್ಷೆ ಸುನೀತಾ, ತಾಲೂಕು ಅಧ್ಯಕ್ಷೆ ವಿಜಯಮ್ಮ, ಕಾರ್ಯದರ್ಶಿ ವೀಣಾಶ್ರೀನಿವಾಸ್, ಇನ್ಸ್‌ಪೈರ್ ಕಾಲೇಜಿನ ಪ್ರಾಂಶುಪಾಲೆ ಶಿಲ್ಪಾ, ಸಂಕಲ್ಪ ರಕ್ತದಾನ ಕೇಂದ್ರ ಡಾ.ಮುಕುಲ್, ಡಾ. ಉದಯ್ ಸೋಹೈಲ್ ಗುರು ಇತರರಿದ್ದರು.

(ಫೋಟೋ ಕ್ಯಾಫ್ಷನ್‌)

ವಿಜಯಪುರದಲ್ಲಿ ಟೌನ್ ಬಿಜೆಪಿ ಮತ್ತು ಬೆಂಗಳೂರಿನ ಸಂಕಲ್ಪ ರಕ್ತದಾನ ಕೇಂದ್ರ ಸಹಯೋಗದಲ್ಲಿ ಸ್ವಯಂ ರಕ್ತದಾನ ಶಿಬಿರದಲ್ಲಿ ರಕ್ತದಾನ ಮಾಡಿದವರಿಗೆ ಬಿಜೆಪಿ ತಾಲೂಕು ಅಧ್ಯಕ್ಷ ಅಂಬರೀಶ್ ಗೌಡ ಪ್ರಮಾಣ ಪತ್ರ ವಿತರಿಸಿದರು.