ಸಾರಾಂಶ
ಕನ್ನಡಪ್ರಭ ವಾರ್ತೆ ಬನ್ನೂರು
ಪಟ್ಟಣದಲ್ಲಿರುವ ಫಾಸ್ಟ್ ಫುಡ್ ಅಂಗಡಿಗಳಿಗೆ ಆಹಾರ ಸುರಕ್ಷತೆ ಗುಣಮಟ್ಟ ಪ್ರಾಧಿಕಾರದ ತಾಲೂಕು ಆಹಾರ ಸಂರಕ್ಷಣಾಧಿಕಾರಿ ಸುಮಂತ್ ಭೇಟಿ ನೀಡಿ ಮಾದರಿ ಪಡೆದುಕೊಂಡು, ಆಹಾರ ಸೇವಿಸಲು ಬಂದ ಸಾರ್ವಜನಿಕರಿಗೆ ಕೃತಕ ಬಣ್ಣ ಬಳಸಿದಂತೆ ಆಹಾರ ಪದಾರ್ಥಗಳಿಂದ ದೂರವಿರುವಂತೆ ಸಲಹೆ ಸೂಚನೆ ನೀಡಿದರು.ಪಟ್ಟಣದ ಎಸ್.ಆರ್.ಪಿ ರೋಡ್ ಹಾಲಿನ ಡೈರಿ ಮುಂಭಾಗದಲ್ಲಿರುವಂತ ಗೋಬಿ ಅಂಗಡಿ, ಐಸ್ ಕ್ರೀಂ ಅಂಗಡಿ, ಪಾನಿಪುರಿ ಅಂಗಡಿ, ಬೆಲ್ ಪುರಿ ಅಂಗಡಿಗಳಿಗೆ ಭೇಟಿ ನೀಡಿ, ಅಂಗಡಿಯಲ್ಲಿ ಈ ಆಹಾರ ಪದಾರ್ಥಗಳನ್ನು ಮಾಡಲು ಬಳಸುತ್ತಿರುವಂತ ವಸ್ತುಗಳನ್ನು ನೋಡಿ, ಅನುಮಾನ ಬಂದಂತ ಅಂಗಡಿಯ ಮಾದರಿಯನ್ನು ಪಡೆದು ಅವರಿಗೆ ನೋಟೀಸ್ ನೀಡಿದರು.ನಂತರ ಮಾತನಾಡಿದ ಅವರು, ತಾಲೂಕಿನಲ್ಲಿ ಫಾಸ್ಟ್ ಫುಡ್ ಗಳಲ್ಲಿ ಬಳಸುತ್ತಿರುವಂತ ಆಹಾರದ ಗುಣಮಟ್ಟ ಕಡಿಮೆ ಇದ್ದು, ಕೆಲವು ಕಡೆಗಳಲ್ಲಿ ಕಲರಿಂಗ್ ಬಳಕೆ ಮಾಡುತ್ತಿರುವುದು ಗಮನಕ್ಕೆ ಬಂದಿದೆ. ಅದರಂತೆ ಮಾದರಿ ಪಡೆದು ಲ್ಯಾಬಿಗೆ ಕಳುಹಿಸಲಾಗಿದೆ. ಈ ರೀತಿ ಕಳುಹಿಸಲಾಗಿರುವಂತ ಮಾದರಿಯಲ್ಲಿ ಆಹಾರದ ಗುಣಮಟ್ಟ ಕಳಪೆಯಾಗಿದ್ದರೆ ಆ ಮಾಲೀಕನ ಮೇಲೆ ನಿರ್ಧಾಕ್ಷಿಣ್ಯವಾಗಿ 1 ಲಕ್ಷದಿಂದ 10 ಲಕ್ಷದವರೆಗೂ ದಂಡ ವಿಧಿಸಲಾಗುವುದು, ಜೊತೆಗೆ 6 ತಿಂಗಳ ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ ಎಂದು ತಿಳಿಸಿದರು. ಕಲರಿಂಗ್ ಬಳಕೆಯಿಂದ ಜನರು ಅತಿ ಹೆಚ್ಚಾಗಿ ಕ್ಯಾನ್ಸರ್ ಸೇರಿದಂತೆ ಅನೇಕ ಮಾರಕ ರೋಗಗಳಿಗೆ ಮನುಷ್ಯ ತುತ್ತಾಗುತ್ತಿದ್ದು, ಅರಿವಿಲ್ಲದೆ ಸಾವಿನ ಕಡೆಗೆ ವಾಲುತ್ತಿದ್ದಾನೆ ಎಂದು ತಿಳಿಸಿದರು. ನಾವು ನಮ್ಮ ಕರ್ತವ್ಯವನ್ನು ನಿರಂತರವಾಗಿ ಮಾಡುತ್ತಾ ಅರಿವು ಮೂಡಿಸುತ್ತಿದ್ದರು, ಕೆಲವೆಡೆ ನಾವು ಹೋದಂತ ಸಂದರ್ಭದಲ್ಲಿ ಉತ್ತಮ ರೀತಿಯಲ್ಲಿ ತಯಾರಿಸಿ ಮಾದರಿಯನ್ನು ನೀಡಿ ಯಾಮಾರಿಸುವಂತ ಪ್ರಕರಣ ನಡೆಯುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.ಜನರು ತಾವೆ ಇದರ ಬಗ್ಗೆ ಎಚ್ಚೆತ್ತು ಉತ್ತಮ ರೀತಿಯ ಆಹಾರ ತಿನ್ನುವ ಮೂಲಕ ತಮ್ಮ ಜೀವದ ರಕ್ಷಣೆ ಮಾಡಿಕೊಳ್ಳಬೇಕಿದೆ ಎಂದರು. ಬೊಂಡ ಬಜ್ಜಿಯನ್ನು ನ್ಯೂಸ್ ಪೇಪರ್ ನಲ್ಲಿ ಹಾಕಿ ಕೊಡುತ್ತಿದ್ದು, ಅದರ ಇಂಕು ಮನುಷ್ಯನ ಹೊಟ್ಟೆ ಸೇರಿ ನಾನಾ ವಿಧದ ಕಾಯಿಲೆಗೆ ಕಾರಣವಾಗುತ್ತಿದೆ ಎಂದು ತಿಳಿಸಿದರು.ಕಿರಾಣಿ ಅಂಗಡಿಯಲ್ಲಿ ದೊರೆತಂತ ಹೆಸರಾಂತ ಕಂಪನಿಯ ಕಬಾಬ್ ಮಸಾಲಯ ಮಾದರಿಯನ್ನು ಪಡೆದು ಅದನ್ನು ಲ್ಯಾಬ್ ಕಳುಹಿಸಿ, ವಿವರ ಪಡೆಯಲಾಗಿದ್ದು, ಈ ಮಸಾಲೆ ಕಳಪೆ ಎಂದು ದೃಢ ಪಟ್ಟಿದ್ದು, ಮುಂದಿನ ದಿನದಲ್ಲಿ ಕ್ರಮ ಜರುಗಿಸಲಾಗುತ್ತದೆ ಎಂದರು.ಸಾರ್ವಜನಿಕ ಹಿತದೃಷ್ಟಿಯಿಂದ ರಾತ್ರಿ ವೇಳೆಯಲ್ಲಿ ಕೆಲಸ ನಿರ್ವಹಿಸಲಾಗುತ್ತಿದೆ ಎಂದರು. ಈಗಾಗಲೆ ಹಲವಾರು ಕಿರಾಣಿ ಅಂಗಡಿಗಳು ಸೇರಿದಂತೆ ಈ ರೀತಿಯ ಕಳಪೆ ಪದಾರ್ಥ ಮಾರಾಟ ಮಾಡುವಂತ ಅಂಗಡಿಗಳ ಹೆಸರನ್ನು ತಿಳಸಲಾಗುವುದು ಎಂದು ಅವರು ಹೇಳಿದರು. ------------------
;Resize=(128,128))
;Resize=(128,128))