ಆದ್ಯ ವಚನಕಾರ ದೇವರ ದಾಸಿಮಯ್ಯ ಮಹಾನ್ ದಾರ್ಶನಿಕ

| Published : Mar 08 2024, 01:45 AM IST

ಸಾರಾಂಶ

ದಾರ್ಶನಿಕ ದೇವರ ದಾಸಿಮಯ್ಯ ಅವರ ವಿಚಾರಧಾರೆಗಳು ಇಂದಿಗೂ ಪ್ರಸ್ತುತ ಎನಿಸುತ್ತವೆ. ಅವುಗಳನ್ನು ತಿಳಿದುಕೊಂಡು ಮಾದರಿಯುತ ಬದುಕು ಸಾಗಿಸಬೇಕು ಎಂದು ಶಿಕ್ಷಕ ಗುಂಡಪ್ಪ ಕುರಿ ಅಭಿಪ್ರಾಯ ಪಟ್ಟರು

ಕನ್ನಡಪ್ರಭ ವಾರ್ತೆ ಇಳಕಲ್ಲ

ಆದ್ಯ ವಚನಕಾರ, ನೇಕಾರರ ಆರಾಧ್ಯ ದಾರ್ಶನಿಕ ದೇವರ ದಾಸಿಮಯ್ಯ ಅವರ ವಿಚಾರಧಾರೆಗಳು ಇಂದಿಗೂ ಪ್ರಸ್ತುತ ಎನಿಸುತ್ತವೆ. ಅವುಗಳನ್ನು ತಿಳಿದುಕೊಂಡು ಮಾದರಿಯುತ ಬದುಕು ಸಾಗಿಸಬೇಕು ಎಂದು ಶಿಕ್ಷಕ ಗುಂಡಪ್ಪ ಕುರಿ ಅಭಿಪ್ರಾಯ ಪಟ್ಟರು.

ಇಳಕಲ್ಲ ತಾಲೂಕು ದೇವಾಂಗ ನೌಕರರ ಸಂಘದ ಸಹಯೋಗದಲ್ಲಿ ಗುರುವಾರ ಶಿವಶಂಕರ ಮೆದಿಕೇರಿ ನಿವಾಸದಲ್ಲಿ ಮನೆ ಮನಗಳಲ್ಲಿ ದಾಸಿಮಯ್ಯ ಚಿಂತನಗೋಷ್ಠಿ-೨೦ರಲ್ಲಿ ಅವರು ಮಾತನಾಡಿದರು. ಕಾಯಕದೊಂದಿಗೆ ತಮ್ಮ ವಚನಗಳ ಮೂಲಕ ಜ್ಞಾನವನ್ನು ಪಸರಿಸಿದ ದಾಸಿಮಯ್ಯರು ಸದಾ ಸ್ಮರಣೀಯರು ಎಂದು ಹೇಳಿದರು.

ವೇ.ಮೂ.ಮುನಿಸ್ವಾಮಿ ದೇವಾಂಗಮಠ ಸಾನ್ನಿಧ್ಯ ವಹಿಸಿದ್ದರು. ನಾರಾಯಣ ಬಿಜ್ಜಲ ಅಧ್ಯಕ್ಷತೆ ವಹಿಸಿದ್ದರು. ಮುನಿಸ್ವಾಮಿ ದೇವಾಂಗಮಠ, ಗುಂಡಪ್ಪ ಕುರಿ ಹಾಗೂ ಪ್ರವಚನಕಾರ, ಶಿವಶಂಕರ ಮೆದಿಕೇರಿ ಅವರನ್ನು ಸನ್ಮಾನಿಸಲಾಯಿತು. ತಾಲೂಕು ದೇವಾಂಗ ನೌಕರರ ಸಂಘದ ಅಧ್ಯಕ್ಷ ನಾರಾಯಣ್ ಬಿಜ್ಜಳ, ಬಸವರಾಜ ಕಿರಗಿ, ಜಗದೀಶ ಅರಳಿಕಟ್ಶಿ,ರುದ್ರಮುನಿ ಜಳಕಿ, ನೀಲಕಂಠಪ್ಪ ಮೆದಿಕೇರಿ ಜಗದೀಶ ಮರೋಳ, ಅಮರೇಶ ಉಳ್ಳಿ, ವಿರೂಪಾಕ್ಷ ಬೇನಾಳ, ಲಲಿತಾ ಬಳಗದ ತಾಯಂದಿರು, ತಾಲ್ಲೂಕು ದೇವಾಂಗ ನೌಕರ ಸಂಘದ ಸದಸ್ಯರು ಉಪಸ್ಥಿತರಿದ್ದರು.

ತಿಪ್ಪಣ್ಣ ಚಿತ್ತರಗಿ ಸ್ವಾಗತಿಸಿದರು.ವೀಣಾ ಕೊಪ್ಪರದ ಪ್ರಾರ್ಥಿಸಿದರು. ವೇಣು ಶಂಕರ ವಂದಿಸಿದರು. ಮಲ್ಲಿಕಾರ್ಜುನ ಇಂದರಗಿ ನಿರೂಪಿಸದರು.