8 ತಿಂಗಳ ಬಳಿಕ ಗ್ರಂಥಾಲಯಕ್ಕೆ ಸಿಕ್ತು ಕೊಠಡಿ!

| Published : Feb 09 2024, 01:48 AM IST

ಸಾರಾಂಶ

ಕನ್ನಡಪ್ರಭ ವರದಿಯ ಜೊತೆಗೆ ಕಸಾಪ ಅಧ್ಯಕ್ಷ, ಪುರಸಭೆ ಸದಸ್ಯರೊಬ್ಬರ ನಿರಂತರ ಹೋರಾಟದ ಫಲವಾಗಿ ಶಾಸಕರ ಸೂಚನೆ ಬಳಿಕ ಕೊನೆಗೂ ಇಲ್ಲಿನ ಗ್ರಂಥಾಲಯಕ್ಕೆ ಕೊಠಡಿಯೊಂದು ಸಿಕ್ಕಿದೆ.

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆಕನ್ನಡಪ್ರಭ ವರದಿಯ ಜೊತೆಗೆ ಕಸಾಪ ಅಧ್ಯಕ್ಷ, ಪುರಸಭೆ ಸದಸ್ಯರೊಬ್ಬರ ನಿರಂತರ ಹೋರಾಟದ ಫಲವಾಗಿ ಶಾಸಕರ ಸೂಚನೆ ಬಳಿಕ ಕೊನೆಗೂ ಇಲ್ಲಿನ ಗ್ರಂಥಾಲಯಕ್ಕೆ ಕೊಠಡಿಯೊಂದು ಸಿಕ್ಕಿದೆ.

2023 ರ ಜೂ 16ರ ಕನ್ನಡಪ್ರಭ ಪತ್ರಿಕೆಯಲ್ಲಿ ಬೆಳಕಿಲ್ಲದ ಕಿಷ್ಕಿಂದೆ ಈ ಗ್ರಂಥಾಲಯ, ಆ.24 ರ ಕನ್ನಡಪ್ರಭ ಪತ್ರಿಕೆಯಲ್ಲಿ ಕೊನೆಗೂ ಕಿಷ್ಕಿಂದೆ ಗ್ರಂಥಾಲಯ ಸ್ಥಳಾಂತರಕ್ಕೆ ಸೂಚನೆ, ಅ.9ರ ಕನ್ನಡಪ್ರಭದಲ್ಲಿ ಗ್ರಂಥಾಲಯ ಕೊನೆಗೂ ಶಿಫ್ಟ್‌ ಆಗುವ ಕಾಲ ಕೂಡಿ ಬಂತು ಎಂದು ಸತತ ವರದಿ ಪ್ರಕಟಿಸಿತ್ತು.ಇದಾದ ನಂತರ ಶಾಸಕ ಎಚ್.ಎಂ.ಗಣೇಶ್‌ ಪ್ರಸಾದ್‌ ಸೂಚನೆ ಮೇರೆಗೆ ಜಿಲ್ಲಾಧಿಕಾರಿ ಶಿಲ್ಪನಾಗ್‌ ಕೂಡ ಗ್ರಂಥಾಲಯ ತಾತ್ಕಾಲಿಕ ಕಟ್ಟಡಕ್ಕೆ ಶಿಫ್ಟ್‌ ಮಾಡಿ ಎಂದು ಆದೇಶ ಹೊರಡಿಸಿ ನಾಲ್ಕು ತಿಂಗಳ ಬಳಿಕ ಶಾಲಾ ಶಿಕ್ಷಣ ಇಲಾಖೆಗೆ ಸೇರಿದ (ಸಾಹುಕಾರ್‌ ಚಿಕ್ಕಮಲ್ಲಪ್ಪ ದಾನ ನೀಡಿದ ಜಾಗ) ಕಟ್ಟಡದಲ್ಲಿ ಒಂದು ಕೊಠಡಿಗೆ ಗುರುವಾರ ಗ್ರಂಥ ಪಾಲಕರಿಗೆ ಶಾಲಾ ಶಿಕ್ಷಣ ಇಲಾಖೆಯ ಬಿಆರ್‌ಪಿ ಮಲ್ಲಿಕಾರ್ಜುನ ಕೀ ನೀಡಿದ್ದಾರೆ.ಕಳೆದ ನಾಲ್ಕು ತಿಂಗಳಿನಿಂದಲೂ ಬಿಇಒ ರಾಜಶೇಖರ ಕೊಠಡಿ ಬೀಗ ನೀಡಲು ಒಂದಲ್ಲ ಒಂದು ನೆಪ ಹೇಳುತ್ತ ಕಾಲ ಕಳೆದ ಕಾರಣ ಕಿಷ್ಕಿಂಧೆಯಂತಿರುವ ಕಟ್ಟಡದಿಂದ ಸ್ಥಳಾಂತರವಾಗಲು ಸಾದ್ಯವಾಗಿರಲಿಲ್ಲ. ಬಿಇಒ ವಿಳಂಭ ನೀತಿಯ ಬಗ್ಗೆ ಕನ್ನಡಪ್ರಭ ಪತ್ರಿಕೆ, ಕಸಾಪ ಜಿಲ್ಲಾಧ್ಯಕ್ಷ ಎಂ.ಶೈಲಕುಮಾರ್‌, ಪುರಸಭೆ ಸದಸ್ಯ ಎನ್.ಕುಮಾರ್‌,ದಲಿತ ಮುಖಂಡ ಕಾಳಿಂಗಸ್ವಾಮಿ ಶಾಸಕರ ತಿಳಿ ಹೇಳಿ, ಒತ್ತಡ ಹೇರುತ್ತಲೇ ಬಂದಿದ್ದರು. ಆದರೆ ಬಿಇಒ ಅವರ ವಿಳಂಬಕ್ಕೆ ಆಕ್ರೋಶಗೊಂಡ ಮೇಲ್ಕಂಡವರೆಲ್ಲ ಶಾಸಕರ ಗಮನಕ್ಕೆ ಗುರುವಾರ ಕೀ ಗ್ರಂಥಾಲಯ ಪಾಲಕರಿಗೆ ಕೊಡಿಸಬೇಕು ಎಂದು ಮನವಿ ಮಾಡಿದಾಗ ಶಾಸಕರ ಸೂಚನೆ ಮೇರೆಗೆ ಕೊಠಡಿಯ ಕೀ ಹಸ್ತಾಂತರವಾಗುವ ಸಮಯದಲ್ಲಿ ಕಸಾಪ ಮಾಜಿ ತಾಲೂಕು ಅಧ್ಯಕ್ಷ ಚಿದಾನಂದ ವೀರನಪುರ, ಪುರಸಭೆ ಸದಸ್ಯ ರಾಜಗೋಪಾಲ್‌,ದಲಿತ ಮುಖಂಡ ಕಾಳಿಂಗ ಸ್ವಾಮಿ,ಗ್ರಂಥ ಪಾಲಕ ಜಯಸ್ವಾಮಿ ಇದ್ದರು.ಕನ್ನಡಪ್ರಭ ನಿರಂತರ ವರದಿ ಹಾಗು ಕಸಾಪ ಜಿಲ್ಲಾಧ್ಯಕ್ಷ, ಓರ್ವ ಪುರಸಭೆ ಸದಸ್ಯರ ಹೋರಾಟದ ಫಲವಾಗಿ ಕೊನೆಗೂ ಕಿಷ್ಕಿಂಧೆ ಕಟ್ಟಡದಲ್ಲಿದ್ದ ಗ್ರಂಥಾಲಯ ಮೈಸೂರು-ಊಟಿ ಮುಖ್ಯ ರಸ್ತೆಯಲ್ಲಿನ ಕಟ್ಟಡಕ್ಕೆ ಬರುವ ಕಾಲ ಬಂದಿದೆ.ಕನ್ನಡಪ್ರಭ ವರದಿ ಬಳಿಕ ನಾನು ಸೇರಿದಂತೆ ಹಲವರು ಕಿಷ್ಕಿಂದೆ ಕಟ್ಟಡದಿಂದ ಗಾಳಿ, ಬೆಳಕು ಇರುವ ಸ್ಥಳ ಕೊಡಿಸಬೇಕು ಎಂದು ಶಾಸಕ ಎಚ್.ಎಂ.ಗಣೇಶ್‌ ಪ್ರಸಾದ್‌ ಗಮನಕ್ಕೆ ತಂದು ನಂತರ ಒತ್ತಡ ಹಾಕಿದ ಪರಿಣಾಮ ಗ್ರಂಥಾಲಯಕ್ಕೆ ಒಂದು ತಾತ್ಕಾಲಿಕ ಕೊಠಡಿ ಸಿಕ್ಕಿದೆ.ಶಾಸಕರು ಆದಷ್ಟು ಬೇಗ ಗ್ರಂಥಾಲಯ ಸ್ಥಳಾಂತರಿಸಲಿ. ಓದುಗರ ಪರವಾಗಿ ಶಾಸಕರಿಗೆ ಕೃತಜ್ಞತೆ ಸಲ್ಲಿಸುವೆ.ಎಂ.ಶೈಲಕುಮಾರ್‌,ಕಸಾಪ ಜಿಲ್ಲಾಧ್ಯಕ್ಷ