ಸಾರಾಂಶ
ಕನ್ನಡಪ್ರಭ ವಾರ್ತೆ ಮದ್ದೂರು
ಪಟ್ಟಣದ ಎಪಿಎಂಸಿ ಎಳನೀರು ಮಾರುಕಟ್ಟೆಗೆ ಸೋಮವಾರ ಸಂಜೆ ದಿಢೀರ್ ಭೇಟಿ ನೀಡಿದ ಮಾರುಕಟ್ಟೆ ಸಚಿವ ಶಿವರಾಜ್ ಪಾಟೀಲ್ ರೈತರು ಅಥವಾ ವರ್ತಕರ ಯಾವುದೇ ಸಮಸ್ಯೆಗಳನ್ನು ಆಲಿಸದೆ ಕಾರಿನಲ್ಲೇ ಒಂದು ಸುತ್ತು ಮಾರುಕಟ್ಟೆ ಪ್ರದಕ್ಷಿಣೆ ಹಾಕಿ ನಿರ್ಗಮಿಸಿದ ಪ್ರಸಂಗ ಜರುಗಿತು.ಮಾರುಕಟ್ಟೆಗೆ ಆಡಳಿತ ಕಚೇರಿಗೆ ಶಾಸಕ ಕೆ.ಎಂ.ಉದಯ್ ಅವರೊಂದಿಗೆ ಭೇಟಿ ನೀಡಿದ ಸಚಿವರು, ಸುಮಾರು 1 ಗಂಟೆಗಳ ಕಾಲ ಅಧಿಕಾರಿಗಳೊಂದಿಗೆ ಮಾರುಕಟ್ಟೆ ಸಮಸ್ಯೆಗಳ ಬಗ್ಗೆ ಪತ್ರಕರ್ತರನ್ನು ಹೊರಗಿಟ್ಟು ಚರ್ಚೆ ನಡೆಸಿ, ಮುಂದಿನ ದಿನಗಳಲ್ಲಿ ಅಧಿಕಾರಿಗಳು ಮಾರುಕಟ್ಟೆ ಹಾಗೂ ಆರ್ಥಿಕ ಸಂಪನ್ಮೂಲಗಳ ಕಡೆ ಹೆಚ್ಚಿನ ಗಮನ ಹರಿಸಬೇಕು ಎಂದು ಸೂಚನೆ ನೀಡಿದರು. ನಂತರ ಕಚೇರಿಯಿಂದ ಹೊರಬಂದ ಸಚಿವರು ಮಾರುಕಟ್ಟೆ ಪ್ರಾಂಗಣದಲ್ಲಿ ಕಾದು ನಿಂತಿದ್ದ ರೈತರು, ವರ್ತಕರು ಹಾಗೂ ಹಮಾಲಿಗಳ ಯಾವುದೇ ಆಹವಾಲು ಆಲಿಸದೆ ಕೇವಲ ಕಾರಿನಲ್ಲೇ ಕುಳಿತು ಮಾರುಕಟ್ಟೆ ಪ್ರಾಂಗಣದ ಪ್ರದಕ್ಷಿಣೆ ಹಾಕಿ ದ ಬಳಿಕ ಬೆಂಗಳೂರಿಗೆ ನಿರ್ಗಮಿಸಿದರು.
ಸಭೆಯಲ್ಲಿ ಶಾಸಕ ಕೆ.ಎಂ.ಉದಯ್ , ಮಂಡ್ಯ ಎಪಿಎಂಸಿ ಮಾರುಕಟ್ಟೆ ಉಪನಿರ್ದೇಶಕಿ ರೇವತಿ, ಮದ್ದೂರು ಎಪಿಎಂಸಿ ಕಾರ್ಯದರ್ಶಿ ಆರ್ .ಲತಾ ಕುಮಾರಿ, ಸಹಾಯಕ ಕಾರ್ಯದರ್ಶಿ ಶಿವಕುಮಾರ್ ಇದ್ದರು.ಸಿಎಂ ಭ್ರಷ್ಟಾಚಾರ ನಡೆಯಲು ಬಿಟ್ಟಿದ್ದಾರೆಯೇ ಮಂಜುನಾಥ್ ಪ್ರಶ್ನೆಮಂಡ್ಯ:
ಹಣಕಾಸು ಇಲಾಖೆ ಮುಖ್ಯಸ್ಥರಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ವಾಲ್ಮೀಕಿ ಅಭಿವೃದ್ಧಿ ನಿಗಮ ಸೇರಿದಂತೆ ವಿವಿಧ ಇಲಾಖೆಗಳಲ್ಲಿ ಭ್ರಷ್ಟಾಚಾರ ನಡೆಯಲು ಬಿಟ್ಟಿದ್ದಾರೆಯೇ ಎಂದು ಜಿಲ್ಲಾ ಬಿಜೆಪಿ ವಕ್ತಾರ ಸಿ.ಟಿ.ಮಂಜುನಾಥ್ ಪ್ರಶ್ನಿಸಿದ್ದಾರೆ.ಈ ಕುರಿತು ಹೇಳಿಕೆ ನೀಡಿರುವ ಅವರು, ವಾಲ್ಮೀಕಿ ಹಗರಣದಲ್ಲಿ ನನ್ನದೇನೂ ಪಾತ್ರವಿಲ್ಲ. ಎಲ್ಲಾ ಅಧಿಕಾರಿಗಳೇ ಮಾಡಿದ್ದು ಎಂದು ಹೇಳುವ ಮೂಲಕ ಮುಖ್ಯಮಂತ್ರಿಗಳು ಇದರಿಂದ ಪಾರಾಗುವ ಯತ್ನ ಮಾಡುತ್ತಿದ್ದಾರೆ. ಕೋಟ್ಯಂತರ ರು. ಅನುದಾನ ಬೇರೆ ಬೇರೆ ಖಾತೆಗಳಿಗೆ ವರ್ಗಾವಣೆಯಾದರೂ ಆರ್ಥಿಕ ಇಲಾಖೆ ಅಧಿಕಾರಿಗಳಿಗೆ ತಿಳಿದಿಲ್ಲ ಎಂದಾದರೆ ಇವರ ಜವಾಬ್ದಾರಿ ಹೇಗಿದೆ ಎಂಬುದನ್ನು ಅರ್ಥೈಸಿಕೊಳ್ಳಬೇಕು ಎಂದು ಟೀಕಿಸಿದ್ದಾರೆ.
ಪರಿಶಿಷ್ಟ ಜಾತಿ, ಪಂಗಡಕ್ಕೆ ಮೀಸಲಾಗಿದ್ದ ಕೋಟ್ಯಂತರ ರು. ಅನುದಾನವನ್ನು ಗ್ಯಾರೆಂಟಿ ಯೋಜನೆಗಳಿಗೆ ಬಳಕೆ ಮಾಡಿಕೊಂಡು ಆ ಸಮುದಾಯಗಳಿಗೆ ಅನ್ಯಾಯ ಮಾಡುತ್ತಿದ್ದಾರೆ. ಆರ್ಥಿಕ ಇಲಾಖೆ ಅಶಿಸ್ತಿನ ಪರಮಾವಧಿ ಮುಟ್ಟಿರುವ ಕಾರಣ ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ತಾವೇ ರಚಿಸಿರುವ ಆಯೋಗಕ್ಕೆ ಮುಡಾಕ್ಕೆ ಸಂಬಂಧಿಸಿದ ದಾಖಲಾತಿಗಳನ್ನು ಒದಗಿಸಲಿ ಎಂದು ಒತ್ತಾಯಿಸಿದ್ದಾರೆ.