ಸಾರಾಂಶ
ರಾಹುಲ್ ಗಾಂಧಿ ನಡೆಸಿದ ಭಾರತ್ ಜೋಡೋ ಯಾತ್ರೆ ಬಳಿಕ ದೇಶದ ಚಿತ್ರಣ ಬದಲಾಗಿದ್ದು, ರಾಷ್ಟ್ರವ್ಯಾಪಿ ಕಾಂಗ್ರೆಸ್ ಪರವಾದ ಅಲೆಯಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದು ಶಾಸಕ ಬಸವರಾಜ ಶಿವಣ್ಣನವರ ಹೇಳಿದರು.
ಬ್ಯಾಡಗಿ: ರಾಹುಲ್ ಗಾಂಧಿ ನಡೆಸಿದ ಭಾರತ್ ಜೋಡೋ ಯಾತ್ರೆ ಬಳಿಕ ದೇಶದ ಚಿತ್ರಣ ಬದಲಾಗಿದ್ದು, ರಾಷ್ಟ್ರವ್ಯಾಪಿ ಕಾಂಗ್ರೆಸ್ ಪರವಾದ ಅಲೆಯಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದು ಶಾಸಕ ಬಸವರಾಜ ಶಿವಣ್ಣನವರ ಹೇಳಿದರು.
ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಪಟ್ಟಣದ ವಿವಿಧ ವಾರ್ಡ್‌ಗಳಲ್ಲಿ ಚುನಾವಣಾ ಪ್ರಚಾರದ ವೇಳೆ ಅವರು ಮಾತನಾಡಿದರು.ರಾಷ್ಟ್ರದಲ್ಲಿ ರಾಹುಲ್ ಗಾಂಧಿ ಹಾಗೂ ಮಲ್ಲಿಕಾರ್ಜುನ ಖರ್ಗೆ ರಾಜ್ಯದಲ್ಲಿ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ ನೇತೃತ್ವದಲ್ಲಿ ಕಾಂಗ್ರೆಸ್ ಸದೃಢವಾಗಿ ಬೆಳೆದಿದ್ದು, ಬಿಜೆಪಿ ದುರಾಡಳಿತದಿಂದ ಬೇಸತ್ತ ಜನರು ಕಾಂಗ್ರೆಸ್ ಗೆಲ್ಲಿಸಲು ಈಗಾಗಲೇ ನಿರ್ಧರಿಸಿದ್ದಾರೆ ಎಂದರು.
ಭ್ರಷ್ಟ ಜುಮ್ಲಾ ಪಾರ್ಟಿ: ಬಿಜೆಪಿ ಇದೀಗ ಭ್ರಷ್ಟ ಜುಮ್ಲಾ ಪಾರ್ಟಿಯಾಗಿದೆ. ಇದೀಗ ಬಿಜೆಪಿ ಬಣ್ಣವು ಬಯಲಾಗಿದ್ದು ''''''''ಕುಚ್ ಕಾ ಸಾಥ್, ಖುದ್ ಕಾ ವಿಕಾಸ್, ಸಬ್ಕೆ ಸಾಥ್ ವಿಶ್ವಾಸಘಾತ್'''''''', ರಾಹುಲ್ ಗಾಂಧಿ ಅವರ ದೇಶದ ಅಭಿವೃದ್ಧಿ ಪತ್ರವನ್ನು ಭಾರತ್ ಜೋಡೋ ಯಾತ್ರೆಯಲ್ಲಿ ಸ್ಪಷ್ಟ ಸಂದೇಶದೊಂದಿಗೆ ನೀಡಿದ್ದಾರೆ ಎಂದರು.ಮಜೀದ್ ಮುಲ್ಲಾ, ಡಾ. ಎ.ಎಂ. ಸೌದಾಗರ, ಮುನಾಫ್ ಎರೇಶೀಮಿ, ರಾಜೇಸಾಬ್ ಕಳ್ಯಾಳ, ರಫೀಕ್ ಮುದ್ಗಲ್, ಖಾದರಸಾಬ್ ದೊಡ್ಮನಿ, ಗಿರೀಶ ಇಂಡಿಮಠ, ಶ್ರೀನಿವಾಸ್ ಕುರಕುಂದಿ, ಮಾರುತಿ ಹಂಜಗಿ ಇನ್ನಿತರ ಕಾಂಗ್ರೆಸ್ ಕಾರ‍್ಯಕರ್ತರು ಉಪಸ್ಥಿತರಿದ್ದರು.