ಗುಣಮಟ್ಟದ ಶಿಕ್ಷಣಕ್ಕೆ ಆಗರಬನ್ನಿಹಟ್ಟಿ ಶಾಲೆ ಮಾದರಿ

| Published : Nov 21 2025, 01:15 AM IST

ಗುಣಮಟ್ಟದ ಶಿಕ್ಷಣಕ್ಕೆ ಆಗರಬನ್ನಿಹಟ್ಟಿ ಶಾಲೆ ಮಾದರಿ
Share this Article
  • FB
  • TW
  • Linkdin
  • Email

ಸಾರಾಂಶ

ಹೈಟೆಕ್‌ನಂತಹ ಖಾಸಗಿ ಶಾಲೆಗಳಿಗೆ ಸರಿಸಮವಾಗಿ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆ ಶೈಕ್ಷಣಿಕವಾಗಿ ಬೇಕಾದಂತಹ ಎಲ್ಲ ಸೌಲಭ್ಯಗಳನ್ನು ಹೊಂದಿ ಒಂದು ಅತ್ಯುತ್ತಮವಾದ ಮಾದರಿ ಶಾಲೆಯಾಗಿದೆ ಎಂದು ಶಾಸಕ ಬಸವರಾಜು ವಿ. ಶಿವಗಂಗಾ ಹೇಳಿದ್ದಾರೆ.

- ಸರ್ಕಾರಿ ಉರ್ದು ಕ್ಲಸ್ಟರ್‌ಮಟ್ಟದ ಪ್ರತಿಭಾ ಕಾರಂಜಿ ಉದ್ಘಾಟಿಸಿ ಶಾಸಕ ಬಸವರಾಜ ಶ್ಲಾಘನೆ

- - -

ಕನ್ನಡಪ್ರಭ ವಾರ್ತೆ ಚನ್ನಗಿರಿ

ಹೈಟೆಕ್‌ನಂತಹ ಖಾಸಗಿ ಶಾಲೆಗಳಿಗೆ ಸರಿಸಮವಾಗಿ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆ ಶೈಕ್ಷಣಿಕವಾಗಿ ಬೇಕಾದಂತಹ ಎಲ್ಲ ಸೌಲಭ್ಯಗಳನ್ನು ಹೊಂದಿ ಒಂದು ಅತ್ಯುತ್ತಮವಾದ ಮಾದರಿ ಶಾಲೆಯಾಗಿದೆ ಎಂದು ಶಾಸಕ ಬಸವರಾಜು ವಿ. ಶಿವಗಂಗಾ ಹೇಳಿದರು.

ತಾಲೂಕಿನ ಆಗರಬನ್ನಿಹಟ್ಟಿ ಗ್ರಾಮದ ಸರ್ಕಾರಿ ಉರ್ದು ಕ್ಲಸ್ಟರ್‌ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು. ಬಹುತೇಕವಾಗಿ ಗ್ರಾಮಾಂತರ ಪ್ರದೇಶಗಳಿಂದ ಪಟ್ಟಣದಲ್ಲಿರುವ ಶಾಲೆಗಳಿಗೆ ಪೋಷಕರು ತಮ್ಮ ಮಕ್ಕಳನ್ನು ಸೇರಿಸುತ್ತಾರೆ. ಆದರೆ, ಗ್ರಾಮಾಂತರ ಪ್ರದೇಶದಲ್ಲಿರುವ ಈ ಸರ್ಕಾರಿ ಉರ್ದು ಶಾಲೆಗೆ ಚನ್ನಗಿರಿ ಪಟ್ಟಣದಿಂದ 80 ಮಕ್ಕಳನ್ನು ದಾಖಲಾತಿ ಮಾಡಿರುವುದು ಗಮನಿಸಿದರೆ ಶಾಲೆಯಲ್ಲಿನ ಶಿಕ್ಷಕರು ಉತ್ತಮ ರೀತಿಯಲ್ಲಿ ಬೋಧನೆ ಮಾಡುತ್ತಿರುವುದೇ ಕಾರಣ ಎಂದು ಶಾಲೆ ಪ್ರಗತಿ ಮತ್ತು ಮುಖ್ಯಶಿಕ್ಷಕ ಸೈಯ್ಯದ್ ಇಲಿಯಾಸ್ ಅಹಮದ್ ಮತ್ತು ಶಿಕ್ಷಕರ ಪರಿಶ್ರಮ ಬಗ್ಗೆ ಶ್ಲಾಘಿಸಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಎಲ್.ಜಯಪ್ಪ ಮಾತನಾಡಿ, ಇದು ಉತ್ತಮವಾದ ಶಾಲೆಯಾಗಿದೆ. ಪ್ರಗತಿ ಸಾಧನೆ ಪರಿಗಣಿಸಿ ಶಾಲೆಗೆ ಮತ್ತು ಮುಖ್ಯ ಶಿಕ್ಷಕರಿಗೆ ಹಲವಾರು ಪ್ರಶಸ್ತಿಗಳು ದೊರೆತಿವೆ. ಶಾಲೆಯಲ್ಲಿನ ಶಿಸ್ತು, ಸ್ವಚ್ಛತೆ, ಶಾಲಾಭಿವೃದ್ಧಿ ಸಮಿತಿ ಮತ್ತು ಗ್ರಾಮಸ್ಥರ ಸಹಕಾರದಿಂದ ಶಾಲೆ ಪ್ರಗತಿದಾಯಕವಾಗಿ ನಡೆಯುತ್ತಿದೆ ಎಂದರು.

ಸಮಾರಂಭದ ಅಧ್ಯಕ್ಷತೆಯನ್ನು ಎಸ್.ಡಿ.ಎಂ.ಸಿ. ಅಧ್ಯಕ್ಷ ಮಹಬೂಬ್ ಖಾನ್ ವಹಿಸಿ, ಪ್ರತಿಭಾ ಕಾರಂಜಿ ಕಾರ್ಯಕ್ರಮದಿಂದ ಮಕ್ಕಳಲ್ಲಿರುವ ಪ್ರತಿಭೆಗಳನ್ನು ಹೊರತರಲು ಉತ್ತಮವಾದ ವೇದಿಕೆಯಾಗಿದೆ ಎಂದರು.

ಮುಖ್ಯ ಅತಿಥಿ, ಮುಖ್ಯ ಶಿಕ್ಷಕ ಸೈಯ್ಯದ್ ಇಲ್ಯಾಸ್ ಅಮಹದ್, ಗ್ರಾ.ಪಂ. ಮಾಜಿ ಅಧ್ಯಕ್ಷ ಬಿ.ಕೆ. ರಾಜಪ್ಪ, ಉಪಾಧ್ಯಕ್ಷ ಚಿತ್ರಸ್ವಾಮಿ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಗಣೇಶ್, ಪ್ರಮು|ಖರಾದ ಶಶಿರ್ ಜಾನ್, ಜಾಕೀರ್ ಉಲ್ಲಾ, ಷರೀಫ್‌, ನವೀಜ್ ರಹಮಾನ್, ಅಬ್ದುಲ್ ಮಜೀದ್ ಸೇರಿದಂತೆ ಉರ್ದು ಕ್ಲಸ್ಟರ್‌ನ 13 ಶಾಲೆಗಳ ಮುಖ್ಯ ಶಿಕ್ಷಕರು, ಸಹ ಶಿಕ್ಷಕರು, ಪೋಷಕರು ಭಾಗವಹಿಸಿದ್ದರು.

- - -

-20ಕೆಸಿಎನ್‌ಜಿ1.ಜೆಪಿಜಿ:

ಆಗರಬನ್ನಿಹಟ್ಟಿ ಸರ್ಕಾರಿ ಉರ್ದು ಕ್ಲಸ್ಟರ್‌ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮವನ್ನು ಚನ್ನಗಿರಿ ಕ್ಷೇತ್ರ ಶಾಸಕ ಬಸವರಾಜು ಶಿವಗಂಗಾ ಉದ್ಘಾಟಿಸಿದರು.