ಇಲ್ಲಿನ ಮೂಡ್ಲಕಟ್ಟೆಯ ಐಎಂಜೆ ವಿಜ್ಞಾನ ಮತ್ತು ವಾಣಿಜ್ಯ ಕಾಲೇಜು (ಐಎಂಜೆಐಎಸ್‌ಸಿ) ಮತ್ತು ಪ್ರತಿಷ್ಠಿತ ಸ್ಕಿಲ್ ಆರ್ಬಿಟ್ ಸಂಸ್ಥೆ ನಡುವೆ, ವಿದ್ಯಾರ್ಥಿಗಳ ಉದ್ಯೋಗಾರ್ಹತೆ ಹೆಚ್ಚಿಸುವ ಮಹತ್ವ ಒಡಂಬಡಿಕೆ ನಡೆದಿದ್ದು, ಇದರಿಂದ ಕಾಲೇಜಿನಲ್ಲಿ ಉದ್ಯಮಾಧಾರಿತ ಆಡ್-ಆನ್ ಕೋರ್ಸ್‌ಗಳಿಗೆ ಚಾಲನೆ ನೀಡಿ, ಈ ಬಗ್ಗೆ ಕಾರ್ಯಾಗಾರ ಆಯೋಜಿಸಲಾಯಿತು.

ಕನ್ನಡಪ್ರಭ ವಾರ್ತೆ ಕುಂದಾಪುರ

ಇಲ್ಲಿನ ಮೂಡ್ಲಕಟ್ಟೆಯ ಐಎಂಜೆ ವಿಜ್ಞಾನ ಮತ್ತು ವಾಣಿಜ್ಯ ಕಾಲೇಜು (ಐಎಂಜೆಐಎಸ್‌ಸಿ) ಮತ್ತು ಪ್ರತಿಷ್ಠಿತ ಸ್ಕಿಲ್ ಆರ್ಬಿಟ್ ಸಂಸ್ಥೆ ನಡುವೆ, ವಿದ್ಯಾರ್ಥಿಗಳ ಉದ್ಯೋಗಾರ್ಹತೆ ಹೆಚ್ಚಿಸುವ ಮಹತ್ವ ಒಡಂಬಡಿಕೆ ನಡೆದಿದ್ದು, ಇದರಿಂದ ಕಾಲೇಜಿನಲ್ಲಿ ಉದ್ಯಮಾಧಾರಿತ ಆಡ್-ಆನ್ ಕೋರ್ಸ್‌ಗಳಿಗೆ ಚಾಲನೆ ನೀಡಿ, ಈ ಬಗ್ಗೆ ಕಾರ್ಯಾಗಾರ ಆಯೋಜಿಸಲಾಯಿತು.ಕಾರ್ಯಾಗಾರದಲ್ಲಿ ಕೃತಕ ಬುದ್ಧಿಮತ್ತೆ ಮತ್ತು ಯಂತ್ರ ಕಲಿಕೆ, ಸೈಬರ್ ಸೆಕ್ಯುರಿಟಿ, ಹಣಕಾಸು ಮತ್ತು ಷೇರು ಪೇಟೆ, ಡಿಜಿಟಲ್ ಹಾಗೂ ಸಾಮಾಜಿಕ ಮಾಧ್ಯಮ ಮಾರ್ಕೆಟಿಂಗ್ ಮತ್ತು ಮಾನವ ಸಂಪನ್ಮೂಲ ನಿರ್ವಹಣೆ ಕ್ಷೇತ್ರಗಳ ಕೋರ್ಸ್‌ಗಳ ಕುರಿತು ವಿಸ್ತೃತ ಮಾಹಿತಿ ನೀಡಲಾಯಿತು.ಸ್ಕಿಲ್ ಆರ್ಬಿಟ್‌ನ ಮಾರ್ಗದರ್ಶಕಿ ಗಂಟಾ ಶ್ರುತಿ, ಮಾನವ ಸಂಪನ್ಮೂಲ ಪ್ರಬಂಧಕ ಪವನ್ ಕೊಡುರಿ ಹಾಗೂ ಉತ್ಪಾದನಾ ಪ್ರಬಂಧಕ ಮನೋಜ್ ಚಿಂತಡ ಅವರು ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಂಡು ವಿದ್ಯಾರ್ಥಿಗಳಿಗೆ ಉದ್ಯಮದ ಪ್ರಸ್ತುತ ಬೇಡಿಕೆಗಳು ಮತ್ತು ಕೌಶಲ್ಯಗಳ ಕುರಿತು ಮಾರ್ಗದರ್ಶನ ನೀಡಿದರು.ಬಿಸಿಎ, ಬಿ.ಕಾಂ ಮತ್ತು ಬಿಬಿಎ ವಿಭಾಗಗಳ ಪ್ರಥಮ, ದ್ವಿತೀಯ ಮತ್ತು ಅಂತಿಮ ವರ್ಷದ ವಿದ್ಯಾರ್ಥಿಗಳು ಕಾರ್ಯಾಗಾರದಲ್ಲಿ ಉತ್ಸಾಹದಿಂದ ಪಾಲ್ಗೊಂಡರು. ಪದವಿ ಶಿಕ್ಷಣದ ಜೊತೆಗೆ ಉದ್ಯಮಕ್ಕೆ ಪೂರಕವಾದ ಕೌಶಲ್ಯಗಳನ್ನು ಬೆಳೆಸಿಕೊಳ್ಳಲು ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ಆಡ್-ಆನ್ ಕೋರ್ಸ್‌ಗಳಿಗೆ ನೋಂದಾಯಿಸಿಕೊಂಡಿರುವುದು ವಿಶೇಷವಾಗಿತ್ತು.ಕಾಲೇಜಿನ ತರಬೇತಿ ಮತ್ತು ಉದ್ಯೋಗಾಧಿಕಾರಿಗಳಾದ ಪವನ್‌ದಾಸ್ ಮತ್ತು ನಿಧಿ ಅವರು ಕಾರ್ಯಕ್ರಮ ಸಂಯೋಜಿಸಿದರು.