ಮನುಷ್ಯನಿಗಿಂತ ಉತ್ತಮ ಫಲಿತಾಂಶ ನೀಡುತ್ತಿದೆ ಎಐ

| Published : Nov 22 2025, 02:45 AM IST

ಸಾರಾಂಶ

ಕೃತಕ ಬುದ್ಧಿಮತ್ತೆ ದಿನನಿತ್ಯದ ಜೀವನದ ಭಾಗವಾಗಿದೆ. ನಾವು ಸಿರಿ ಅಥವಾ ಅಲೆಕ್ಸಾ ಅವರನ್ನು ನಮ್ಮ ನೆಚ್ಚಿನ ಸಂಗೀತ ನುಡಿಸಲು ಕೇಳುತ್ತೇವೆ. ಹೀಗೆ ಕೃತಕ ಬುದ್ಧಿಮತ್ತೆ ಮನುಷ್ಯರಿಗಿಂತ ಉತ್ತಮ ಫಲಿತಾಂಶ ನೀಡುತ್ತಿದೆ.

ಧಾರವಾಡ:

ಕೃತಕ ಬುದ್ಧಿಮತ್ತೆ ದಿನನಿತ್ಯದ ಜೀವನದ ಭಾಗವಾಗಿದೆ. ನಾವು ಸಿರಿ ಅಥವಾ ಅಲೆಕ್ಸಾ ಅವರನ್ನು ನಮ್ಮ ನೆಚ್ಚಿನ ಸಂಗೀತ ನುಡಿಸಲು ಕೇಳುತ್ತೇವೆ. ಹೀಗೆ ಕೃತಕ ಬುದ್ಧಿಮತ್ತೆ ಮನುಷ್ಯರಿಗಿಂತ ಉತ್ತಮ ಫಲಿತಾಂಶ ನೀಡುತ್ತಿದೆ ಎಂದು ಯುವ ಚಿಂತನಾ ಸಮಾವೇಶದ ಸರ್ವಾಧ್ಯಕ್ಷ ಸುನೀಲ ಬಾಗೇವಾಡಿ ಹೇಳಿದರು.

ಪಂ. ಪುಟ್ಟರಾಜ ಗವಾಯಿಗಳ ಕಲಾ ಪ್ರತಿಷ್ಠಾನ ಮತ್ತು ಹುರಕಡ್ಲಿ ಅಜ್ಜ ಶಿಕ್ಷಣ ಸಮಿತಿಯ ಕೆ.ಎಸ್. ಜಗಳೂರು ಕಾಲೇಜು ಜಂಟಿಯಾಗಿ 2ನೇ ಯುವ ಚಿಂತನಾ ಸಮಾವೇಶದ ಅಂಗವಾಗಿ ದೇವರ ಹುಬ್ಬಳ್ಳಿಯ ಸಿದ್ಧಾಶ್ರಮದಲ್ಲಿ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಕೃತಕ ಬುದ್ಧಿಮತ್ತೆ ಪ್ರಗತಿಗಳ ಉಪನ್ಯಾಸದಲ್ಲಿ ಅವರು ಮಾತನಾಡಿದರು. ಪ್ರಸ್ತುತ ನಿತ್ಯ ಕಾರ್ಯ ಕಲಾಪಗಳನ್ನು ನಾವು ಸ್ನೇಹಿತರೊಂದಿಗೆ ಎಐ ಸಹ ಬಳಸುವಂತಾಗಿದೆ ಎಂದರು.

ಪ್ರಾಚಾರ್ಯ ದತ್ತಾ ಕಾಮಕರ ಅಧ್ಯಕ್ಷತೆ ವಹಿಸಿದ್ದರು. ಎಲೆಕ್ಟ್ರಾನಿಕ್ಸ್ ಮತ್ತು ಸಂವಹನ ಎಂಜಿನಿಯರಿಂಗ್ ವಿಭಾಗದ ಪ್ರಾಧ್ಯಾಪಕ ಶ್ರೀಧರ ಜೋಶಿ ಹಾಗೂ ಕೃತಕ ಬುದ್ಧಿಮತ್ತೆ ಮತ್ತು ಯಂತ್ರ ಕಲಿಕೆ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ರಾಮಚಂದ್ರ ನಾಯಕ ಕೃತಕ ಬುದ್ಧಿಮತ್ತೆಯ ಪ್ರಗತಿಗಳ ಕುರಿತು ಉಪನ್ಯಾಸ ನೀಡಿದರು.

ನಿವೃತ್ತ ಮುಖ್ಯೋಪಾಧ್ಯಾಯರಾದ ಪ್ರಮೀಳಾ ಜಕ್ಕಣ್ಣವರ್, ಪ್ರತಿಷ್ಠಾನದ ಕಾರ್ಯದರ್ಶಿ ಮಾರ್ತಾಂಡಪ್ಪ ಕತ್ತಿ, ಡಾ. ಅಶ್ವಿನಿ ಪಾಟೀಲ, ಪ್ರೊ. ಅನಿತಾ ಕಡಪಟ್ಟಿ, ಸಂಯೋಜಕ ಅರುಣಕುಮಾರ ಶೀಲವಂತ, ನೇಹಾ ಬುದ್ನಿ, ಶಕುಂತಲಾ ಬಿರಾದಾರ ಮಾತನಾಡಿದರು. ಕಲಾವತಿ ಕಡಪಟ್ಟಿ, ರತ್ನಾ ಕಡಪಟ್ಟಿ, ಅನುಷಾ ಬಳಗಾನೂರ, ಮಹಾದೇವ ಸುಳ್ಳದ, ಗಗನಾ ಡಿ.ಕೆ, ರೇಣುಕಾ ಗೊಡಚಿ, ಭವಾನಿ ಹಿರೇಮಠ, ಸವಿತಾ ಗಾಣಿಗೇರ, ಶುಭಾ ಹೆಗಡೆ ಇದ್ದರು.