ಕೃತಕ ಬುದ್ದಿಮತ್ತೆ ಮತ್ತು ಯಂತ್ರ ಕಲಿಕೆಯು ಮಾನವ ಬುದ್ದಿವಂತಿಕೆಯ ಕಾರ್ಯಗಳನ್ನು ನಿರ್ವಹಿಸುತ್ತದೆ. ಈ ತಂತ್ರಜ್ಞಾನದಿಂದ ಆರೋಗ್ಯ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿ ಕ್ರಾಂತಿಕಾರಿ ಬದಲಾವಣೆ ತಂದಿದೆ ಎಂದು ಜಿಲ್ಲಾ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ಸರ್ಜನ್ ಡಾ.ಎಸ್.ಚಂದ್ರಶೇಖರ್ ಸಾಲಿಮಠ್ ಹೇಳಿದರು.
ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು
ಕೃತಕ ಬುದ್ದಿಮತ್ತೆ ಮತ್ತು ಯಂತ್ರ ಕಲಿಕೆಯು ಮಾನವ ಬುದ್ದಿವಂತಿಕೆಯ ಕಾರ್ಯಗಳನ್ನು ನಿರ್ವಹಿಸುತ್ತದೆ. ಈ ತಂತ್ರಜ್ಞಾನದಿಂದ ಆರೋಗ್ಯ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿ ಕ್ರಾಂತಿಕಾರಿ ಬದಲಾವಣೆ ತಂದಿದೆ ಎಂದು ಜಿಲ್ಲಾ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ಸರ್ಜನ್ ಡಾ.ಎಸ್.ಚಂದ್ರಶೇಖರ್ ಸಾಲಿಮಠ್ ಹೇಳಿದರು.ನಗರದ ಎಐಟಿ ಕಾಲೇಜಿನಲ್ಲಿ ಬಿಜಿಎಸ್ ಸಭಾಂಗಣದಲ್ಲಿ ಸೋಮವಾರ ಕೃತಕ ಬುದ್ದಿಮತ್ತೆ ಮತ್ತು ಯಂತ್ರ ಕಲಿಕೆ ವಿಭಾಗದ ಉದ್ಘಾಟನಾ ಸಮಾರಂಭ, ಎಐಟಿಯುಎ ತರಬೇತಿ ಮತ್ತು ಕಲಿಕಾ ಅಕಾಡೆಮಿ ಪ್ರಾಯೋಜಿತ ಆರು ದಿನಗಳ ಆಫ್‌ಲೈನ್ ಅಧ್ಯಾಪಕರ ಅಭಿವೃದ್ಧಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಆರೋಗ್ಯ ಸೇವೆ ವೇಗವಾಗಿ ಪರಿವರ್ತನೆಗೊಳ್ಳುತ್ತಿರುವ ಕಾಲದಲ್ಲಿ ನಾವು ಬದುಕುತ್ತಿದ್ದೇವೆ. ಕಳೆದ ಕೋವಿಡ್ ಸಮಯದಲ್ಲಿ ಜೀವಗಳನ್ನು ಉಳಿಸಲು ತಂತ್ರಜ್ಞಾನ ಎಷ್ಟು ನಿರ್ಣಯವಾಗಿದೆ ಎಂಬುದನ್ನು ಜಗ ತ್ತು ಕಂಡಿದೆ. ಆರಂಭಿಕ ರೋಗ ನಿರ್ಣಯದಿಂದ ರೋಬೋಟಿಕ್ ಶಸ್ತ್ರಚಿಕಿತ್ಸೆಯವರೆಗೆ ತಂತ್ರಜ್ಞಾನವು ಆಧು ನಿಕ ವೈದ್ಯಕೀಯ ಬೆನ್ನಲುಬಾಗಿ ಮಾರ್ಪಾಟ್ಟಿದೆ ಎಂದರು.ಹಿಂದಿನ ಕಾಲಘಟ್ಟದಲ್ಲಿ ಶಸ್ತ್ರಚಿಕಿತ್ಸೆ ವಿಭಾಗಕ್ಕೆ ರೋಗಿಗಳು ಬಂದರೆ ವೈದ್ಯಕೀಯ ಇತಿಹಾಸ ತೆಗೆದು ಪರೀಕ್ಷಿಸಬೇಕಿತ್ತು. ನಂತರ ವೈದ್ಯಕೀಯ, ನಾಡಿ ಪರೀಕ್ಷೆ, ಕಣ್ಣುಗಳ ತಪಾಸಣೆ, ಜ್ವರದ ತಾಪಮಾನ ಪರಿಶೀ ಲಿಸಿ ಚಿಕಿತ್ಸೆ ಮುಂದುವರೆಯುತ್ತಿತ್ತು ಆದರೀಗ ತಂತ್ರಜ್ಞಾನ ಬೆಳೆದಂತೆ ವೈದ್ಯಕೀಯ ಚಿಕಿತ್ಸಾ ಪದ್ಧತಿ ಮುಂದುವರಿದು ರೋಗಿಗಳ ಮೂಲ ಸಮಸ್ಯೆಯನ್ನು ಪತ್ತೆಹಚ್ಚುವ ಸಾಮರ್ಥ್ಯ ಬೆಳೆದಿದೆ ಎಂದರು.
ತಂತ್ರಜ್ಞಾನದ ಕ್ಷೇತ್ರದಲ್ಲಿ ಭಾರತ ಕೆಲವೇ ವರ್ಷಗಳಲ್ಲಿ ಅಗಾಧವಾದ ಬೆಳವಣಿಗೆ ಕಂಡುಕೊಂಡಿದೆ. ತಂತ್ರಜ್ಞಾನವು ಹೆಚ್ಚಿನ ಜೀವಗಳನ್ನು ಉಳಿಸುವ, ದುಃಖವನ್ನು ಕಡಿಮೆ ಮಾಡುವ ಮತ್ತು ಪ್ರತಿಯೊಬ್ಬ ನಾಗರಿಕರಿಗೂ ಆರೋಗ್ಯ ಸೇವೆಯನ್ನು ಬಲಪಡಿಸುವ ಭವಿಷ್ಯವನ್ನು ನಿರ್ಮಿಸಲು ಎಲ್ಲರೂ ಕೈಜೋಡಿಸಬೇಕು ಎಂದರು.ಅಭಿವೃದ್ದಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿರುವ ಆಧ್ಯಾಪಕರು ತರಬೇತಿಯನ್ನು ಸದ್ಬಳಕೆ ಮಾಡಿಕೊಳ್ಳ ಬೇಕು. ಇಲ್ಲಿ ಹಂಚಿಕೊಂಡ ಜ್ಞಾನವು ಭವಿಷ್ಯದಲ್ಲಿ ಜೀವಗಳನ್ನು ಉಳಿಸುವ ನಾನೀನ್ಯತೆಗಾಗಿ ರೂಪಾಂತರವಾಗಬೇಕು ಎಂದು ತಿಳಿಸಿದರು.
ಬಿ.ಜಿ.ನಗರ್ ಎಸಿಯು ರಿಜಿಸ್ಟ್ರಾರ್ ಡಾ.ಸಿ.ಕೆ.ಸುಬ್ಬರಾಯ ಮಾತನಾಡಿ, ಎಐ ಮತ್ತು ಎಂಎಲ್ ತಂತ್ರ ಜ್ಞಾನವು ಸಮಾಜದಲ್ಲಿ ಸಾಕಷ್ಟು ಬದಲಾವಣೆ ತಂದಿದೆ. ಇವುಗಳನ್ನು ಸಕ್ರಿಯವಾಗಿ ಬಳಸಿಕೊಳ್ಳುವ ಜವಾ ಬ್ದಾರಿ ಯುವಸಮೂಹ ಮೇಲಿದ್ದು, ಬೇಡದ ಚಟುವಟಿಕೆಗಳಿಗೆ ಒತ್ತು ನೀಡದೇ, ವಿದ್ಯಾರ್ಥಿದೆಸೆಯಿಂದಲೇ ತಂತ್ರಜ್ಞಾನದ ಕಲಿಕೆಗೆ ಸಮಯ ಮುಡಿಪಿಡಬೇಕು ಎಂದು ತಿಳಿಸಿದರು.ಆರೋಗ್ಯ ಕ್ಷೇತ್ರದಲ್ಲೂ ಕೃತಕ ಬುದ್ದಿಮತ್ತೆ ಬಹಳಷ್ಟು ಕೊಡುಗೆ ನೀಡಿದೆ. ಕೆಲವು ಶಸ್ತ್ರ ಚಿಕಿತ್ಸೆಗಳಲ್ಲಿ ಎಐ ತಂತ್ರಜ್ಞಾನವು ಬಳಕೆಯಲ್ಲಿದೆ. ಆಧುನಿಕ ಜಗತ್ತಿನಲ್ಲಿ ಕುಳಿತ ಸ್ಥಳದಲ್ಲೇ ಎಲ್ಲವನ್ನು ನೋಡುವ ಶಕ್ತಿ ತಂತ್ರಜ್ಞಾನ ನೀಡಿದ್ದು ಬದಲಾದ ಜಗತ್ತಿನಲ್ಲಿ ಕಾಲನುಸಾರ ನಾವುಗಳು ಹೊಸ ಆವಿಷ್ಕಾರಗಳಿಗೆ ಮನ್ನಣೆ ನೀಡಬೇಕು ಎಂದು ಹೇಳಿದರು.
ಎಐಟಿ ಕಾಲೇಜು ಪ್ರಾಂಶುಪಾಲ ಡಾ.ಸಿ.ಟಿ.ಜಯದೇವ್ ಮಾತನಾಡಿ, ತಾಂತ್ರಿಕ ಯುಗದಲ್ಲಿ ಎಲ್ಲಿಯೇ ತೆರಳಿದರೂ ಎಐ ತಂತ್ರಜ್ಞಾನ ಪ್ರಚಲಿತದಲ್ಲಿದೆ. ಅಧ್ಯಾಪಕ ವೃಂದ ತರಬೇತಿ ಸಂಪೂರ್ಣ ವಿಷಯವನ್ನು ಅರಿತುಕೊಳ್ಳಬೇಕು ಎಂದರು.ಕಾರ್ಯಕ್ರಮದ ಸಂಯೋಜಕಿ ಸತ್ಯಭಾಮ ಮಾತನಾಡಿ, ಅಧ್ಯಾಪಕರ ಅಭಿವೃದ್ದಿ ತರಬೇತಿಯಲ್ಲಿ ರಾಜ್ಯ ಸೇರಿ ಮಹಾರಾಷ್ಟ್ರ, ಓಡಿಶಾ, ತೆಲಂಗಾಣ ಮತ್ತು ತಮಿಳುನಾಡು ರಾಜ್ಯದಿಂದ ಸುಮಾರು 59 ಸ್ಪರ್ಧಿಗಳು ಭಾಗವಹಿಸಿದ್ದು ನ್ಯೂಡೆಲ್ಲಿ ಎಐಸಿಟಿಇ ಸಂಸ್ಥೆ 3.5 ಲಕ್ಷ ರು. ಕಾರ್ಯಕ್ರಮಕ್ಕೆ ಅನುದಾನ ಒದಗಿಸಿ ಕೊಟ್ಟಿದೆ ಎಂದರು.
ಎಐಎಂಎಎಲ್ ವಿಭಾಗದ ಮುಖ್ಯಸ್ಥೆ ಡಾ.ಸುನೀತಾ, ವಿವಿಧ ವಿಭಾಗದ ಮುಖ್ಯಸ್ಥರು, ಸಿಬ್ಬಂದಿ ಹಾಜರಿದ್ದರು.