ಬಣಜಿಗ ವಿದ್ಯಾರ್ಥಿನಿಯರ ನಿಲಯಕ್ಕೆ ನೆರವು: ಶಾಸಕ ಕೆ. ಹರೀಶ್‌ ಗೌಡ ಭರವಸೆ

| Published : May 10 2025, 01:17 AM IST

ಬಣಜಿಗ ವಿದ್ಯಾರ್ಥಿನಿಯರ ನಿಲಯಕ್ಕೆ ನೆರವು: ಶಾಸಕ ಕೆ. ಹರೀಶ್‌ ಗೌಡ ಭರವಸೆ
Share this Article
  • FB
  • TW
  • Linkdin
  • Email

ಸಾರಾಂಶ

ಮಹಾರಾಣಿ ಮೂರು ವಿಭಾಗಗಳಿಂದ ಪ್ರತಿವರ್ಷ 16,800 ಮಂದಿ ವಿದ್ಯಾರ್ಥಿನಿಯರು ಪ್ರವೇಶಾತಿ ಪಡೆಯುತ್ತಿದ್ದಾರೆ. ಹೀಗಾಗಿ ಸಾವಿರಾರು ಮಂದಿ ವಿದ್ಯಾರ್ಥಿನಿಯರು ವಿದ್ಯಾರ್ಥಿನಿಲಯಕ್ಕಾಗಿ ಪರದಾಡುವ ಸ್ಥಿತಿ ಇದೆ. ಸಮುದಾಯದಿಂದ 50 ಮಂದಿ ವಿದ್ಯಾರ್ಥಿನಿಯರಿಗೆ ಆಶ್ರಯ ನೀಡಿರುವುದು ಸ್ವಾಗತಾರ್ಹ. ಇನ್ನೂ 50 ಮಂದಿಗೆ ನೆರವಾಗುವ ವಿದ್ಯಾರ್ಥಿನಿಲಯ ಸ್ಥಾಪಿಸಿದರೆ ಅದಕ್ಕೆ ಅಗತ್ಯ ಸಹಕಾರ.

ಕನ್ನಡಪ್ರಭ ವಾರ್ತೆ ಮೈಸೂರು

ಬಣಜಿಗರ ವಿದ್ಯಾರ್ಥಿನಿಲಯಕ್ಕೆ ಕೈ ಮೀರಿ ವೈಯುಕ್ತಿಕವಾಗಿ ಸಹಕಾರ ನೀಡುತ್ತೇನೆ ಎಂದು ಶಾಸಕ ಕೆ. ಹರೀಶ್‌ ಗೌಡ ಭರವಸೆ ನೀಡಿದರು.

ನಗರದ ಎಂಜಿನಿಯರ್‌ ಗಳ ಸಂಸ್ಥಯಲ್ಲಿ ಆಯೋಜಿಸಿದ್ದ ಶ್ರೀ ಯೋಗಿನಾರೇಯಣ ಬಣಜಿಗ (ಬಲಿಜ) ಅಧ್ಯಕ್ಷ ಹಾಗೂ ನಿವೃತ್ತ ಎಂಜಿನಿಯರ್‌ ಎಂ.ನಾರಾಯಣ ಅವರ 90ನೇ ಜನ್ಮದಿನೋತ್ಸವ ಹಾಗೂ ಅಭಿನಂದನಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಮಹಾರಾಣಿ ಮೂರು ವಿಭಾಗಗಳಿಂದ ಪ್ರತಿವರ್ಷ 16,800 ಮಂದಿ ವಿದ್ಯಾರ್ಥಿನಿಯರು ಪ್ರವೇಶಾತಿ ಪಡೆಯುತ್ತಿದ್ದಾರೆ. ಹೀಗಾಗಿ ಸಾವಿರಾರು ಮಂದಿ ವಿದ್ಯಾರ್ಥಿನಿಯರು ವಿದ್ಯಾರ್ಥಿನಿಲಯಕ್ಕಾಗಿ ಪರದಾಡುವ ಸ್ಥಿತಿ ಇದೆ. ಸಮುದಾಯದಿಂದ 50 ಮಂದಿ ವಿದ್ಯಾರ್ಥಿನಿಯರಿಗೆ ಆಶ್ರಯ ನೀಡಿರುವುದು ಸ್ವಾಗತಾರ್ಹ. ಇನ್ನೂ 50 ಮಂದಿಗೆ ನೆರವಾಗುವ ವಿದ್ಯಾರ್ಥಿನಿಲಯ ಸ್ಥಾಪಿಸಿದರೆ ಅದಕ್ಕೆ ಅಗತ್ಯ ಸಹಕಾರ ನೀಡುವುದಾಗಿ ಹೇಳಿದರು.

ವಿದ್ಯಾರ್ಥಿ ಜೀವನದಲ್ಲಿ ಸಾಕಷ್ಟು ವಿದ್ಯಾರ್ಥಿನಿಲಯಗಳ ಗಲಾಟೆ ನೋಡಿದ್ದೇನೆ. ಆದರೆ, ಬಲಿಜ ವಿದ್ಯಾರ್ಥಿನಿಲಯದಲ್ಲಿ ಅಂತಹ ಯಾವುದೇ ಘಟನೆ ನಡೆಯದಿರುವುದಕ್ಕೆ ಇವರೇ ಕಾರಣ ಎಂಬುದು ಈಗ ತಿಳಿಯಿತು. 1955 ರಲ್ಲಿ ಈವರೆಗೂ ಶಿಸ್ತುಬದ್ಧವಾಗಿ ಇದ್ದಾರೆಂಬುದು ನನ್ನ ನಾರಾಯಣ ಅವರು 25 ವರ್ಷ ಸುಧೀರ್ಘವಾಗಿ ನಿರ್ವಹಣೆವಹಿಸಿಕೊಂಡು ಬಂದಿರುವುದು ಶ್ಲಾಘನೀಯ ಎಂದರು.

ಮನಸ್ಸು ಶುದ್ಧಿಯಾಗಿದ್ದರೆ ಇಂತಹ ಸಾರ್ಥಕ ಜೀವನ ಕಳೆಯಬಹುದು. ತಮ್ಮ ಕಾಯಕವನ್ನೇ ಕೇಂದ್ರೀಕರಿಸಿ ಸರ್ಕಾರಿ ಸೇವೆ ಸಲ್ಲಿಸಿ ಅನಂತರ ಸಮಾಜಕ್ಕೆ ತಮ್ಮದೇ ಆದ ಸೇವೆ ನೀಡುತ್ತಿರುವುದು ಸ್ವಾಗತಾರ್ಹ. ಇಂತಹವರ ಜೀವನ ನಮ್ಮೆಲ್ಲರಿಗೂ ಆದರ್ಶ ಎಂದು ಅವರು ಹೇಳಿದರು.

ನಮ್ಮ ತಂದೆ ಮೈಸೂರು ವಿವಿಯಲ್ಲಿ ಲೈಬ್ರರಿಯನ್‌ಆಗಿದ್ದರು. ಅವರ ಅಕಾಲಿಕ ಮರಣ ನಂತರ ಅನುಕಂಪ ಆಧಾರದ ಮೇಲೆ ಮೈಸೂರು ವಿವಿ ಕೆಲಸ ಸಿಕ್ಕಿತ್ತು. ಆಗ ವೆಂಕಟೇಶ್‌ ಅವರು ಸಿಂಡಿಕೇಟ್‌ಸದಸ್ಯರಾಗಿದ್ದರು. ಅವರ ವಿರುದ್ಧ ಚುನಾವಣ ಕೆಲಸ ಮಾಡಿದ್ದೆ, ಅವರು ಸದಸ್ಯರಾದ ಬಳಿಕ ಅವರ ವ್ಯಕ್ತಿತ್ವದ ಅರಿವಾಗಿ ಅವರ ಜತೆಯಾದೆ. ಇಂದು ನಾನೇನಾದರೂ ಕಲಿತು ಶಾಸಕನಾಗಿದ್ದರೆ ಅದಕ್ಕೆ ಮೈಸೂರು ವಿಶ್ವ ವಿದ್ಯಾನಿಲಯದಲ್ಲಿ ಇಂತಹ ವ್ಯಕ್ತಿತ್ವದವರೇ ಕಾರಣ ಎಂದು ಅವರು ಸ್ಮರಿಸಿದರು.

ಅರಗು ಮತ್ತು ಬಣ್ಣದ ಕಾರ್ಖಾನೆ ಮಾಜಿ ಅಧ್ಯಕ್ಷ ಎಚ್‌.ಎ. ವೆಂಕಟೇಶ್‌ಮಾತನಾಡಿ, ನಾರಾಯಣ ಅವರನ್ನು ಗೌರವಿಸುವುದು ನಮ್ಮ ಕರ್ತವ್ಯ. ಮನುಷ್ಯನ ಹುಟ್ಟು ಸಾವಿನ ನಡುವೆ ನಾವು ಮಾಡುವ ಕೆಲಸ ಬಹಳ ಮುಖ್ಯ ಆಗುತ್ತದೆ. ಕುಟುಂಬದವರಿಗೆ ಮಾಡುವುದು ಒಂದು ಕಡೆಯಾದರೆ, ಸಮಾಜದ ಬಗ್ಗೆ ಚಿಂತನೆ ಮಾಡುವುದು ಬಹಳ ಮುಖ್ಯವಾಗುತ್ತದೆ. ಎಲ್ಲಾ ಸಮಾಜದಲ್ಲಿಯೂ ನಾರಾಯಣರ ಆಪ್ತರಿದ್ದಾರೆ. ಬಹಳ ದೇವಾಲಯಗಳಿಗೆ ಆರ್ಥಿಕ ಸಹಾಯ ಮಾಡಿದ್ದಾರೆ. ಬಹಳ ಸ್ನೇಹಜೀವಿ ಆಗಿರುವ ಕಾರಣದಿಂದಲೇ ಮೂರನೇ ಬಾರಿಗೆ ಅಧ್ಯಕ್ಷರಾಗಿ ಮುಂದುವರೆದಿದ್ದಾರೆ. ಅವರ ನಾಯಕತ್ವದ ಗುಣದಿಂದಲೇ ಅವರು ಜನಮನ ಗೆದ್ದಿದ್ದಾರೆ. 1959ರಲ್ಲಿ ಬಹಳಷ್ಟು ಮಂದಿಗೆ ವಿದ್ಯಾರ್ಥಿ ನಿಲಯದಲ್ಲಿ ಪ್ರವೇಶ ನೀಡುವ ಮೂಲಕ ಅನೇಕ ನೆರವು ನೀಡಿದ್ದಾರೆ ಎಂದು ಅವರು ಸ್ಮರಿಸಿದರು.

ನಾವು ಓದುವ ಶಿಕ್ಷಣ ಸಂಸ್ಥೆ ಹಾಗೂ ನಾವು ಆಶ್ರಯ ಪಡೆಯುವ ವಿದ್ಯಾರ್ಥಿನಿಲಯ ನಮ್ಮ ಬದುಕು ರೂಪಿಸಿಕೊಳ್ಳುವ ಜಾಗ ದೇವಾಲಯ ಎಂದರೆ ತಪ್ಪಾಗಲಾರದು. 1958 ರಿಂದ ಸಾವಿರಾರು ಮಂದಿ ಅಲ್ಲಿಂದಲೇ ವಿದ್ಯಾಭ್ಯಾಸ ಕಲಿತು ಹೋಗಿದ್ದಾರೆ. 1955 ರಿಂದ 2025 ರವರೆಗೆ ಯಾರೆಲ್ಲಾ ಕೆಲಸ ಮಾಡಿದ್ದಾರೆ ಅವರೆಲ್ಲರನ್ನು ಸ್ಮರಿಸಬೇಕಿದೆ. ಇಷ್ಟು ವರ್ಷವಾದರೂ ಚುನಾವಣಾ ರಹಿತವಾಗಿ ಸಂಘ ನಡೆದಿದ್ದರೆ ಅದು ನಮ್ಮ ಸಂಘ ಎಂಬ ಹೆಗ್ಗಳಿಕೆ ಸಹ ಪಡೆದಿದೆ ಎಂದು ತಿಳಿಸಿದರು.

ಈ ವೇಳೆ ನಾರಾಯಣ ಅವರ ಹೆಸರಿನಲ್ಲಿ ಎಸ್ಸೆಸ್ಸೆಲ್ಸಿ- ಪಿಯುಸಿಯಲ್ಲಿ ಅತಿಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಗುವುದು. ಮೈಸೂರು ವಿವಿ ವಿಶ್ರಾಂತ ಪ್ರಾಧ್ಯಾಪಕ ಡಾ.ಎಸ್‌. ಶಿವರಾಜಪ್ಪ, ಹಿರಿಯ ಲೆಕ್ಕ ಪರಿಶೋಧಕ ಕೆ.ಎನ್‌. ಮೋಹನಕುಮಾರ್‌, ಚಾಮರಾಜನಗರ ನಗರಸಭಾ ಸದಸ್ಯ ಸಿ.ಜಿ. ಚಂದ್ರಶೇಖರ್‌, ಜಿ. ರಮೇಶ್‌, ಎಚ್‌.ಆರ್‌. ಗೋಪಾಲಕೃಷ್ಣ, ಚೆಲುವರಾಜು, ಕೆ. ಚಂದ್ರಶೇಖರ, ನಾಗರಾಜ, ಗೋವಿಂದರಾಜು, ಎಚ್‌.ಎಸ್‌. ಕೃಷ್ಣಪ್ಪ, ಎಚ್‌.ಕೆ. ಜಗನ್ನಾಥ್‌, ಜಿ. ವೇಣುಗೋಪಾಲ್‌, ಕೆ.ಎನ್‌. ವಿಜಯಕೊಪ್ಪ, ಕೆ.ಸಿ. ಪ್ರಕಾಶ್‌, ಬಿ.ಎಸ್‌. ಗುರುಮೂರ್ತಿ, ಬಿ.ಕೆ. ಸುರೇಶ್‌, ಎಚ್‌.ವಿ. ನಾಗರಾಜ, ಎನ್‌. ಹೇಮಂತಕುಮಾರ್‌, ಎಚ್‌.ಆರ್‌. ವೆಂಕಟೇಶ್‌, ಡಾ.ಟಿ. ರಮೇಶ್‌, ಡಾ.ಎಸ್‌. ಕೃಷ್ಣಪ್ಪ, ಗೋಪಾಲಕೃಷ್ಣ, ನಂಜಪ್ಪ, ಗಿರೀಶ್‌, ಚನ್ನಕೇಶವ, ಎಂ.ವಿ. ವೆಂಕಟೇಶ್‌, ಕೆ. ಜನಾರ್ಧನ, ಆರ್‌. ಪಾಂಡುರಂಗ, ಆರ್‌. ಬಾಲರಾಜು, ಎಂ. ನಾಗರಾಜು, ಟಿ.ಎಸ್‌. ರಮೇಶ್‌ಮತ್ತು ರಾಮಕೃಷ್ಣ ಇದ್ದರು.