ಸಾರಾಂಶ
ಡಾ. ಜಿ.ಶಂಕರ್ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ಅಜ್ಜರಕಾಡು ಇಲ್ಲಿನ ಐಕ್ಯೂಎಸಿ, ಗ್ರಾಮೀಣ ಅಭಿವೃದ್ಧಿ ಮತ್ತು ರಾಷ್ಟ್ರೀಯ ಸೇವಾ ಯೋಜನೆಯ ಸಹಯೋಗದಲ್ಲಿ ಎಚ್.ಐ.ವಿ. ಜಾಗೃತಿ ಕಾರ್ಯಗಾರ ನಡೆಯಿತು. ಕಾರ್ಯಾಗಾರದಲ್ಲಿ ಎಚ್.ಐ.ವಿ. ಪೀಡಿತರ ಪರ ಹೋರಾಟಗಾರ ಸಂಜೀವ ವಂಡ್ಸೆ ಏಡ್ಸ್ ಬಗ್ಗೆ ಮಾಹಿತಿ ನೀಡಿದರು.
ಕನ್ನಡಪ್ರಭ ವಾರ್ತೆ ಉಡುಪಿ
ಎಚ್.ಐ.ವಿ. ಎಂದರೆ ಏಡ್ಸ್ ಅಲ್ಲ, ಏಡ್ಸ್ ಎಂದರೆ ಸಾವು ಅಲ್ಲ. ಎಚ್.ಐ.ವಿ ಕುರಿತು ಜಾಗೃತಿ ಮತ್ತು ಅರಿವು ಇರಬೇಕು, ಎಚ್.ಐ.ವಿ. ಪೀಡಿತರ ಬಗೆಗಿನ ಕಾಳಜಿ, ಮತುವರ್ಜಿ ಮತ್ತು ಔಷಧಿಯ ಅಗತ್ಯವಿದೆ. ಇಂದಿನ ಯುವ ಜನತೆಯಲ್ಲಿ ಎಚ್.ಐ.ವಿ. ಕುರಿತು ಮಾಹಿತಿ ಇದೆ, ಆದರೆ ಅದನ್ನು ನಿರ್ಲಕ್ಷ್ಯಿಸುವುದರಿಂದ ಅದರ ಆಹುತಿಯಾಗುತ್ತಿದ್ದಾರೆ ಎಂದು ಎಚ್.ಐ.ವಿ. ಪೀಡಿತರ ಪರ ಹೋರಾಟಗಾರ ಸಂಜೀವ ವಂಡ್ಸೆ ಅಭಿಪ್ರಾಯಪಟ್ಟರು.ಅವರು ಡಾ. ಜಿ.ಶಂಕರ್ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ಅಜ್ಜರಕಾಡು ಇಲ್ಲಿನ ಐಕ್ಯೂಎಸಿ, ಗ್ರಾಮೀಣ ಅಭಿವೃದ್ಧಿ ಮತ್ತು ರಾಷ್ಟ್ರೀಯ ಸೇವಾ ಯೋಜನೆಯ ಸಹಯೋಗದಲ್ಲಿ ಆಯೋಜಿಸಲಾದ ಎಚ್.ಐ.ವಿ. ಜಾಗೃತಿ ಕಾರ್ಯಗಾರದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಉಡುಪಿ ಜಿಲ್ಲಾ ಏಡ್ಸ್ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಘಟಕದ ಅಧೀಕ್ಷಕ ಮಹಾಬಲೇಶ್ವರ ಮಾತನಾಡಿ, ಉಡುಪಿ ಜಿಲ್ಲೆಯಲ್ಲಿ ಏಡ್ಸ್ ಬಾಧಿತರ ಸಂಖ್ಯೆ ಇತರ ಜಿಲ್ಲೆಗಳಿಗೆ ಹೋಲಿಸಿದರೆ ಕಡಿಮೆ ಇದೆ. ಆದರೆ ಇದರಿಂದ ಸಂಪೂರ್ಣವಾಗಿ ಮುಕ್ತರಾಗಬೇಕಾದರೆ ಸಾರ್ವಜನಿಕರಲ್ಲಿ ಅರಿವು, ಜಾಗೃತಿಯ ಮತ್ತು ಇಚ್ಛಾಶಕ್ತಿಯ ಅಗತ್ಯ ಇದೆ ಎಂದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರು ಪ್ರೊ. ಭಾಸ್ಕರ್ ಶೆಟ್ಟಿ ಎಸ್. ವಹಿಸಿದ್ದರು. ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಘಟಕದ ನಾಯಕಿಯರಾದ ನೇಹಾ ಮತ್ತು ಪ್ರೀತಿ ಉಪಸ್ಥಿತರಿದ್ದರು. ರಾಷ್ಟ್ರೀಯ ಸೇವಾ ಯೋಜನೆ ಘಟಕ ೧ ದರ ಯೋಜನಾಧಿಕಾರಿ ಪ್ರೊ. ನಿಕೇತನ ಅತಿಥಿಗಳನ್ನು ಸ್ವಾಗತಿಸಿದರು. ಅಕ್ಷತಾ ದ್ವಿತೀಯ ಬಿಎ, ಕಾರ್ಯಕ್ರಮವನ್ನು ನಿರೂಪಿಸಿದರು. ರಾಷ್ಟ್ರೀಯ ಸೇವಾ ಯೋಜನೆ ಘಟಕ ೨ರ ಯೋಜನಾಧಿಕಾರಿ ವಿದ್ಯಾ ಡಿ. ವಂದಿಸಿದರು.
;Resize=(128,128))
;Resize=(128,128))
;Resize=(128,128))
;Resize=(128,128))