ಐಕನಹಳ್ಳಿ ಗ್ರಾಮದೇವತೆ ಜಾತ್ರೆ

| Published : Oct 24 2025, 01:00 AM IST

ಸಾರಾಂಶ

ಐಕನಹಳ್ಳಿ ಗ್ರಾಮದ ಅಧಿದೇವತೆ ಐಕನಹಳ್ಳಿ ಅಮ್ಮನವರ ದೇವಾಲಯದಲ್ಲಿ ಮೂಲ ವಿಶೇಷ ಪೂಜೆಯನ್ನು ನೆರವೇರಿಸಿದ ನಂತರ ಸುಂದರವಾಗಿ ಅಲಂಕೃತಗೊಂಡಿದ್ದ ಬಂಡಿರಥಕ್ಕೆ ಪೂಜೆ ಸಲ್ಲಿಸಿ, ಮೇಕೆ ಮರಿಯನ್ನು ಬಲಿ ಕೊಟ್ಟು ಬಂಡಿ ರಥವನ್ನು ಎಳೆದುಕೊಂಡು ಅಮ್ಮನವರ ಸನ್ನಿಧಾನಕ್ಕೆ ಹೋಗಲಾಯಿತು. ದೇವಸ್ಥಾನದ ಸುತ್ತ ಮೂರು ಸುತ್ತು ಪ್ರದಕ್ಷಣೆ ಮಾಡಿದ ನಂತರ ಸಿಡಿ ಉತ್ಸವಕ್ಕೆ ಚಾಲನೆ ನೀಡಲಾಯಿತು. ಗ್ರಾಮದಿಂದ ಬಂಡಿ ರಥವು ದೇವಾಲಯದ ಆವರಣಕ್ಕೆ ತಲುಪಿದ ನಂತರ ಭಕ್ತಾದಿಗಳ ಬಾಯಿ ಬೀಗ ತೆಗೆದ ನಂತರ ಸಿಡಿ ಜಾತ್ರೆ ಆರಂಭವಾಯಿತು. ಐಕನಹಳ್ಳಿ ಗ್ರಾಮದ ಭಕ್ತರು ಹಸಿರು ಬಂಡಿಯ ಮೂಲಕ ತಳಿಗೆಯನ್ನು ತಂದು ಅಮ್ಮನವರಿಗೆ ಅರ್ಪಿಸುತ್ತಾರೆ.

ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ

ತಾಲೂಕಿನ ಗಡಿ ಗ್ರಾಮವಾದ ಐಕನಹಳ್ಳಿ ಗ್ರಾಮ ದೇವತೆ ಐಕನಹಳ್ಳಿ ಅಮ್ಮನರವರ ಜಾತ್ರಾ ಮಹೋತ್ಸವ ಅತ್ಯಂತ ಶ್ರದ್ಧಾಭಕ್ತಿಯಿಂದ ನೆರವೇರಿತು.

ಐಕನಹಳ್ಳಿ ಗ್ರಾಮದ ಅಧಿದೇವತೆ ಐಕನಹಳ್ಳಿ ಅಮ್ಮನವರ ದೇವಾಲಯದಲ್ಲಿ ಮೂಲ ವಿಶೇಷ ಪೂಜೆಯನ್ನು ನೆರವೇರಿಸಿದ ನಂತರ ಸುಂದರವಾಗಿ ಅಲಂಕೃತಗೊಂಡಿದ್ದ ಬಂಡಿರಥಕ್ಕೆ ಪೂಜೆ ಸಲ್ಲಿಸಿ, ಮೇಕೆ ಮರಿಯನ್ನು ಬಲಿ ಕೊಟ್ಟು ಬಂಡಿ ರಥವನ್ನು ಎಳೆದುಕೊಂಡು ಅಮ್ಮನವರ ಸನ್ನಿಧಾನಕ್ಕೆ ಹೋಗಲಾಯಿತು. ದೇವಸ್ಥಾನದ ಸುತ್ತ ಮೂರು ಸುತ್ತು ಪ್ರದಕ್ಷಣೆ ಮಾಡಿದ ನಂತರ ಸಿಡಿ ಉತ್ಸವಕ್ಕೆ ಚಾಲನೆ ನೀಡಲಾಯಿತು.

ಸುತ್ತಮುತ್ತಲಿನ ಗ್ರಾಮಗಳಾದ ಐಕನಹಳ್ಳಿ, ತುಳಸಿ, ಭದ್ರನಕೊಪ್ಪಲು, ಐಕನಹಳ್ಳಿ ಕೊಪ್ಪಲು ಇತರೆ ಗ್ರಾಮದ ಸಾವಿರಾರು ಭಕ್ತರು ಹಾಗೂ ವಿವಿಧ ರಾಜ್ಯಗಳಲ್ಲಿ ನೆಲೆಸಿರುವ ಲಕ್ಷ್ಮೀದೇವಿ ಭಕ್ತರು ಇಲ್ಲಿಗೆ ಆಗಮಿಸುತ್ತಾರೆ. ಭಕ್ತರ ಇಷ್ಟಾರ್ಥಗಳನ್ನು ನೆರವೇರಿಸುವ ಐಕನಹಳ್ಳಿ ಅಮ್ಮನ ಶಕ್ತಿ ಅಪಾರವಾದದ್ದು, ಹುಚ್ಚಮ್ಮರ ಪಂಗಡದವರಿಂದ ಜಾತ್ರಾ ಮಹೋತ್ಸವದ ಈ ವರ್ಷದ ಸಂಪೂರ್ಣ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ಗ್ರಾಮದಿಂದ ಬಂಡಿ ರಥವು ದೇವಾಲಯದ ಆವರಣಕ್ಕೆ ತಲುಪಿದ ನಂತರ ಭಕ್ತಾದಿಗಳ ಬಾಯಿ ಬೀಗ ತೆಗೆದ ನಂತರ ಸಿಡಿ ಜಾತ್ರೆ ಆರಂಭವಾಯಿತು. ಐಕನಹಳ್ಳಿ ಗ್ರಾಮದ ಭಕ್ತರು ಹಸಿರು ಬಂಡಿಯ ಮೂಲಕ ತಳಿಗೆಯನ್ನು ತಂದು ಅಮ್ಮನವರಿಗೆ ಅರ್ಪಿಸುತ್ತಾರೆ.

ಬಲಿಪಾಡ್ಯಮಿ ದಿನದಂದು ನಡೆಯುವ ಐಕನಹಳ್ಳಿ ಅಮ್ಮ ಜಾತ್ರೆ ಮಹೋತ್ಸವ ತುಂಬಾ ಸಂಭ್ರಮ ಸಡಗರದಿಂದ ಸಂಪನ್ನಗೊಂಡಿತು.