ಸಾರಾಂಶ
ದಾಬಸ್‌ಪೇಟೆ: ಜಿಂದಾಲ್ ಸಿಟಿ ಪ್ರೆಸ್ಟೀಜ್ ಅಪಾರ್ಟ್‍ಮೆಂಟ್‌ನ 24ನೇ ಅಂತಸ್ತಿನ ಮೇಲಿಂದ ಕೆಳಗೆ ಬಿದ್ದು ಏರ್ ಪೋರ್ಸ್ ಯುವ ಇಂಜಿನಿಯರ್ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಅಪಾರ್ಟ್‍ಮೆಂಟ್ ಮೇಲಿಂದ ಕೆಳಗೆ ಬೀಳುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ಆಂಧ್ರಪ್ರದೇಶದ ಕಡಪ ಮೂಲದ ಲೋಕೇಶ್ ಪವನ್ ಕೃಷ್ಣ (25) ಆತ್ಮಹತ್ಯೆ ಮಾಡಿಕೊಂಡ ಯುವಕ. ಈತ ಏರ್‌ಪೋರ್ಸ್ ನಲ್ಲಿ ಕಳೆದ 2 ವರ್ಷದಿಂದ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದು, ಬೆಂಗಳೂರಿನ ಹಲಸೂರು ಮಿಲಿಟರಿ ಕ್ವಾರ್ಟಸ್ ನಲ್ಲಿ ವಾಸವಿದ್ದನು ಎನ್ನಲಾಗಿದೆ. ಸೆ.14ರ ಸಂಜೆ ವಿಶ್ರಾಂತಿಗೆಂದು ಅಕ್ಕ ಲಕ್ಷ್ಮೀ ಮನೆಗೆ ಬಂದಿದ್ದ ಲೋಕೇಶ್ ಬೆಳ್ಳಂಬೆಳಿಗ್ಗೆ 4 ಗಂಟೆ ಸುಮಾರಿಗೆ ಅಪಾರ್ಟ್‍ಮೆಂಟ್ ನ 24ನೇ ಪ್ಲೋರ್ ಮೇಲಿಂದ ಕೆಳಗೆ ಬಿದ್ದು ಆತ್ಮಹತ್ಯೆಗೆ ಶರಣಾಗಿದ್ದಾನೆ.ಘಟನಾ ಸ್ಥಳಕ್ಕೆ ಮಾದನಾಯನಹಳ್ಳಿ ಪೊಲೀಸರು ಬೇಟಿ ನೀಡಿ ವಿಚಾರಣೆ ವೇಳೆ ಹಲವು ದಿನಗಳಿಂದ ಲೋಕೇಶ್ ಸರಿಯಾಗಿ ಊಟ ಮಾಡುತ್ತಿರಲಿಲ್ಲ. ಇದರಿಂದ ಮಾನಸಿಕ ಖಿನ್ನತೆಗೊಳಗಾಗಿ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಕುಟುಂಬಸ್ಥರು ತಿಳಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.